ಬಂಟ್ವಾಳ

ಡಾ. ಹೆಗ್ಗಡೆ ಅವರ ಸೇವೆ ಶ್ಲಾಘನೀಯ: 108 ಮುನಿಶ್ರೀ ವೀರಸಾಗರ ಮಹಾರಾಜ

www.bantwalnews.com

ಜಾಹೀರಾತು

ಪರಮ ಪೂಜ್ಯ ಶಾಂತ ಮೂರ್ತಿ ವಾತ್ಸಲ್ಯ ರತ್ನಾಕರ ಆಚಾರ್ಯ ಶ್ರೀ 108 ಸನ್ಮತಿ ಸಾಗರ ಮಹಾರಾಜರ ಶಿಷ್ಯರಾದ, ಪರಮ ಪೂಜ್ಯ 108 ಮುನಿ ಶ್ರೀ ವೀರ ಸಾಗರ ಮಹಾರಾಜರು ಪಾಣೆಮಂಗಳೂರು ಶ್ರೀ 1008 ಅನಂತನಾಥ ಸ್ವಾಮಿ ಜಿನಚೈತ್ಯಾಲಯದಲ್ಲಿ ಚಾತುರ್ಮಾಸ ವ್ರತಾಚರಣೆ ಕೈಗೊಂಡ ಹಿನ್ನೆಲೆಯಹಲ್ಲಿ ಚಾತುರ್ಮಾಸ ಕಲಶ ವಿಸರ್ಜನೆ ಮತ್ತು ಪಿಂಚಿ ಪರಿವರ್ತನೆ ಕಾರ್ಯಕ್ರಮ ಶನಿವಾರ ಸಂಜೆ ಪಾಣೆಮಂಗಳೂರಿನಲ್ಲಿ ನಡೆಯಿತು.

ಇದಕ್ಕೂ ಮುನ್ನ ಮೆರವಣಿಗೆ ನಡೆಯಿತು. ಬಳಿಕ ಚಾತುರ್ಮಾಸ ಕಲಶ ವಿಸರ್ಜನೆಯ ಸಮಾರೋಪ ಸಮಾರಂಭ, ಸಂಸ್ಕಾರ ಮಂಜೂಷ ಶಾಸ್ತ್ರ ಬಿಡುಗಡೆ ನಡೆಯಿತು. ಅದಾದ ಬಳಿಕ ಮುನಿಶ್ರೀ ೧೦೮ ವೀರಸಾಗರ ಮುನಿ ಮಹಾರಾಜರಿಂದ ಕಲಶ ವಿಸರ್ಜನೆ ನಡೆಯಿತು. ಭಕ್ತಾಭಿಮಾನಿಗಳಿಂದ ಪಿಂಚಿ ಪರಿವರ್ತನೆ, ಶಾಸ್ತ್ರದಾನ, ಪಾದ ಪೂಜೆ, ಜಪಸರ ದಾನ ನಡೆದವು.

ಜಾಹೀರಾತು

ಈ ಸಂದರ್ಭ ಮುನಿಶ್ರೀಗಳು ಮೊದಲನೇ ಕಲಶವನ್ನು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಅರ್ಪಿಸಿದರು. ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಕಳೆದ ೫೦ ವರ್ಷಗಳಿಂದ ಪೀಠದಲ್ಲಿದ್ದು, ಎಲ್ಲ ಧರ್ಮೀಯರಿಗೂ ಸಹಾಯ ಮಾಡುತ್ತಿದ್ದಾರೆ ಎಂದು ಈ ಸಂದರ್ಭ ಹೇಳಿದರು. ಧರ್ಮಸ್ಥಳದ ಪರವಾಗಿ ಅನಿತಾ ಸುರೇಂದ್ರ ಕುಮಾರ್ ಕಲಶ ಸ್ವೀಕರಿಸಿದರು.

ಪಿಂಛಿಪ್ರದಾನ ಸಮಾರಂಭದಲ್ಲಿ ಸುಮಲತಾ ಪಡಂಗಡಿ ಮುನಿಶ್ರೀಗಳಿಂದ ಪಿಂಛಿಯನ್ನು ಸ್ವೀಕರಿಸಿದರು. ಇದೇ ವೇಳೆ ಚಾತುರ್ಮಾಸ ಸಮಿತಿಯ ರತ್ನಾಕರ್ ಜೈನ್ ಮಂಗಳೂರು, ಸುದರ್ಶನ್ ಜೈನ್, ಧರಣೇಂದ್ರ ಇಂದ್ರ, ಭುವನೇಂದ್ರ ಇಂದ್ರ, ಸುಭಾಷ್ ಚಂದ್ರ ಜೈನ್, ಹರ್ಷರಾಜ್ ಬಲ್ಲಾಳ್, ದೀಪಕ್ ಇಂದ್ರ, ಕೆ. ಪ್ರವೀಣ್ ಕುಮಾರ್, ಆದಿರಾಜ್ ಜೈನ್, ಭರತ್ ರಾಜ್, ಬ್ರಿಜೇಶ್ ಜೈನ್ ಸಹಿತ ಸದಸ್ಯರನ್ನು ಮುನಿಶ್ರೀಗಳು ಅಭಿನಂದಿಸಿದರು.

ಮುನಿಶ್ರೀ ಪಾದಾರ್ಪಣೆಯಿಂದ ಬಂಟ್ವಾಳದಲ್ಲಿ ಶಾಂತಿ: ರೈ

ಜಾಹೀರಾತು


ಮುಖ್ಯ ಅತಿಥಿಗಳಾಗಿ ಮಾತನಾಡಿದ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಮುನಿಶ್ರೀಗಳ ಪಾವನ ಸಾನಿಧ್ಯದಿಂದ ಬಂಟ್ವಾಳ ಪರಿಸರದಲ್ಲಿ ಶಾಂತಿ, ನೆಮ್ಮದಿ ನೆಲೆಸುವಂತಾಗಿದೆ. ದ್ವೇಷದ ಭಾವನೆ ಜನರಲ್ಲಿ ತೊಲಗಿದೆ, ಪ್ರೀತಿಯನ್ನು ಸಮಾಜಕ್ಕೆ ಹಂಚುವ ಜೈನಧರ್ಮದ ಸಾರವನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದು ರೈ ಹೇಳಿದರು. ಇದೇ ವೇಳೆ ಮುನಿಶ್ರೀಗಳ ವಿಹಾರ ಸಂದರ್ಭ ಉಳಿದುಕೊಳ್ಳುವ ವ್ಯವಸ್ಥೆಯನ್ನು ಎಲ್ಲ ಕಾಲದಲ್ಲೂ ಒದಗಿಸಲು ಸರಕಾರ ಮೂಲಕ ಪ್ರಯತ್ನಿಸುವುದಾಗಿ ರೈ ಹೇಳಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎನ್.ರಾಜೇಂದ್ರ ಕುಮಾರ್, ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಮೂಡುಬಿದಿರೆ ಜೈನಮಠದ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಧರ್ಮಸ್ಥಳದ ಅನಿತಾ ಸುರೇಂದ್ರ ಕುಮಾರ್, ಬಸದಿ ಮೊಕ್ತೇಸರ ಸಂಪತ್ ಕುಮಾರ್, ರತ್ನಾಕರ ಜೈನ್, ಸುದರ್ಶನ ಜೈನ್, ಧರಣೇಂದ್ರ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ನವಿತಾ ಜೈನ್ ಮತ್ತು ಶಿವಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ