ವ್ಯಂಗ್ಯನೋಟ

ಬಂಟ್ವಾಳನ್ಯೂಸ್ ನಲ್ಲಿ – ವ್ಯಂಗ್ಯನೋಟ

www.bantwalnews.com

ಆರಂಭವಾಗಿ ಒಂದು ವರ್ಷ ಸಮೀಪಿಸುತ್ತಿದ್ದಂತೆ ಬಂಟ್ವಾಳನ್ಯೂಸ್ www.bantwalnews.com  ನಲ್ಲಿ ಮತ್ತೊಂದು ವಿಭಾಗ ಆರಂಭಗೊಳ್ಳುತ್ತಿದೆ. ಅದು ವ್ಯಂಗ್ಯನೋಟ. ಇದಕ್ಕೆ ಪ್ರೇರಣೆ ನೀಡಿದವರು ಅಮೇರಿಕಾದಲ್ಲಿ ನೆಲೆಸಿದ್ದು, ಪ್ರತಿದಿನ ಬಂಟ್ವಾಳನ್ಯೂಸ್ ಮೂಲಕ ಊರಿನ ಸಮಾಚಾರವನ್ನೆಲ್ಲ ಓದುತ್ತಾ ಪ್ರೋತ್ಸಾಹಿಸುತ್ತಿರುವ ಮುಕೇಶ್ ರಾವ್. ಮೂಲತ: ಬಂಟ್ವಾಳದವರಾದ ಅವರು, ಹವ್ಯಾಸಿ ವ್ಯಂಗ್ಯಚಿತ್ರಕಾರರೂ ಹೌದು. ಇನ್ನು ಮುಂದೆ ಆಗಾಗ್ಗೆ ಮುಕೇಶ್ ಅವರ ವ್ಯಂಗ್ಯನೋಟಗಳನ್ನು ಬಂಟ್ವಾಳನ್ಯೂಸ್ ( www.bantwalnews.com ) ನಲ್ಲಿ ಕಾಣಬಹುದು.

ಅಷ್ಟೇ ಅಲ್ಲ, ಕಾರ್ಟೂನ್ ಬರೆಯುವವರಿಗೂ ಬಂಟ್ವಾಳನ್ಯೂಸ್ ನಲ್ಲಿ ಮುಕ್ತ ಅವಕಾಶ. ನೀವು ಮಾಡಬೇಕಾದ್ದೀಷ್ಟೇ. ರಚಿಸಿದ ವ್ಯಂಗ್ಯಚಿತ್ರಗಳನ್ನು ನಮ್ಮ ವಿಳಾಸಕ್ಕೆ ಈ ಮೈಲ್ ಮಾಡಿರಿ. (ನೆನಪಿಡಿ: ಯಾವ ಜಾತಿ, ಧರ್ಮ, ವ್ಯಕ್ತಿ, ಸಿದ್ಧಾಂತಗಳ ಮನನೋಯಿಸುವ ಕಾರ್ಟೂನ್ ಗಳಿಗೆ ಇಲ್ಲಿ ಜಾಗವಿಲ್ಲ) ನಮ್ಮ ಇ ಮೈಲ್ ವಿಳಾಸ ಹೀಗಿದೆ: bantwalnews@gmail.com

 

ವ್ಯಂಗ್ಯಚಿತ್ರಕಾರರ ಕುರಿತು:

ಮುಕೇಶ್ ರಾವ್

ಬಂಟ್ವಾಳದವರಾದ ಮುಕೇಶ್ ರಾವ್ ಸದ್ಯ ಯು.ಎಸ್.ಎ.ಯ Seattle ನಲ್ಲಿ ವೃತ್ತಿ ಸಂಬಂಧವಾಗಿ ನೆಲೆಸಿದ್ದಾರೆ. ಎಸ್.ವಿ.ಎಸ್. ವಿದ್ಯಾಗಿರಿ, ಎಸ್.ವಿ.ಎಸ್. ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಪಡೆದ ಬಳಿಕ ಆರ್.ವಿ. ಕಾಲೇಜಿನಲ್ಲಿ ಇಂಜಿನಿಯರಿಂಗ್ ಮುಗಿಸಿ ಉದ್ಯೋಗವನ್ನರಸಿ ತೆರಳಿದ್ದು ಯು.ಎಸ್.ಎ.ಗೆ
3ನೇ ವಯಸ್ಸಿನಲ್ಲಿ ಮನೆಯ ನೆಲದ ಮೇಲೆ ಅಜ್ಜನ ಜೊತೆ ಬಸ್ಸು ಕಾರುಗಳ ಚಿತ್ರಗಳನ್ನು ಬರೆಯಲು ಪ್ರಾರಂಭಿಸಿದ್ದ ಮುಕೇಶ್ ಗೆ ಚಿತ್ರ  ಬಿಡಿಸುವುದು ಎಂದರೆ ಪಂಚಪ್ರಾಣ. ಇದಲ್ಲದೆ ಪುಸ್ತಕಗಳನ್ನು ಓದುವುದು, ಹೊರಾಂಗಣ ಆಟಗಳನ್ನಾಡುವುದು, ಪ್ರಪಂಚ ಪರ್ಯಟನೆ ಇತರ ಹವ್ಯಾಸಗಳು. ಅವರ ಸಂಪರ್ಕ:
Cartoon by Mukesh Rao
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Share
Published by
Harish Mambady