ಬಂಟ್ವಾಳ

ಜಿಲ್ಲಾ ಮಟ್ಟದ ಕ್ರೀಡಾಕೂಟ ಮೂಡುಬಿದಿರೆಗೆ ಶಿಫ್ಟ್

ಎರಡು ದಿನಗಳ ಕಾಲ ಬಂಟ್ವಾಳದಲ್ಲಿ ಆಯೋಜಿಸಲಾಗಿದ್ದ ದ.ಕ. ಜಿಲ್ಲಾ ಮಟ್ಟದ ಪ್ರಾಥಮಿಕ ಪ್ರೌಢ ಶಾಲಾ ವಿಭಾಗದ ಬಾಲಕ, ಬಾಲಕಿಯರ ಕ್ರೀಡಾಕೂಟ ಮಳೆಯ ಕಾರಣದಿಂದ ಮೂಡುಬಿದಿರೆಗೆ ಶಿಫ್ಟ್ ಆಗಿದೆ.

ಶುಕ್ರವಾರ ಮತ್ತು ಶನಿವಾರ ಬಂಟ್ವಾಳ ಎಸ್ ವಿ ಎಸ್ ದೇವಳ ವಿದ್ಯಾಸಂಸ್ಥೆಯ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಶುಕ್ರವಾರ ಮಧ್ಯಾಹ್ನದ ವರೆಗೂ ಸುಡುಬಿಸಿಲಿತ್ತು. ಆಗ ಉದ್ಘಾಟನಾ ಕಾರ್ಯಕ್ರಮ ಸುದೀರ್ಘವಾಗಿ ನಡೆಯಿತು. ಬಳಿಕ ಮಳೆ ಶುರುವಾದುದರಿಂದ ಕ್ರೀಡಾಕೂಟವನ್ನು ಸ್ಥಗಿತಗೊಳಿಸಲಾಯಿತು.

ಮಳೆಯಾಗುತ್ತಿದ್ದ ಸಂದರ್ಭ ಕ್ರೀಡಾಳುಗಳಿಗೆ ಸಂಕಷ್ಟವಾದ ಕಾರಣ ತರಬೇತುದಾರರು ಮತ್ತು ಪೋಷಕರು ಆಕ್ಷೇಪ ಸಲ್ಲಿಸಿದರು. ಈ ಹಿನ್ನೆಲೆಯಲ್ಲಿ ತಕ್ಷಣ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ವೈ.ಶಿವರಾಮಯ್ಯ ಅವರು ತಾಂತ್ರಿಕ ತಜ್ಙರ, ಶಿಕ್ಷಕ ಸಂಘದ ಪ್ರತಿನಿಧಿಗಳ, ಶಾಲಾ ಆಡಳಿತ ಮಂಡಳಿಯ ಪದಾಧಿಕಾರಿಗಳ ಸಭೆ ನಡೆಸಿದರು. ಬಳಿಕ ತಾಂತ್ತಿಕ ತಜ್ಙರು ನೀಡಿದ ಸಲಹೆಯಂತೆ ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಿಂಥೆಟಿಕ್ ಟ್ರ್ಯಾಕ್ ನಲ್ಲಿ ಕ್ರೀಡಾಕೂಟವನ್ನು ಮುಂದುವರಿಸಲು ತೀರ್ಮಾನಿಸಲಾಯಿತು.

ಶನಿವಾರ ಮತ್ತು ಭಾನುವಾಋ ಮೂಡುಬಿದ್ರೆಯಲ್ಲಿ ಈ ಕ್ರೀಡಾಕೂಟ ಮುಂದುವರಿಯಲಿದ್ದು, ಈಗಾಗಲೇ ೬೦೦ ಮತ್ತು ೮೦೦ ಮೀ. ಓಟ ಸ್ಪರ್ಧೆ ಇಲ್ಲಿ ಪೂರ್ಣಗೊಂಡಿದೆ. ಉಳಿದಂತೆ ರಿಲೇ, ನಡಿಗೆ, ಎತ್ತರ ಜಿಗಿತ, ಉದ್ದ ಜಿಗಿತ, ಹ್ಯಾಮರ್ ಎಸೆತ, ಪೋಲ್‌ವಾಲ್ಟ್, ಹರ್ಡಲ್ಸ್, ಚಕ್ರ ಎಸೆತ, ಗುಂಡೆಸೆತ ಮತ್ತಿತರ ಸ್ಪರ್ಧೆ ಮೂಡುಬಿದ್ರೆಯಲ್ಲಿ ನಡೆಯಲಿದೆ ಎಂದು ಜಿಲ್ಲಾ ವಿದ್ಯಾಂಗ ಉಪನಿರ್ದೆಶಕ ವೈ.ಶಿವರಾಮಯ್ಯ ಈ ಸಂದರ್ಭ ಸುದ್ದಿಗಾರರಿಗೆ ಸ್ಪಷ್ಟಪಡಿಸಿದರು.

ಬಿಸಿಲಿದ್ದಾಗ ಕಾರ್ಯಕ್ರಮ, ಆಟ ಶುರುವಾದಾಗ ಮಳೆ

ಕ್ರೀಡಾಕೂಟವನ್ನು ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಉದ್ಘಾಟಿಸಿದರು.ಅಧ್ಯಕ್ಷತೆಯನ್ನು ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ ವಹಿಸಿದ್ದರು. ಕ್ರೀಡಾಜ್ಯೋತಿಯನ್ನು ಬಂಟ್ವಾಳ ಶ್ರೀ ವೆಂಕಟರಮಣ ದೇವಳ ಆಡಳಿತ ಮೊಕ್ತೇಸರ ಮಾಣೂರು ಲಕ್ಷ್ಮಣ ಕಾಮತ್ ಹಸ್ತಾಂತರಿಸಿದರು.

ಪುರಸಭೆ ಅಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಜಿಪಂ ಸದಸ್ಯೆ ಮಂಜುಳಾ ಮಾಧವ ಮಾವೆ, ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಬಂಗೇರ, ಸ್ಥಳೀಯ ಪುರಸಭೆ ಸದಸ್ಯ ಜಗದೀಶ ಕುಂದರ್, ನಾಮನಿರ್ದೇಶಿತ ಸದಸ್ಯ ಪ್ರವೀಣ್ ಕಿಣಿ, ದೇವಳ ಮೊಕ್ತೇಸರ ಎ.ದಾಮೋದರ ಪ್ರಭು, ತಹಶೀಲ್ದಾರ್ ಪುರಂದರ ಹೆಗ್ಡೆ, ತಾಪಂ ಇಒ ಸಿಪ್ರಿಯಾನ್ ಮಿರಾಂದಾ, ಬಿಇಒ ಶಿವಪ್ರಕಾಶ್, ಬಿಆರ್‌ಸಿ ಸಂಯೋಜಕ ರಾಜೇಶ್, ಹಿರಿಯ ಸಾಹಿತಿ ಬಸ್ತಿ ವಾಮನ ಶೆಣೈ, ಡಿಡಿಪಿಐ ವೈ.ಶಿವರಾಮಯ್ಯ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು.

ಸುಡು ಬಿಸಿಲು ಇದ್ದಾಗ ಸಭಾ ಕಾರ್ಯಕ್ರಮ ನಡೆದ ಕಾರಣ ಕ್ರೀಡಾಕೂಟ ಆರಂಭಗೊಳ್ಳಲಿಲ್ಲ. ಬಳಿಕ ಸ್ಪರ್ಧಾಳುಗಳು ತಮ್ಮ ಸಾಮರ್ಥ್ಯ ತೋರಿಸಲು ಸಜ್ಜಾಗಿ ಕೆಲ ಹೊತ್ತು ಕ್ರೀಡಾಕೂಟ ನಡೆಯಿತು. ಆದರೆ ಮಧ್ಯಾಹ್ನದ ಬಳಿಕ ಮಳೆ ತನ್ನ ನಿಜರೂಪ ತೋರಿಸಿತು. ಟ್ರ್ಯಾಕ್ ಒದ್ದೆಯಾಯಿತು. ಸ್ಪರ್ಧೆ ನಿಂತಿತು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ