• ಡಾ.ಎ.ಜಿ.ರವಿಶಂಕರ್
  • ಅಂಕಣ: ಪಾಕಶಾಲೆಯೇ ವೈದ್ಯಶಾಲೆ

ನೀರು ಎನ್ನುವುದು ಪ್ರತಿಯೊಂದು ಜೀವ ದ್ರವ್ಯಗಳ ಅವಿಭಾಜ್ಯ ಅಂಗ. ನೀರನ್ನು ಹೊರತು ಪಡಿಸಿ ಜೀವನ ಅಸಾಧ್ಯ. ಹೇಗೆ ನೀರು ನಿತ್ಯ ಬಳಕೆಗೆ ಪ್ರಾಮುಖ್ಯವಾಗಿದೆ,ಹಾಗೆಯೇ ಆರೋಗ್ಯದ ದೃಷ್ಟಿಯಿಂದ ಸಹ ಅತ್ಯಂತ ಪ್ರಧಾನ ದ್ರವ್ಯವಾಗಿದೆ.

ಬಾಹ್ಯ ಉಪಯೋಗಗಳು:

  1. ಅತಿ ಆದ ಜ್ವರದಿಂದ ಬಳಲುತ್ತಿದ್ದರೆ ಮೈ ಮೇಲೆ ತಣ್ಣೀರನ್ನು ಸುರಿಯಬೇಕು. ಇದರಿಂದ ಜ್ವರದ ತಾಪ ಕಡಿಮೆಯಾಗುತ್ತದೆ.
  2. ಬೆಸಿಲಿನ ಬೇಗೆಯಿಂದ ಅಥವಾ ಇನ್ನಾವುದೇ ಕಾರಣದಿಂದಾಗಿ ತಲೆ ಸುತ್ತುವಿಕೆ ಇದ್ದಾಗ ಮುಖಕ್ಕೆ ತಣ್ಣೀರನ್ನು ಚಿಮುಕಿಸಬೇಕು ಅಥವಾ ತಣ್ಣೀರಿನಲ್ಲಿ ಮುಖ ತೊಳೆಯಬೇಕು.
  3. ಅಧಿಕ ರಕ್ತದ ಒತ್ತಡ ಇದ್ದಾಗ ನೆತ್ತಿಗೆ ತಣ್ಣೀರನ್ನು ಸುರಿಯಬೇಕು
  4. ಮೈಗ್ರೈನ್ ತಲೆನೋವಿನಿಂದ ಬಳಲುತ್ತಿರುವವರು ತಣ್ಣೀರಿನಲ್ಲಿ ತಲೆಗೆ ಸ್ನಾನಮಾಡಬೇಕು
  5. ಅಪಸ್ಮಾರದ ಲಕ್ಷಣ ಕಂಡು ಬಂದಾಗ ಮುಖದ ಮೇಲೆ ತಣ್ಣೀರು ಚಿಮುಕಿಸಬೇಕು.
  6. ಕಣ್ಣು ಉರಿ ಸಮಸ್ಯೆ ಇದ್ದಾಗ ತಣ್ಣೀರಿನಲ್ಲಿ ಅದ್ದಿದ ಬಟ್ಟೆಯನ್ನು ಕಣ್ಣಿನ ಮೆಲಿಡಬೇಕು ಅಥವಾ ತಣ್ಣೀರು ತುಂಬಿದ ಲೋಟದಲ್ಲಿ ಕಣ್ಣನ್ನು ಮುಳುಗಿಸಿ ಇಡಬೇಕು.
  7. ಮುಟ್ಟಿನ ಸಮಯದಲ್ಲಿ ತಲೆನೋವು ಕಾಣಿಸಿಕೊಂಡಾಗ ಹೊಟ್ಟೆಯಮೇಲೆ ತಣ್ಣೀರಿನ ಪಟ್ಟಿ ಹಾಕಬೇಕು ಅಥವಾ ತಣ್ಣೀರಿನಲ್ಲಿ ಸೊಂಟ ಮುಳುಗುವ ಹಾಗೆ ಕುಳಿತುಕೊಳ್ಳಬೇಕು.
  8. ಗಂಡಸರಲ್ಲಿ ಪ್ರಾಸ್ಟೇಟ್ ಗ್ರಂಥಿಯ ಸಮಸ್ಯೆ ಇದ್ದರೆ ಸಾಧಾರಣ 3 ವಾರಗಳ ಕಾಲ ದಿನಕ್ಕೆ 30 ನಿಮಿಷಗಳಷ್ಟು ಸಮಯ ತಣ್ಣೀರಿನಲ್ಲಿ ಸೊಂಟ ಮುಳುಗುವ ಹಾಗೆ ಕುಳಿತುಕೊಳ್ಳಬೇಕು.
  9. ಕಾಲಿನ ಅಡಿ ಅಥವಾ ಅಂಗಾಲು ಉರಿ ಹಾಗು ಬಿಸಿ ಇದ್ದರೆ ತಣ್ಣೀರಿನಲ್ಲಿ ಕಾಲು ಮುಳುಗಿಸಿ ಇಡಬೇಕು.
  10. ಕಾಲು ಆಥವಾ ಕೈ ಉಳುಕಿದಾಗ ಆ ಜಾಗಕ್ಕೆ ಕೂಡಲೇ ತಣ್ಣೀರು ಪಟ್ಟಿ ಹಾಕಬೇಕು.ಇದರಿಂದ ನೋವು ಹಾಗು ಬಾವು ಕಡಿಮೆಯಾಗುತ್ತದೆ.
  11. ಶರೀರಕ್ಕೆ ಏಟು ಬಿದ್ದು ರಕ್ತ ಹೆಪ್ಪು ಕಟ್ಟಿದ ಬಾವು ಮೂಡಿದಾಗ ಕೂಡಲೇ ತಣ್ಣೀರು ಪಟ್ಟಿ ಹಾಕ ಬೇಕು. ಇದರಿಂದ ಒಳಗೆ ರಕ್ತಸ್ರಾವ ಆಗುವುದು ನಿಲ್ಲುತ್ತದೆ.
  12. ಶರೀರಕ್ಕೆ ಸಣ್ಣ ಪ್ರಮಾಣದ ಗಾಯ ಆಗಿ ರಕ್ತ ಸ್ರಾವ ಆಗುವುದಿದ್ದರೆ ಗಾಯದ ಮೇಲೆ ತಣ್ಣೀರ ಧಾರೆ ಎರೆಯಬೇಕು.
  13. ಬೆಂಕಿ ತಾಗಿ ಗಾಯವಾದ ಕೂಡಲೇ ಉರಿ ಹಾಗು ನೋವು ಶಮನವಾಗುವ ತನಕ ಗಾಯವಾನು ತಣ್ಣೀರಿನಲ್ಲಿ ಇಡಬೇಕು ಅಥವಾ ಧಾರೆ ಎರೆಯಬೇಕು.
  14. ಬೆನ್ನು ಹಾಗು ಸೊಂಟ ನೋವು ಇರುವವರು ತಣ್ಣೀರಿನಲ್ಲಿ ನೇರವಾಗಿ ಮಲಗಬೇಕು.

ಆಭ್ಯಂತರ ಉಪಯೋಗಗಳು …ಮುಂದಿನವಾರ …  

 

Dr. Ravishankar A G

ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಎಂ.ಎಸ್. (ಸ್ನಾತಕೋತ್ತರ) ಪದವೀಧರರಾಗಿರುವ ಡಾ.ರವಿಶಂಕರ ಎ.ಜಿ, ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಮಹಾವಿದ್ಯಾಲಯ ಸ್ನಾತಕೋತ್ತರ ವಿಭಾಗ ಪ್ರಾಧ್ಯಾಪಕರು. ವಿಟ್ಲದಲ್ಲಿ ಚಿಕಿತ್ಸಾಲಯವನ್ನೂ ಹೊಂದಿದ್ದಾರೆ. ಮೂಲವ್ಯಾಧಿ, ಭಗಂಧರ, ಸೊಂಟನೋವು, ವಾತರೋಗ, ಶಿರಶೂಲ ಇತ್ಯಾದಿಗಳಲ್ಲಿ ಕ್ಷಾರಕರ್ಮ, ಅಗ್ನಿಕರ್ಮ, ರಕ್ತಮೋಕ್ಷಣ ಮೊದಲಾದ ವಿಶೇಷ ಚಿಕಿತ್ಸೆ ನೀಡುವುದರಲ್ಲಿ ಪರಿಣತರು.

Recent Posts