ಉಳಿ ಗ್ರಾಮದ ಕಕ್ಯಪದವಿನ ಮೈರ ಬರ್ಕೆಜಾಲುನಲ್ಲಿ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ವತಿಯಿಂದ ನಡೆಯುವ ದ್ವಿತೀಯ ವರ್ಷದ ಪರ್ಬದ ಲೇಸ್- ತುಳುವೆರೆ ಕೂಟದ ಪ್ರಯುಕ್ತ ಜಾನಪದ ಕ್ರೀಡಾ ಸ್ನೇಹ ಕೂಟ, ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳಕ್ಕೆ ಶನಿವಾರ ಚಾಲನೆ ನೀಡಲಾಯಿತು.
ಕಂಬಳ ಪ್ರಧಾನ ತೀರ್ಪುಗಾರ ಎಂ.ರಾಜೀವ ಶೆಟ್ಟಿ ಎಡ್ತೂರು ಹಾಗೂ ಕಂಬಳ ತೀರ್ಪುಗಾರ ವಲೇರಿಯನ್ ಡೇಸಾ ಅಪ್ಪು ಕಂಬಳದ ಕರೆಯನ್ನು ಉದ್ಘಾಟಿಸಿ, ತೆಂಗಿನ ಹಿಂಗಾರವನ್ನು ಅರಳಿಸಿ ಕಂಬಳಕ್ಕೆ ಚಾಲನೆ ನೀಡಿದರು. ಬಳಿಕ ಕೋಟಿ-ಚೆನ್ನಯ ಸಭಾ ವೇದಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಎಂ.ರಾಜೀವ ಶೆಟ್ಟಿ ಎಡ್ತೂರು ಉದ್ಘಾಟಿದರು.
ಮುಖ್ಯ ಅತಿಥಿಯಾಗಿ ಕಂಬಳ ಪ್ರಧಾನ ತೀರ್ಪುಗಾರ, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ನಿರಂಜನ ರೈ ಮಠಂತಬೆಟ್ಟು ಭಾಗವಹಿಸಿದರು.
ಕಂಬಳ ಸಮಿತಿ ಅಧ್ಯಕ್ಷ ಹರಿಶ್ಚಂದ್ರ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ತುಳು ಜಾನಪದ ಕಾರ್ಯಗಳು ನಡೆಸುತ್ತಿರುವುದು ಸಾರ್ಥಕ ಕಾರ್ಯವಾಗಿದೆ. ಎಂದು ಹೇಳಿದರು.
ಪ್ರಗತಿಪರ ಕೃಷಿಕ ಬಾಬು ಗೌಡ ಪೆಂರ್ಗಾಲು , ಕಂಬಳಪರ ಹೋರಾಟಗಾರ ಸೀತಾರಾಮ ಶೆಟ್ಟಿ ಮಹಾಂಕಾಳಿಬೆಟ್ಟು, ಸ್ಥಳದಾನಿ ತುಕ್ರಪ್ಪ ಗೌಡ, ಉಳಿ ಗ್ರಾ. ಪಂ. ಸದಸ್ಯ ಚಿದಾನಂದ ರೈ , ಪ್ರಗತಿಪರ ಕೃಷಿಕ ಸುಧಾಕರ ಶೆಟ್ಟಿ ಶಂಕರಬೆಟ್ಟು , ಜಯ ಪೂಜಾರಿ ಕುಕ್ಕಾಜೆ, ಪ್ರವೀಣ್ ಶೆಟ್ಟಿ ಕಿಂಜಾಲು, ವಿಠಲ ಭಂಡಾರಿ, ಧರ್ಣಪ್ಪ ಪೂಜಾರಿ ಮೈರ, ಶ್ರೀ ರಾಮಾಂಜನೇಯ ಗೆಳೆಯರ ಬಳಗದ ಅಧ್ಯಕ್ಷ ಕೇಶವ ಪೂಜಾರಿ ಕುಕ್ಕಾಜೆ, ಕಾರ್ಯಾಧ್ಯಕ್ಷ ಲತೀಶ್ ಕುಕ್ಕಾಜೆ, ಸರಪಾಡಿ ಗ್ರಾ.ಪಂ. ಸದಸ್ಯ ಎನ್. ಧನಂಜಯ ಶೆಟ್ಟಿ, ದಯಾನಂದ ಪೂಜಾರಿ, ಸಾಂತಪ್ಪ ಪೂಜಾರಿ ಹಟದಡ್ಕ, ರಫೀಕ್ ಮುನ್ನಲಪಲ್ಕೆ, ಗೆಳೆಯರ ಬಳಗದ ಪದಾಧಿಕಾರಿಗಳಾದ ಸುರೇಶ್ ಮೈರ, ಉಮೇಶ್‌ನೇರಳಪಲ್ಕೆ, ಶೇಖರ ಕಂಚಲಪಲ್ಕೆ, ಆನಂದ ಪುಣ್ಕೆದಡಿ, ಪುರುಷೋತ್ತಮ ಪಲ್ಕೆ, ವಸಂತ ಕಾಯರಗುರಿ ಮತ್ತಿತರರು ಉಪಸ್ಥಿತರಿದ್ದರು. ಗೆಳೆಯರ ಬಳಗದ ಸ್ಥಾಪಕಾಧ್ಯಕ್ಷ ಶಿವಾನಂದ ಮೈರ ಸ್ವಾಗತಿಸಿದರು. ಮಾಜಿ ಅಧ್ಯಕ್ಷ, ನ್ಯಾಯವಾದಿ ರಂಜಿತ್ ಮೈರ ವಂದಿಸಿದರು. ಪ್ರಕಾಶ್ ಕರ್ಲ ಮತ್ತು ಪ್ರಶಾಂತ ಮೈರ ಕಾರ್ಯಕ್ರಮ ನಿರೂಪಿಸಿದರು.