ಸಜೀಪನಡು ಗ್ರಾಮದ ಕಂಚಿನಡ್ಕಪದವಿನಲ್ಲಿ ನಿರ್ಮಾಣ ಹಂತದಲ್ಲಿರುವ ಬಂಟ್ವಾಳ ಪುರಸಭೆಯ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಎಸ್‌ಡಿಪಿಐ ವಿರೋಧಿಸುತ್ತದೆ ಎಂದು ಸಜೀಪನಡು ಗ್ರಾಪಂ ಅಧ್ಯಕ್ಷ ಮುಹಮ್ಮದ್ ನಾಸೀರ್ ಆರೋಪಿಸಿದ್ದಾರೆ.
ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟಕ ನಿರ್ಮಾಣಕ್ಕೆ ಆರಂಭದಿಂದಲೂ ಎಸ್‌ಡಿಪಿಐ ವಿರೋಧಿಸುತ್ತಲೇ ಬಂದಿದೆ. ಇದೀಗ ಸ್ಥಳೀಯ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸುವ ಮೂಲಕ ಪಂಚಾಯತ್ ಮೇಲೆ ಆರೋಪ ಹೊರಿಸುವುದು ಖಂಡನೀಯ ಎಂದರು.
ಬಂಟ್ವಾಳ ಕ್ಷೇತ್ರದ ಶಾಸಕರೂ ಆದ ಸಚಿವ ರಮಾನಾಥ ರೈ ಅವರು ಕಂಚಿನಡ್ಕಪದವಿನಲ್ಲೇ ತ್ಯಾಜ್ಯ ಘಟಕ ನಿರ್ಮಾಣವಾಗಬೇಕೆಂಬ ಉತ್ಸಾಹದಲ್ಲಿದ್ದರೆ, ಮಂಗಳೂರು ಕ್ಷೇತ್ರದ ಶಾಸಕ, ಸಚಿವ ಯು.ಟಿ. ಖಾದರ್ ಇದಕ್ಕೆ ನಿರಾಸಕ್ತಿ ತೋರುತ್ತಿದ್ದಾರೆ. ಇವರಿಬ್ಬರ ಈ ಗುದ್ದಾಟದಿಂದ ಗ್ರಾಮಸ್ಥರು ಅತಂತ್ರರಾಗುವಂತಾಗಿದೆ ಎಂದ ಅವರು, ಘಟಕವನ್ನು ವಿರೋಧಿಸಿ ಪುರಸಭೆಯ ಮುಂದೆ ಪ್ರತಿಭಟಿಸಲು ಸಾಧ್ಯವಾಗದ ಕಾಂಗ್ರೆಸ್, ಪಂಚಾಯತ್‌ನ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದೆ ಎಂದು ವ್ಯಂಗ್ಯ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಎಸ್‌ಡಿಪಿಐ ಸಜೀಪನಡು ಘಟಕದ ಅಧ್ಯಕ್ಷ ಎಸ್.ಎನ್. ಅಬ್ದುಲ್ ರಹಿಮಾನ್, ಸದಸ್ಯರಾದ ಅಬ್ದುಲ್ ರಶೀದ್, ಪ್ರಧಾನ ಕಾರ್ಯದರ್ಶಿ ನವಾಝ್ ಇದ್ದರು.