ಇತ್ತೀಚೆಗೆ ಸುದ್ದಿ ಮಾಡಿದ ಹನಿಟ್ರ್ಯಾಪ್ ಪ್ರಕರಣದ ತಂಡ ಪೊಲೀಸ್ ಬಲೆಗೆ ಬಿದ್ದಿದ್ದಾರೆ. ಘಟನೆಗೆ ಸಂಬಂಧಿಸಿ ಐವರನ್ನು ವಿಟ್ಲ ಪೊಲೀಸರು ಮಾಣಿ ಜಂಕ್ಷನ್ ನಲ್ಲಿ ಬಂಧಿಸಿದ್ದಾರೆ.
ತೊಕ್ಕೊಟ್ಟು ನಿವಾಸಿ ಅಶ್ರಫ್ ಸಂಶೀರ (27), ಪರಂಗಿಪೇಟೆ ಅಮ್ಮೆಮ್ಮಾರ್ ಸಂದ ಬಳಿ ನಿವಾಸಿ ಝೈನುದ್ದೀನ್ (21), ತೊಕ್ಕೊಟ್ಟು ಉಳ್ಳಾಲ ಮಾರ್ಗತಳಿ ನಿವಾಸಿ ಮಹಮ್ಮದ್ ಇಕ್ಬಾಲ್ (27), ಉಳ್ಳಾಲ ಮುಕ್ಕಚ್ಚೇರಿ ನಿವಾಸಿ ಉಬೈದುಲ್ಲಾ (32), ಸಕಲೇಶಪುರ ಅರೇಹಳ್ಳಿ ಫರ್ಝಾನ ಯಾನೆ ಫರ್ಝಾನ ಸುಮೈಯ್ಯ (26) ಬಂಧಿತ ಆರೋಪಿಗಳು.
ಇವರಿಂದ ಒಂದು ಪಾಸ್‌ಪೋರ್ಟ್, 6 ಮೊಬೈಲ್, 2 ಕಾರು, 8 ಗ್ರಾಂ ಚಿನ್ನ, 7.5 ಲಕ್ಷ ರೂ. ನಗದು ವಶಕ್ಕೆಪಡೆದುಕೊಳ್ಳಲಾಗಿದೆ.
ಏನಿದು ಪ್ರಕರಣ:
ವಿಟ್ಲ ಪಡ್ನೂರು ಗ್ರಾಮದ ನಿವಾಸಿಯೋರ್ವರಿಗೆ ಫೇಸ್ ಬುಕ್ ಮೂಲಕ ಪರಿಚಯವಾದ ಯುವತಿ ಪರಿಚಯವಾಗಿತ್ತು. ತಾಯಿ ಆರೋಗ್ಯ ಸರಿ ಇಲ್ಲ ಎಂದು ಮನೆಗೆ ಬರಹೇಳಿದ ಯುವತಿ ಗೆಳತಿ ಜತೆ ಮುಡಿಪುಗೆ ಆಗಮಿಸಿದ್ದಳು. ಓರ್ವಳನ್ನು ಕುಡ್ತಮುಗೇರು ಮನೆಗೆ ಕರೆದುಕೊಂಡು ಹೋಗುವಂತೆ ಹೇಳಿ ಬಳಿಕ ರಾತ್ರಿ ತಂಡದ ಜತೆಗೆ ಮನೆ ಮೇಲೆ ದಾಳಿ ನಡೆಸಿ ಮಾರಣಾಂತಿಕ ಹಲ್ಲೆ ನಡೆಸಿದ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.