ಧರ್ಮಸ್ಥಳ ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಬಂಟ್ವಾಳ ತಾಲೂಕು ಸಮಿತಿಯ ಸಭೆಯು ಮೆಲ್ಕಾರಿನ ಬೀರ್ವಾ ಸೆಂಟರ್ನಲ್ಲಿ ನಡೆಯಿತು.
ಈ ಸಂದರ್ಭ ಸಮಿತಿಯ ಗೌರವ ಅಧ್ಯಕ್ಷರಾದ ಎ. ರುಕ್ಮಯ ಪೂಜಾರಿ, ಅಧ್ಯಕ್ಷರಾದ ಸಂಜೀವ ಪೂಜಾರಿ, ಪದಾಧಿಕಾರಿಗಳಾದ ಈಶ್ವರ ಪೂಜಾರಿ, ಮೋಹನ್ ಪಿ.ಸ್, ಸಂತೋಷ್ ಕೋಟ್ಯಾನ್, ಕೇಶವ ಶಾಂತಿ, ಬೇಬಿ ಕುಂದರ್, ಭುವನೇಶ್ ಪಚಿನಡ್ಕ, ಜಿ.ಆನಂದ , ನಾರಾಯಣ ಸಾಲಿಯಾನ್, ಸುಂದರ ಬಂಗೇರ, ವಿಶ್ವನಾಥ್ ಬಿ.ಸಿ.ರೋಡ್ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.
ಜನವರಿ ತಿಂಗಳಲ್ಲಿ ಬಂಟ್ವಾಳದಲ್ಲಿ ಗುರುವಂದನಾ ಮತ್ತು ಸೀತಾರಾಮ ಕಲ್ಯಾಣೋತ್ಸವ ನಡೆಸುವುದು, ನವೆಂಬರ್ ೨೫ಕ್ಕೆ ಹರಿದ್ವಾರದಲ್ಲಿ ನಡೆಯುವ ಶಾಖಾ ಮಠದ ಉದ್ಘಾಟನೆಯಲ್ಲಿ ಪಾಲ್ಗೊಳ್ಳುವುದು, ತಾಲೂಕಿನೊಳಗೆ ಮಠ ಮತ್ತು ಶಾಲೆ ನಿರ್ಮಾಣ ಹಾಗೂ ಗ್ರಾಮ ಸಮಿತಿ ರಚನೆ ಬಗ್ಗೆ ಕ್ಷೇತ್ರದ ಸಂಚಾಲಕರಾದ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ವಿಚಾರ ಮಂಡಿಸಿದರು. ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಸಾಲಿಯಾನ್ ಸ್ವಾಗತಿಸಿ, ಜತೆ ಕಾರ್ಯದರ್ಶಿ ಸಂತೋಷ್ ಕೋಟ್ಯಾನ್ ತುಂಬೆ ಧನ್ಯವಾದವಿತ್ತರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…