ಪುಟಾಣಿಗಳು, ವಿದ್ಯಾರ್ಥಿಗಳು ದಿನನಿತ್ಯದ ಆಕರ್ಷಣೆಯಾದ ಮೊಬೈಲ್, ಟಿ.ವಿ.ಯ ಬಿಟ್ಟು ಸೃಜನಾತ್ಮಕವಾಗಿ ದೀಪಾವಳಿಯನ್ನು ಬಿ.ಸಿ.ರೋಡಿನಲ್ಲಿ ಆಚರಿಸಿದರು. ಇಲ್ಲಿನ ಸ್ವರ್ಣ ಲರ್ನಿಂಗ್ ಸೆಂಟರ್ ನಲ್ಲಿ ಸ್ವರ್ಣ ಬೆಳಕು 2017 ಎಂಬ ಶೀರ್ಷಿಕೆಯಡಿ ಗೂಡುದೀಪ ಮತ್ತು ರಂಗೋಲಿ ಸ್ಪರ್ಧೆ ನಡೆಯಿತು.
ಸುಜಾತ ಟೀಚರ್, ದಿನಕರ್ ಮತ್ತು ದೀಪಾ ಶೆಣೈ ತೀರ್ಪುಗಾರರಾಗಿದ್ದ ಈ ಕಾರ್ಯಕ್ರಮವನ್ನು ಗ್ರಾಮ ವಿಕಾಸ್ ಟ್ರಸ್ಟ್ ನ ಸಹಭಾಗಿತ್ವದಲ್ಲಿ ಏರ್ಪಡಿಸಲಾಗಿತ್ತು. ಬಂಟ್ವಾಳ ಪುರಸಭೆಯ ನಾಮನಿರ್ದೇಶಿತ ಸದಸ್ಯ ಲೋಕೇಶ ಸುವರ್ಣ ಬಹುಮಾನ ವಿತರಿಸಿದರು. ಸಹ್ಯಾದ್ರಿ ಕಾಲೇಜ್‌ನ ಪ್ರಾಧ್ಯಾಪಕ ಡಾ.ನವೀನ್ ಬಪ್ಪಳಿಗೆ ಕಾರ್ಯಕ್ರಮದ ಪ್ರಾಯೋಜಕರಾಗಿದ್ದು, ದೀಪಾವಳಿಯನ್ನು ಸಾರ್ವಜನಿಕರೊಂದಿಗೆ ಚಟುವಟಿಕೆಯುಕ್ತವಾಗಿ ಆಚರಿಸಿದ ಸ್ವರ್ಣ ಲರ್ನಿಂಗ್ ಸೆಂಟರ್ ನ ಪ್ರಯತ್ನ ವನ್ನು ಶ್ಲಾಘಿಸಿದರು.
ಗೂಡು ದೀಪ ವಿಭಾಗದಲ್ಲಿ ಸುಶಾನ್ ತಂಡ ಪ್ರಥಮ ಸ್ಥಾನ ಆಶ್ಲೇಶ್ ತಂಡ ದ್ವಿತೀಯ ಹಾಗು ಶಶಾಂಕ್ ತಂಡ ತ್ರತೀಯ ಸ್ಥಾನಿಯಾದರೆ ರಂಗೋಲಿ ಸ್ಪರ್ಧೆ ಯಲ್ಲಿ ದೀಪ ಪ್ರವೀಣ್ ಆಚಾರ್ಯ, ಸುನೀತ ಶರಣ್ಯ, ಶರತ್ ಆಚಾರ್ಯ ಅನುಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಹಂಚಿಕೊಂಡರು. ಲರ್ನಿಂಗ್ ಸೆಂಟರ್ ನ ಸಂಚಾಲಕಿ ರಂಜಿತ, ನಿವ್ರತ್ತ ಶಿಕ್ಷಕರಾದ ವಾಸು ಮಾಸ್ತರ್, ಲೀಲಾವತಿ ಟೀಚರ್, ಕ್ಷೇಮ ಮೇದಪ್ಪ, ಅಂಚೆ ಇಲಾಖೆಯ ಸಿಬ್ಬಂದಿ ಶ್ವೆತಾ ರಾಜೇಶ್, ಸದಾನಂದ್ ಮೊದಲಾದವರು ಉಪಸ್ಥಿತರಿದ್ದರು