ಕಾವಳಪಡೂರು ಗ್ರಾಮದ ವಗ್ಗ ಸರ್ಕಾರಿ ಫ್ರೌಢ ಶಾಲಾ ವಿಭಾಗದ ಪ್ರಭಾರ ಮುಖ್ಯೋಪಾದ್ಯಾಯರಾದ ಆಂಗ್ಲ ಭಾಷಾ ಶಿಕ್ಷಕ, ಸ್ವಚ್ಚ ಸುಂದರ ಶಾಲಾ ಪರಿಸರ ನಿರ್ಮಿಸುವಲ್ಲಿ ಆಧುನಿಕ ಮೂಲ ಸಾಮರ್ಥಗಳ ಜೊತೆಗೆ ಕಲಿಕೆಯ ಭದ್ರ ಬುನಾದಿ ಹಾಕಿ ಪ್ರಾಮಾಣಿಕ ಪ್ರಯತ್ನದ ಮೂಲಕ ಯಶಸ್ವಿ 2017-18 ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶೇಖ್ ಆದಂ ಸಾಹೇಬ್ ಅವರಿಗೆ ಜವಾನ್ ಫ್ರೆಂಡ್ಸ್ ಬಿ.ಸಿ.ರೋಡ್ ವತಿಯಿಂದ ಸರಕಾರಿ ಪದವಿಪೂರ್ವ ಕಾಲೇಜು ವಗ್ಗದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜವಾನ್ ಫ್ರೆಂಡ್ಸ್ ತಂಡದ ಸದಸ್ಯ ಹಾಗೂ ವಗ್ಗ ಶಾಲೆಯ ಹಳೆ ವಿದ್ಯಾರ್ಥಿ ನೌಶಾದ್ ವಗ್ಗ ಸಾಹೇಬ್ ಅವರು ಮಾದರಿ ಶಿಕ್ಷಕರಾಗಿದ್ದಾರೆ ವಿದ್ಯಾರ್ಥಿಗಳೊಂದಿಗೆ ಮತ್ತು ಪೋಷಕರೊಂದಿಗೆ ಬೆರೆತುಕೊಳ್ಳುವ ಇವರ ಉತ್ತಮ ನಡತೆಯೇ ಅವರ ಪ್ರಶಸ್ತಿಗೆ ಕಾರಣವಾಗಿದೆ ಮುಂದಿನ ದಿನಗಳಲ್ಲಿ ಅವರಿಗೆ ರಾಜ್ಯ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿ ದೊರಕಲಿ ಎಂದು ಶುಭಹಾರೈಸಿದರು. ಈ ಸಂದರ್ಭ ಜವಾನ್ ಫ್ರೆಂಡ್ಸ್ ತಂಡದ ಸತ್ತಾರ್ ನಂದರಬೆಟ್ಟು, ರಿಯಾಝ್ ಜವಾನ್, ನಝೀರ್ ಪರ್ಲಿಯಾ, ಆಶಿಕ್ ಕುಕ್ಕಾಜೆ ಹಾಗೂ ಸ್ಥಳೀಯರಾದ ವೆಲ್ ಸ್ಟನ್ ರೋಡ್ರಿಗಸ್, ಸುಶಾಂತ್ ಹಾಗೂ ಲೋಯ್ಸನ್ ರೋಡ್ರಿಗಸ್ ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…