ಬಂಟ್ವಾಳ

ಒಳ್ಳೆಯ ಸಂಕಲ್ಪ ಮಾಡಿದಾಗ ದೇವರ ಅನುಗ್ರಹ


ದೇವರನ್ನು ನಾವು ಭಕ್ತಿಯಿಂದ ಅಪ್ಪಿ ಹಿಡಿದಾಗ, ದೇವರು ನಮ್ಮನ್ನು ಪ್ರೀತಿಯಿಂದ ಒಪ್ಪಿಕೊಳ್ಳುತ್ತಾರೆ, ಅವ್ಯಕ್ತ ರೂಪದ ದೇವರನ್ನು ನಾವು ನಂಬಿ ನಡೆದಾಗ, ನಮ್ಮ ಬಾಳು ಪಾವನವಾಗುತ್ತದೆ, ಒಳ್ಳೆಯ ಸಂದರ್ಭದಲ್ಲಿ ಒಳ್ಳೆಯ ಸಂಕಲ್ಪ ಮಾಡಿದಾಗ ದೇವರ ಅನುಗ್ರಹವಾಗುತ್ತದೆ ಇದು ಚಾತುರ್ಮಾಸದಲ್ಲಿ ಸಾಧ್ಯವಾಗಿದೆ ಎಂದು ಶ್ರೀ ಕಟೀಲು ಕ್ಷೇತ್ರದ ವೇ|ಮೂ| ಲಕ್ಷ್ಮೀನಾರಾಯಣ ಆಸ್ರಣ್ಣರು ಹೇಳಿದರು.

ಜಾಹೀರಾತು

ಪಾಣೆಮಂಗಳೂರು ಶ್ರೀಅನಂತನಾಥ ಸ್ವಾಮೀ ಜಿನ ಚೈತ್ಯಾಲಯದಲ್ಲಿ ಪರಮ ಪೂಜ್ಯ ಶಾಂತ ಮೂರ್ತಿ ವಾತ್ಸಲ್ಯ ರತ್ನಾಕರ ಆಚಾರ್ಯ ಶ್ರೀ ೧೦೮ ಸನ್ಮತಿ ಸಾಗರ ಮಹಾರಾಜರ ಶಿಷ್ಯರಾದ, 108 ಮುನಿಶ್ರೀ ವೀರಸಾಗರ ಮಹಾರಾಜರ ಚಾತುರ್ಮಾಸ ಧರ್ಮ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಪರಮ ಪೂಜ್ಯ ಮುನಿಶ್ರೀಗಳು ತಮ್ಮ ಮಂಗಲ ಪ್ರವಚನದಲ್ಲಿ ಆಶೀರ್ವಚನ ನೀಡುತ್ತಾ ಜೀವನದಲ್ಲಿ ಶ್ರದ್ಧೆ ನಿಷ್ಠೆ ಮತ್ತು ಆಚರಣೆಗಳು ಅತ್ಯಗತ್ಯ, ಇದರಿಂದ ಜೀವನ ಪಾವನವಾಗುವುದು. ಧರ್ಮದ ಆಚರಣೆಯಲ್ಲಿ ಕಷ್ಟಗಳು ಎದುರಾಗುವುದು ಸಹಜ, ಅವುಗಳನ್ನು ಎದುರಿಸಿ ಮುನ್ನಡೆದಲ್ಲಿ ಧರ್ಮ ಉಳಿಯುತ್ತದೆ ಎಂದರು. ಹಿಂದೆ ಇಂತಹ ಕಷ್ಟದ ಸನ್ನಿವೇಶ ನಿರ್ಮಾಣವಾಗಿ, ಸಂದರ್ಭದಲ್ಲಿ ಶ್ವೇತಾಂಬರ ಪಂಥದ ಉದಯವಾಯಿತು ಎಂದು ತಿಳಿಸಿದರು.

. . ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡುತ್ತಾ ನಮ್ಮ ತೌಳವ ಸಂಸ್ಕೃತಿಯಲ್ಲಿ ಎಲ್ಲಾ ಜಾತಿ, ಧರ್ಮಗಳು ಒಂದಾಗಿ ಸಾಮರಸ್ಯರಿಂದ ಬಾಳುತ್ತಿದ್ದಾರೆ. ನಿತ್ಯ ಜೀವನದಲ್ಲಿ ಧಾರ್ಮಿಕ ಅನುಷ್ಠಾನವನ್ನು ಮಾಡುತ್ತಾ ಲೌಕಿಕ ಭ್ರಮೆಗೆ ಒಳಗಾಗಬಾರದು ಆಧುನಿಕ ಕಾಲದ ವ್ಯವಸ್ಥೆಯಲ್ಲಿ ನಮ್ಮ ತನವನ್ನು ಉಳಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಮಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸುರೇಶ್ ಬಲ್ಲಾಳ್, ಹೇಮಚಂದ್ರ ಮೂಡಬಿದಿರೆ, ಚಾತುರ್ಮಾಸ ಸಮಿತಿಯ ರತ್ನಾಕರ ಜೈನ್ ಮಂಗಳೂರು, ಸುದರ್ಶನ ಜೈನ್, ಧರಣೇಂದ್ರ ಇಂದ್ರ, ಭುವನೇಂದ್ರ ಇಂದ್ರ, ಸುಭಾಷ್ ಚಂದ್ರ ಜೈನ್, ಹರ್ಷರಾಜ ಬಲ್ಲಾಳ್, ದೀಪಕ್ ಇಂದ್ರ, ಕೆ. ಪ್ರವೀಣ್ ಕುಮಾರ್, ಆದಿರಾಜ ಜೈನ್, ಭರತ್ ರಾಜ್, ಬ್ರಿಜೇಶ್ ಜೈನ್ ಉಪಸ್ಥಿತರಿದ್ದರು.

ಮಂಗಳೂರು, ಮೂಡುಬಿದಿರೆ, ವೇಣೂರು, ಧರ್ಮಸ್ಥಳ, ಕಾರ್ಕಳ, ಹಾಸನ, ಬೆಂಗಳೂರು ಮುಂತಾದ ಕಡೆಗಳಿಂದ ಅನೇಕ ಶ್ರಾವಕ ಬಂಧುಗಳು ಪಾಲ್ಗೊಂಡಿದ್ದರು.

ಮುನಿಶ್ರೀಗಳ ಪಾವನ ಸಾನ್ನಿಧ್ಯದಲ್ಲಿ ಶ್ರೀ ಅರಿಹಂತ ಪರಮೇಷ್ಠಿ ಆರಾಧನೆಯನ್ನು ಉದಯ ಕುಮಾರ್, ಸಹೋದರರು ಮತ್ತು ಕುಟುಂಬಿಕರು, ಕಟ್ಟೆಮನೆ ಪುಂಜಾಲಕಟ್ಟೆ, ಇವರ ಪ್ರಾಯೋಜಕತ್ವದಲ್ಲಿ ನೆರವೇರಿತು.

 

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.