ಕೊಡ್ಮಾಣ್‌ನಿಂದ ಬಾರೆಕಾಡು ಸಂಪರ್ಕಿಸುವ ರಸ್ತೆ ಕಾಂಕ್ರೀಟಿಕರಣಕ್ಕೆ ಆಹಾರ ಸಚಿವ ಯು.ಟಿ.ಖಾದರ್ ಶುಕ್ರವಾರ ರಾತ್ರಿ ಶಿಲಾನ್ಯಾಸ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಇಲ್ಲಿನ ಜನರ ಬಹುದಿನಗಳ ಬೇಡಿಕೆಯಂತೆ ಸುಮಾರು 12 ಲಕ್ಷ ರೂ. ವೆಚ್ಚದಲ್ಲಿ ರಸ್ತೆಯನ್ನು ಕಾಂಕ್ರೀಟಿಕರಣಗೊಳಿಸಲಾಗುತ್ತಿದೆ. ಅಲ್ಲದೆ ಕೊಡ್ಮಾಣ್ ಗ್ರಾಮದ ಪೊನ್ನೋಡಿ ರಸ್ತೆಗೂ ಅನುದಾನ ಬಿಡುಗಡೆಯಾಗಿದ್ದು, ಶೀಘ್ರ ಅಭಿವೃದ್ಧಿ ಕಾಮಗಾರಿ ನಡೆಯಲಿದೆ ಎಂದರು.
ಇದೇ ಸಂದರ್ಭ ಸಚಿವರು ಫರಂಗಿಪೇಟೆಯ ಹತ್ತನೆ ಮೈಲು ಬಳಿ ಹೈಮಾಸ್ಕ್ ವಿದ್ಯುತ್ ದೀಪ ಹಾಗೂ ತುಂಬೆಯ ಮುಯಿನಾಬಾದ್ ಬಳಿ 10 ಲಕ್ಷ ರೂ. ವೆಚ್ಚದ ರಸ್ತೆ ಕಾಂಕ್ರೀಟಿಕರಣಕ್ಕೆ ಶಿಲಾನ್ಯಾಸ ನೆರವೇರಿಸಿದರು.
ಜಿ.ಪಂ.ಮಾಜಿ ಸದಸ್ಯ ಉಮರ್ ಫಾರೂಕ್, ಮಂಗಳೂರು ತಾ.ಪಂ.ಅಧ್ಯಕ್ಷ ಮುಹಮ್ಮದ್ ಮೋನು, ಪುದು ಗ್ರಾ.ಪಂ.ಉಪಾಧ್ಯಕ್ಷ ಹಾಸೀರ್ ಪೇರಿಮಾರ್, ಯುವ ಕಾಂಗ್ರೆಸ್ ಕಾರ್ಯದರ್ಶಿ ಸೌಕತ್ ಪೇರಿಮಾರ್, ಇಸಾಕ್ ಫರಂಗಿಪೇಟೆ, ವೃಂದ ಪೂಜಾರಿ, ನೊರ್ಬರ್ಟ್, ಡೊನಾಲ್ಡ್, ದೇವದಾಸ್ ಶೆಟ್ಟಿ ಕೊಡ್ಮಾನ್, ನೀಲನ್ ನೆತ್ತರಕೆರೆ, ಲಿಯೋ ಕೊಡ್ಮಾನ್, ಸಂತೋಷ್, ಮೋನಪ್ಪ ಮಜಿ, ನಿಸಾರ್ ಅಹ್ಮದ್, ಇಬ್ರಾಹಿಂ ವಳಚ್ಚಿಲ್, ಮಾಧವ, ಪ್ರಭಾಕರ, ಪ್ರವೀಣ್, ರಫೀಕ್ ಪೇರಿಮಾರ್, ಇಸ್ಮಾಯಿಲ್, ಶರೀಫ್, ಗಫೂರ್, ಶಮೀರ್ ಮತ್ತಿತರರು ಹಾಜರಿದ್ದರು.