ವಿಶೇಷ ವರದಿ

ತುಂಬೆ – ಸಜಿಪ ಬೆಸೆದ ಅಣೆಕಟ್ಟು

  • ಯಾದವ ಕುಲಾಲ್

www.bantwalnews.com

ತುಂಬೆಯ ಜನರು ಸಜಿಪಮುನ್ನೂರಿಗೆ, ಸಜಿಪಮುನ್ನೂರು ಗ್ರಾಮದ ಜನರು ಮೊದಲು ತುಂಬೆ ಫರಂಗಿಪೇಟೆಗೆ ಹೇಗೆ ಬರಬೇಕಿತ್ತು ಗೊತ್ತೇ?

ಜಾಹೀರಾತು

ಆಲಾಡಿ, ಇಂದಿರಾನಗರ, ಉದ್ದೊಟ್ಟು ಮೊದಲಾದ ಪ್ರದೇಶಗಳ ಜನರು ಫರಂಗಿಪೇಟೆ, ಮಂಗಳೂರು ಮೊದಲಾದ ಕಡೆಗೆ ಬರಬೇಕಾದರೆ, ಸಜಿಪ, ಮೇಲ್ಕಾರು, ಬಿ.ಸಿ.ರೋಡ್ ಮಾರ್ಗ ಕ್ರಮಿಸಬೇಕಿತ್ತು.

ಧೈರ್ಯವಿದ್ದರೆ, ಸಜಿಪಮುನ್ನೂರುಆಲಾಡಿಯಿಂದ ದೋಣಿ ಮೂಲಕ ನದಿ ದಾಟಿ ತುಂಬೆಗೆ ಬಂದು ಬಳಿಕ ಸಂಚಾರ ಮುಂದುವರಿಸಬೇಕಾಗಿತ್ತು. ಅದೇ ರೀತಿ ತುಂಬೆ, ಫರಂಗಿಪೇಟೆಯವರಿಗೆ ಸಜಿಪಮುನ್ನೂರಿಗೆ ಹೋಗಬೇಕಿದ್ದರೆ ಇಂಥದ್ದೇ ಪ್ರಯಾಸ.

ಆದರೆ ಯಾವಾಗ ತುಂಬೆಯಲ್ಲಿ ಡ್ಯಾಂ ನಿರ್ಮಾಣವಾಯಿತೋ ಈ ಭಾಗದ ಜನರ ಪ್ರಯಾಸವಂತೂ ಕಡಿಮೆಯಾಯಿತು.

ಸುಮಾರು ನೂರು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಡ್ಯಾಂ ಮೂವತ್ತಾರು ಪಿಲ್ಲರ್ಗಳನ್ನು ಒಳಗೊಂಡಿದ್ದು ನೇತ್ರಾವತಿ ನದಿಯುದ್ದಕ್ಕೂ ತುಂಬೆಯಿಂದ ಸಜಿಪಮುನ್ನೂರು ಗ್ರಾಮದ ಆಲಾಡಿ ಪ್ರದೇಶಕ್ಕೆ ಸೇತುವೆಯಂತೆ ನೇರ ಸಂಪರ್ಕ ಕಲ್ಪಿಸಿದೆ. ಡ್ಯಾಂ ಮೇಲ್ಭಾಗದಲ್ಲಿ ನಿರ್ಮಾಣವಾಗಿರುವ ಸೇತುವೆ ಮಾದರಿ ನಿರ್ಮಾಣದಿಂದಾಗಿ ಇದನ್ನು ಎರಡೂ ಗ್ರಾಮಗಳ ಜನ ತಮ್ಮ ಕಾಲ್ನಡಿಗೆ ಸಂಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ.

ಸಜಿಪ ಮುನ್ನೂರು ಆಸುಪಾಸಿನ ಆರು ಗ್ರಾಮಗಳ ಜನತೆಗೆ ಇದು ಲಾಭವಾಗಿದೆ. ಸುಮಾರು 5000 ಮನೆಗಳು ವ್ಯಾಪ್ತಿಯಲ್ಲಿವೆ.

ತುಂಬೆ ನೂತನ ಡ್ಯಾಂ ಈಗಾಗಲೇ ಕಾರ್ಯಾರಂಭಗೊಂಡಿದ್ದರೂ ಇದರ ಅಧಿಕೃತ ಉದ್ಘಾಟನೆ ಕಾರ್ಯ ಮಾತ್ರ ಇನ್ನೂ ನೆರವೇರಿಲ್ಲ. ಡ್ಯಾಂ ಉದ್ಘಾಟನೆ ವೇಳೆಗೆ ಸಂಬಂಧಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳು ಸೂಕ್ತ ರಕ್ಷಣಾ ಕ್ರಮ ಅಳವಡಿಸುವ ಮೂಲಕ ಇಲ್ಲಿನ ಕನಿಷ್ಠ ಕಾಲು ದಾರಿಯನ್ನು ಉಳಿಸುವ ಮೂಲಕ ಅಥವಾ ಎರಡೂ ಗ್ರಾಮಗಳ ಮಧ್ಯೆ ತೂಗುಸೇತುವೆಯನ್ನಾದರೂ ನಿರ್ಮಿಸುವ ಮೂಲಕ ಎರಡೂ ಗ್ರಾಮಗಳ ಮಧ್ಯೆ ಇರುವ ಕನಿಷ್ಠ ಸಂಚಾರದ ಅನುಕೂಲತೆಯನ್ನು ಉಳಿಸಿಕೊಳ್ಳಬೇಕೆನ್ನುವುದು ಸಾರ್ವಜನಿಕರ ಅಭಿಪ್ರಾಯ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts