- ಡಾ. ಎ.ಜಿ. ರವಿಶಂಕರ್
- ಅಂಕಣ: ಪಾಕಶಾಲೆಯೇ ವೈದ್ಯಶಾಲೆ
ಬಿಸಿನೀರು ನಿತ್ಯ ಬಳಕೆಯ ದ್ರವ್ಯವಾಗಿದ್ದರೂ ಎಷ್ಟೋ ಜನರಿಗೆ ಅದರ ಔಷಧೀಯ ಪ್ರಾಮುಖ್ಯತೆ ತಿಳಿದಿರುವುದಿಲ್ಲ. ಬಿಸಿನೀರನ್ನು ಆರೋಗ್ಯದ ಸಂಜೀವಿನಿ ಎಂದರೂ ತಪ್ಪಾಗಲಾರದು.
ಬಾಹ್ಯ ಉಪಯೋಗಗಳು:
- ಮೂಗು ಮತ್ತು ಗಂಟಲಲ್ಲಿ ಕಫ ಗಟ್ಟಿಯಾಗಿ ಅವುಗಳು ಮುಚ್ಚಿದಂತಾದರೆ ಬಿಸಿನೀರಿನ ಆವಿ ತೆಗೆದುಕೊಳ್ಳಬೇಕು.
- ಬಿಸಿನೀರಿನಲ್ಲಿ ಸ್ನಾನ ಮಾಡಿದರೆ ಶರೀರದ ನೋವು ಹಾಗು ಆಯಾಸ ಕಡಿಮೆಯಾಗುತ್ತದೆ.
- ಬಿಸಿನೀರಿನ ಸ್ನಾನ ದೇಹದ ರಕ್ತ ಸಂಚಾರವನ್ನು ಅಧಿಕ ಗೊಳಿಸುತ್ತದೆ ಮತ್ತು ಚರ್ಮಕ್ಕೆ ಕಾಂತಿಯನ್ನು ನೀಡಿ ಅಕಾಲಿಕ ಸುಕ್ಕು ಕಟ್ಟುವುದನ್ನು ತಡೆಯುತ್ತದೆ.
- ಕಾಲಿನ ಹಿಮ್ಮಡಿ ನೋವು ಇದ್ದರೆ ಬಿಸಿನೀರಿಗೆ ಸ್ವಲ್ಪ ಉಪ್ಪು ಹಾಕಿ ಕಾಲು ಮುಳುಗಿಸಿ ಇಡಬೇಕು.
- ಶರೀರದಲ್ಲಿ ಕುರ ಇದ್ದಾಗ ಅದರ ಮೇಲೆ ಬಿಸಿನೀರಿನ ಶೇಕ ಕೊಟ್ಟಲ್ಲಿ ಬೇಗನೆ ಕುರ ಸೊರುತ್ತದೆ ಮತ್ತು ನೋವು ಕಡಿಮೆಯಾಗುತ್ತದೆ.
- ಮುಖದಲ್ಲಿ ಗಟ್ಟಿಯಾದ ಮೊಡವೆಗಳು ಮೂಡಿದಾಗ ಬಿಸಿನೀರಿನ ಆವಿ ತೆಗೆದುಕೊಳ್ಳಬೇಕು.
- ಕೈ ಅಥವಾ ಕಾಲು ಉಳುಕಿದಾಗ ಅವುಗಳ ಮೇಲೆ ಎಣ್ಣೆ ಹಚ್ಚಿ ಬಿಸಿನೀರಿನ ಶೇಕ ಕೊಟ್ಟರೆ ನೋವು ಹಾಗು ಬಾವು ಕಡಿಮೆಯಾಗುತ್ತದೆ.
- ಮೂಲವ್ಯಾಧಿ ಬಾವು ಬಂದು ವಿಪರೀತ ನೋವು ಇದ್ದಾಗ ಬಿಸಿನೀರಿನಲ್ಲಿ ದಿನಕ್ಕೆ 2 ರಿಂದ 3 ಬಾರಿ ಕುಳಿತುಕೊಳ್ಳಬೇಕು.
- ಶರೀರದಲ್ಲಿ ಗಾಯ ಅಥವಾ ಹುಣ್ಣು ಇದ್ದಾಗ ಚೆನ್ನಾಗಿ ಕುದಿಸಿ ಆರಿಸಿದ ನೀರಿನಲ್ಲಿ ತೊಳೆಯಬೇಕು
- ಮೂಳೆ ಮುರಿತ್ತಕ್ಕೊಳಗಾಗಿ, ಪ್ಲಾಸ್ಟರ್ ತೆಗೆದ ನಂತರ ಬಿಸಿನೀರಿನ ಶೇಕ ಕೊಟ್ಟರೆ ಬೇಗನೆ ಮೊದಲಿನಂತೆ ಚಟುವಟಿಕೆ ಮಾಡಲು ಸಾಧ್ಯವಾಗುತ್ತದೆ.
- ಸಂಧುವಾತದಲ್ಲಿ ಸ್ವಲ್ಪ ಎಳ್ಳೆಣ್ಣೆ ಹಚ್ಚಿ ಬಿಸಿನೀರಿನ ಶೇಕ ಕೊಟ್ಟರೆ ಸಂಧುಗಳ ನೋವು ಕಡಿಮೆಯಾಗುತ್ತದೆ ಮತ್ತು ಚಲನಾ ಶಕ್ತಿ ಅಧಿಕವಾಗುತ್ತದೆ.
ವಿಶೇಷ ಸೂಚನೆ:
ನಿತ್ಯ ಸ್ನಾನ ಮಾಡುವಾಗ ತಲೆಗ ಬಿಸಿನೀರನ್ನು ಹಾಕಬಾರದು. ಇದರಿಂದ ಕೂದಲು,ಕಣ್ಣು ಹಾಗು ಹೃದಯದ ಶಕ್ತಿ ಕಡಿಮೆಯಾಗುತ್ತದೆ.
ಆಭ್ಯಂತರ ಉಪಯೋಗಗಳು …. ಮುಂದಿನವಾರ