ಬಂಟ್ವಾಳ

ವಿದ್ಯುತ್ ಬಿಲ್ ಕಟ್ಟಲು ಇನ್ನು ಮೆಸ್ಕಾಂ ಹೊಸ ಕಚೇರಿಗೆ ಬನ್ನಿ

ಇದುವರೆಗೆ ಬಿ.ಸಿ.ರೋಡಿನ ಕೈಕಂಬದಲ್ಲಿ ತಾತ್ಕಾಲಿಕವಾಗಿ ಕಾರ್ಯಾಚರಿಸುತ್ತಿದ್ದ ಮೆಸ್ಕಾಂ ಕಚೇರಿ ಇನ್ನು ಮುಂದೆ ಬಿ.ಸಿ.ರೋಡಿನ ನೂತನ ಕಟ್ಟಡಕ್ಕೆ ಮಂಗಳವಾರದಿಂದ ಕಾರ್ಯಾಚರಿಸಲಿದೆ.

ತಳಮಹಡಿಯಲ್ಲಿ ಸೆಕ್ಷನ್ ಆಫೀಸ್ ಮತ್ತು ಉಗ್ರಾಣ, ನೆಲಮಹಡಿಯಲ್ಲಿ ನಂ.1 ಉಪವಿಭಾಗ ಕಚೇರಿ ಮತ್ತು ಎಲ್.ಟಿ.ರೇಟಿಂಗ್ ಉಪವಿಭಾಗ, ಒಂದನೇ ಮಹಡಿಯಲ್ಲಿ ನಂ.2 ಉಪವಿಭಾಗ, ಎಚ್.ಟಿ.ರೇಟಿಂಗ್ ಉಪವಿಭಾಗ, ಎರಡನೇ ಮಹಡಿಯಲ್ಲಿ ವಿಭಾಗೀಯ ಕಚೇರಿ, ಕಾರ್ಯನಿರ್ವಾಹಕ ಎಂಜಿನಿಯರ್ ಅವರ ಕಚೇರಿ ಇರುತ್ತದೆ. ಇವುಗಳಲ್ಲಿ ಮಂಗಳವಾರದಿಂದ ವಿಭಾಗೀಯ ಮತ್ತು ಉಪವಿಭಾಗೀಯ ಕಚೇರಿಗಳು ಕಾರ್ಯನಿರ್ವಹಿಸಲಿದ್ದು, ಉಳಿದ ಕಚೇರಿಗಳು ನ.2ರಿಂದ ಕಾರ್ಯಾಚರಿಸಲಿವೆ. ಮಂಗಳವಾರದಿಂದಲೇ ವಿದ್ಯುತ್ ಬಿಲ್ ಪಾವತಿಗೆ ಸಂಬಂಧಿಸಿ ಎಟಿಪಿ ಸಹಿತ ಕಚೇರಿಯಲ್ಲಿ ಬಿಲ್ ಸ್ವೀಕೃತಿ ಕೇಂದ್ರ ಕಾರ್ಯಾಚರಿಸಲಿವೆ ಎಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನಾರಾಯಣ ಭಟ್ ಬಂಟ್ವಾಳ ನ್ಯೂಸ್ ಗೆ ತಿಳಿಸಿದ್ದಾರೆ.

ಎಟಿಪಿ ತಳಮಹಡಿಯಲ್ಲಿದ್ದರೆ, ವಿದ್ಯುತ್ ಬಿಲ್ ಕಟ್ಟಲು ನೆಲಮಹಡಿಯಲ್ಲಿರುವ ಕಚೇರಿಯನ್ನು ಗ್ರಾಹಕರು ಸಂಪರ್ಕಿಸಬಹುದು ಎಂದು ಮೆಸ್ಕಾಂ ಎಇಇ ತಿಳಿಸಿದ್ದಾರೆ.

ಗ್ರಾಹಕರು ಎಟಿಪಿಗಳ ಮೂಲಕ ಹಾಗೂ ನೆಲಮಹಡಿಯಲ್ಲಿರುವ ಕಚೇರಿ ಕೌಂಟರ್ ಮೂಲಕ ವಿದ್ಯುತ್ ಬಿಲ್ ಅನ್ನು ನೂತನ ಮೆಸ್ಕಾಂ ಕಟ್ಟಡದಲ್ಲಿ ಪಾವತಿಸಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts