ಸಂಪೂರ್ಣ ಪರಿಸರವನ್ನೇ ಹಾಳುಗೆಡಹುತ್ತಿರುವ ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸದ ಹೊರತು ಈ ಭೂಮಿಯನ್ನುಸುಸ್ಥಿ ತಿಯಲ್ಲಿಡುವುದು ಕಷ್ಟ ಸಾಧ್ಯ ಎಂದು ಎಂದು ಪಾಣೆಮಂಗಳೂರು ಎಸ್.ಎಲ್.ಎನ್.ಪಿ. ಆಂಗ್ಲಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ರಮಾ ಎಸ್ ಭಂಡಾರಿಯವರು ತಿಳಿಸಿದರು.
ಪಾಣೆಮಂಗಳೂರು ಎಸ್.ಎಲ್.ಎನ್.ಪಿ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ಲಾಸ್ಟಿಕ್ ಮುಕ್ತ ಪರಿಸರ ಅನ್ನುವ ವಿಚಾರದ ಕುರಿತು ನಡೆದ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ನಿವೃತ್ತ ಪ್ರಾಧ್ಯಾಪಕ ಶ್ರೀ ರಾಜಮಣಿ ರಾಮಕುಂಜ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ಈ ಸಂದರ್ಭ ಪ್ಲಾಸ್ಟಿಕ್ ಮುಕ್ತ ಪರಿಸರ ಘೋಷಣೆಯೊಂದಿಗೆ ಶಿಕ್ಷಕ ಶಿಕ್ಷಕಿಯರು ಹಾಗೂ ವಿದ್ಯಾರ್ಥಿ ವೃಂದ ಪರಿಸರ ಸ್ವಚ್ಛಗೊಳಿಸುವ ಸಂಕಲ್ಪತೊಟ್ಟರು.