www.bantwalnews.com
ಮಂಗಳೂರಿನ ಲ್ಲಿ ನವೆಂಬರ್ 15ರಂದು ನಡೆಯುವ ರಾಜ್ಯ ಮಟ್ಟದ ಸಹಕಾರಿ ಸಪ್ತಾಹ 2017ರ ಪೂರ್ವ ಭಾವಿ ಸಭೆ ತಾಲೂಕು ಮಟ್ಟಕ್ಕೆ ಸಂಬಮಧಿಸಿ ಸಮಾಜ ಸೇವಾ ಸಹಕಾರಿ ಬ್ಯಾಂಕ್ ನ ಸಭಾಭವನದಲ್ಲಿ ಮಂಗಳವಾರ ನಡೆಯಿತು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಜಿ.ರಾಜಾರಾಮ ಭಟ್ ಅಧ್ಯಕ್ಷತೆ ವಹಿಸಿದ್ದರು. ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್ ಪ್ರಸ್ತಾವನೆ ಮಾಡಿದರು.
ಸಹಕಾರಿ ಅಭಿವೃದ್ಧಿ ಅದಿಕಾರಿ ತ್ರಿವೇಣಿ ರಾವ್ ಇಲಾಖಾ ಮಾಹಿತಿ ನೀಡಿದರು. ಜಿ.ಪಂ.ಸದಸ್ಯ ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ , ಸಮಾಜ ಬ್ಯಾಂಕ್ ನ ಅಧ್ಯಕ್ಷ ಸುರೇಶ್ ಕುಲಾಲ. ಕೆಥೋಲಿಕ್ ಸೊಸೈಟಿ ಅಧ್ಯಕ್ಷ ಹೆರಾಲ್ಡ್ ಡಿ.ಸೋಜ. ವಿಟ್ಲ ಮಹಿಳಾ ವಿವಿದ್ದೋದ್ದೇಶ ಸಹಕಾರಿ ಸಂಘಧ ಅಧ್ಯಕ್ಷೆ ಧರ್ಮಾವತಿ. ಸಹಕಾರಿ ಯೂನಿಯನ್ ನಿರ್ದೇಶಕ ದೇವದಾಸ ಅಡಪ. ಬಂಟ್ವಾಳ ವಲಯ ಮೇಲ್ವಿಚಾರಕ ಕೇಶವ ಕಿಣಿ. ಬಂಟ್ವಾಳ ವಿವಿಧ ಸಹಾಕರಿ ಬ್ಯಾಂಕ್ ನ ಅಧ್ಯಕ್ಷ ರುಗಳು ನಿರ್ದೇಶಕ ರು. ಮುಖ್ಯ ಕಾರ್ಯನಿರ್ವಾಣಾಧಿಕಾರಿಗಳು ಉಪಸ್ಥಿತರಿದ್ದರು. ವಾಮದ ಪದವು ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಅಲ್ಬರ್ಟ ಡಿ.ಸೋಜ ಸ್ವಾಗತಿಸಿ, ಹಾಪ್ ಕಾಮ್ಸ್ ಜಿಲ್ಲಾಧ್ಯಕ್ಷ ಲಕ್ವೀನಾರಾಯಣ ಉಡುಪ ವಂದಿಸಿದರು. ವರ್ತಕರ ಸಹಕಾರಿ ಸಂಘದ ಅಧ್ಯಕ್ಷ ಸುಬಾಶ್ಚಂದ್ರ ಜೈನ್ ಕಾರ್ಯಕ್ರಮ ನಿರೂಪಿಸಿದರು.