ಜಾಗ್ರತೆ..ಇದು ರಾಷ್ಟ್ರೀಯ ಹೆದ್ದಾರಿ 75ರ ತುಂಬೆ. ಓಡಾಡುವಾಗಲೆಲ್ಲ ಎಚ್ಚರಿಸುವುದು ಸಾಮಾನ್ಯ. ಆದರೆ ತುಂಬೆಯಲ್ಲಿ ಶಾಲಾ ಮಕ್ಕಳು ಓಡಾಡುವ ಜಾಗವೇ ಅಪಾಯದಿಂದ ಕೂಡಿದೆ.
ಚಿತ್ರಗಳನ್ನು ನೋಡಿದರೆ ಯಾವುದು ಎಷ್ಟು ಅಪಾಯಕಾರಿ ಎಂಬುದು ಗೊತ್ತಾಗುತ್ತದೆ.
ಏನೆಲ್ಲ ಅಪಾಯ? ಇಲ್ಲಿ ನೋಡಿ.
ಇದು ಗಂಭೀರವಾದ ಸಮಸ್ಯೆ ಎನ್ನುವ ಅರಿವು ನಮಗಿದೆ. ಹಾಗಾಗಿ ಸಮಸ್ಯೆಯನ್ನು ಪರಿಹರಿಸುವ ಬಗ್ಗೆ ನಾವು ಈಗಾಗಲೇ ಕ್ರಮ ಕೈಗೊಂಡಿದ್ದೇವೆ. ಓವರ್ ಬ್ರಿಡ್ಜ್‌ನ ನಿರ್ವಹಣೆಗಾಗಿ ಪ್ರೊಪೋಸಲ್ ಕಳುಹಿಸಿದ್ದು ಅದು ಆದಷ್ಟು ಬೇಗ ಕಾರ್ಯರೂಪಕ್ಕೆ ಬರುತ್ತದೆ. ಆ ನಂತರ ಓವರ್ ಬ್ರಿಡ್ಜ್‌ನ ಸ್ಥಿತಿ ಸಂಪೂರ್ಣ ಸುಧಾರಣೆಯಾಗುತ್ತದೆ. ಅದೇ ರೀತಿ ಚರಂಡಿ ಕಾಮಗಾರಿಗೂ ಟೆಂಡರ್ ಕರೆದಿದ್ದೇವೆ. ಆದಷ್ಟು ಬೇಗ ಅಪೂರ್ಣವಾಗಿರುವ ಕಾಮಗಾರಿಯನ್ನು ಪೂರ್ಣಗೊಳಿಸಿ ಹೆದ್ದಾರಿಯ ತೊಂದರೆಯನ್ನು ದೂರ ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇವೆ. ಜನರ ಸಮಸ್ಯೆಗೆ ನಾವು ಸದಾ ಸ್ಪಂದಿಸುತ್ತೇವೆ ಎನ್ನುತ್ತಾರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇಂಜಿನಿಯರ್.
| ಸಾಹಿತ್ಯದಿಂದ ಸಾಮರಸ್ಯ ಆಶಯ | ಎರಡು ದಿನ ವಿಚಾರ ಮಂಡನೆ, ಸಾಂಸ್ಕೃತಿಕ ಕಾರ್ಯಕ್ರಮ (more…)