ಕಲ್ಲಡ್ಕ

ಕಲ್ಲಡ್ಕ ಶ್ರಿರಾಮ ವಿದ್ಯಾಕೇಂದ್ರಕ್ಕೆ ಚಿತ್ರನಟಿ ಅಮೂಲ್ಯ ಭೇಟಿ

www.bantwalnews.com

ಚಿತ್ರನಟಿ ಅಮೂಲ್ಯ ಹಾಗೂ ಅವರ ಪತಿ, ಉದ್ಯಮಿ ಜಗದೀಶ್ ಮತ್ತು ಬೆಂಗಳೂರು ಸಹಿತ ರಾಜ್ಯದ ನಾನಾ ಭಾಗಗಳ ಉದ್ಯಮಿಗಳು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಗುರುವಾರ ಭೇಟಿ ನೀಡಿದರು.


ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಗುರುವಾರ ವಸುಧಾರಾ ಗೋಶಾಲೆಯಲ್ಲಿ ನಡೆದ ಗೋಪೂಜೆ, ಶಿಶುಮಂದಿರದ ಸೀತಾ ಕುಟೀರ ಉದ್ಘಾಟನೆ, ಮಹೇಂದ್ರ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದರು.


ಅಮೂಲ್ಯ ಅವರ ಪತಿ ಉದ್ಯಮಿ ಜಗದೀಶ್ ,ಬೆಂಗಳೂರು ಲಹರಿ ಕಂಪೆನಿಯ ಮಾಲಕ ಜಿ.ವೇಲು, ಉದ್ಯಮಿ ರಾಮಚಂದ್ರ , ಬೆಂಗಳೂರು ಮಹಿಳಾ ಮೋರ್ಚಾದ ಅದ್ಯಕ್ಷೆ ಸುನೀತಾ ಮಂಜುನಾಥ, ಮೈಸೂರಿನ ಸುಬ್ರಹ್ಮಣ್ಯ ತಂತ್ರಿ, ಎಸ್.ಸಿ. ಮೋರ್ಚಾದ ಉಪಾಧ್ಯಕ್ಷ ಮುರಳಿ ಮೋಹನ್, ವಕೀಲರಾದ ಗಿರೀಶ್, ಹಾಲೂರಿನ ಪತ್ರಕರ್ತ ಎಚ್.ವಿ. ಪೃಥ್ವಿ , ಬ್ಯಾಡಗಿ ಕ್ಷೇತ್ರದ ಬಿಜೆಪಿ ಮುಖಂಡ ಬಾಲಚಂದ್ರ ಎಸ್ ಪಾಟೀಲ. ಸಕಲೇಶಪುರದ ಬಿಜೆಪಿ ಮುಂಖಂಡ ಹೇಮಂತ್ ಕುಮಾರ್, ಬಿಜಾಪುರದ ಪಿ.ಎಸ್.ಐ ಮಹೇಂದ್ರ ನಾಯಕ್, ತಿಪಟೂರು ಕ್ಷೇತ್ರದ ಬಿಜೆಪಿ ಮುಖಂಡ ಕೆ.ಟಿ. ಶಾಂತಕುಮಾರ್, ದಾರವಾಡದ ಮಾಜಿ ಮೇಯರ್ ಶಿವು ಹಿರೆಮಠ, ಶಿವರೂರು ಪಿ.ಎಲ್.ಡಿ ಬ್ಯಾಂಕ್‌ನ ಅಧ್ಯಕ್ಷ ಶಿವಯೋಗಿ, ದಿನಕರ ಜೋಶಿ, ನಿಕೇಶ್ ಸಕಲೇಶಪುರ, ಆರ್ ಎಸ್.ಎಸ್ ನ ಸುನಿಲ್ ಕುಲಕರ್ಣಿ, ಮೈಸೂರು ಹೋಟೆಲ್ ಮಾಲಕರ ಸಂಘದ ಅಧ್ಯಕ್ಷ ನಾರಾಯಣ ಗೌಢ , ಮಂಗಳೂರು ವಿಕಾಸ ಕಾಲೇಜಿನ ಸಲಹೆಗಾರ ಅನಂತ ಪ್ರಭು ಜಿ, ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದ ಅಧ್ಯಕ್ಷ ನಾರಾಯಣ ಸೋಮಾಯಾಜಿ, ಸಂಚಾಲಕ ವಸಂತ ಮಾದವ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಮತ್ತಿತರರು ಉಪಸ್ಥಿತರಿದ್ದರು. ಆಶಾ ಪ್ರಸಾದ್ ರೈ ಸ್ವಾಗತಿಸಿ, ಮಲ್ಲಿಕಾ ಶೆಟ್ಟಿ ವಂದಿಸಿದರು. ವಾರಿಜ ನಿರೂಪಿಸಿದರು.

ಬೆಂಗಳೂರಿಗೂ ಬೇಕು ಸಂಸ್ಕಾರಯುತ ಶಿಕ್ಷಣ:

ವೀಕ್ಷಣೆ ಬಳಿಕ ಸಭಾ ಕಾರ್ಯಕ್ರಮ ನಡೆಯಿತು. ಕೃಷಿ ಪರಂಪರೆಯನ್ನು ಹಾಗೂ ಸಾಂಸ್ಕೃತಿಕ ಪುನರುತ್ಥಾನವನ್ನು ಮಾಡುವ ಕೆಲಸವನ್ನು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ, ಬೆಂಗಳೂರಿಗೂ ಸಂಸ್ಕಾರಯುತ ಶಿಕ್ಷಣ ಅಗತ್ಯವಿದೆ ಎಂದರು ಅಮೂಲ್ಯ.


ಐದು ಕ್ವಿಂಟಲ್ ಅಕ್ಕಿ ಬೆಳೆದಿದ್ದೇವೆ:

ಸಾಧನೆಯನ್ನು ಮಾಡುವ ವಿಧ್ಯಾರ್ಥಿಗಳನ್ನು ತಯಾರು ಮಾಡುವ ಶಿಕ್ಷಣ ಸಂಸ್ಥೆಗಳು ಬೇಕಾಗಿದೆ. ಮಗುವನ್ನು ಧರ್ಮ ಸಂಸ್ಕ್ರತಿಯ ಜೊತೆಗೆ ಪರಿವರ್ತನೆ ಮಾಡುವ ಕೆಲಸ ಶಿಕ್ಷಣ ಈ ಸಂಸ್ಥೆಯಿಂದ ಮಾಡಲಾಗುತ್ತಿದೆ. ಮಣ್ಣಿನ ಸತ್ವವನ್ನು ಮತ್ತು ಜೀವನದ ಉದ್ದೇಶವನ್ನು ತಿಳಿಸುವ ವಿಶಿಷ್ಠವಾದ ಶಿಕ್ಷಣವನ್ನು ವಿದ್ಯಾಕೇಂದ್ರದಲ್ಲಿ ನೀಡಲಾಗುತ್ತಿದೆ. ಸರಕಾರದಲ್ಲಿ ಮತ್ತೆ ಅನ್ನಕ್ಕಾಗಿ ಭಿಕ್ಷೆ ಬೇಡುವ ಕೆಲಸಕ್ಕೆ ಹೋಗುವುದಿಲ್ಲ. ಈ ದೇಶದ ಮಣ್ಣಿನ ಸಂಸ್ಕ್ರತಿ, ಚಿಂತನೆ, ಅಧಾರದ ಮೇಲೆ ಸ್ವಾಭಿಮಾನದಿಂದ ಬದುಕುವುದನ್ನು ಸಂಸ್ಥೆ ಕಲಿಸಿಕೊಡುತ್ತದೆ, ಐದು ಕಿಂಟ್ವಾಲ್ ಅಕ್ಕಿ ಈ ಬಾರಿ ಶಾಲೆಯ ಗದ್ದೆಯಲ್ಲಿ ಬೆಳೆಯಲಾಗಿದೆ ಅ ಮೂಲಕ ಅನ್ನ ಕಸಿದ ಸರ್ಕಾರಕ್ಕೆ ಸಂದೇಶ ನೀಡಲಾಗಿದೆ ಎಂದರು ಪುತ್ತೂರು ವಿವೇಕಾನಂದ ಕಾಲೇಜಿನ ವಿದ್ಯಾವರ್ಧಕ ಸಂಘದ ಅದ್ಯಕ್ಷ ಡಾ.ಪ್ರಭಾಕರ ಭಟ್.

 

READ THIS ARTICLE TOO:

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ