ಬಂಟ್ವಾಳ

ಜೊತೆಜೊತೆಯಲಿ ಸೀಸನ್ 2 : ಯೋಧರಿಗೊಂದು ಸೆಲ್ಯೂಟ್

ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಸೇವಾದಳದ ವತಿಯಿಂದ ಪೊಸಳ್ಳಿ ಕುಲಾಲ ಸಮುದಾಯ ಭವನದಲ್ಲಿ  ನಡೆದ ಯೋಧರಿಗೊಂದು ಸೆಲ್ಯೂಟ್ ಕಾರ್ಯಕ್ರಮ ಅರ್ಥಪೂರ್ಣವಾಗಿ ಮೂಡಿಬಂದಿದೆ.

ಜಾಹೀರಾತು

ಜೊತೆಜೊತೆಯಲಿ ಸೀಸನ್ 2 ಕಾರ್ಯಕ್ರಮದಡಿ ಕುಲಾಲ ಸಮುದಾಯಕ್ಕೆ ಸೇರಿದ ಬಂಟ್ವಾಳ ತಾಲೂಕಿನ  16 ಮಂದಿ ಯೋಧರಿಗೆ ಕುಲಾಲ ರತ್ನ  ಪ್ರಶಸ್ತಿ ನೀಡಿ ಗೌರವಿಸಿದ ಈ ಕಾರ್ಯಕ್ರಮ ಸಾರ್ಥಕತೆ ಮೆರೆಯಿತು.  ಸೇವಾ ನಿವೃತ್ತಿ  ಹೊಂದಿರುವ ಯೋಧರಾದ ಮಾಣಿ ಉಮೇಶ್ ಮೂಲ್ಯ, ಕೊಡಾಜೆ ನಿತೀಶ್ ಕುಲಾಲ್, ಮಾಣಿ ಮಾಧವ ಕುಲಾಲ್, ನೇರಂಬೋಳು ನಾರಾಯಣ ಮೂಲ್ಯ, ಅಮ್ಟಾಡಿ ಆನಂದ ಮೂಲ್ಯ, ನೆಟ್ಲ ದಿನೇಶ್ ಕುಲಾಲ್, ಪೇರಮೊಗ್ರು ಜನಾರ್ದನ ಮೂಲ್ಯ, ಸಂಗಬೆಟ್ಟು ಮೋಹನ ಮೂಲ್ಯ, ಬಂಟ್ವಾಳ ಹರೀಶ ಮೂಲ್ಯ, ಕಡೆಗೋಳಿ ನಾರಾಯಣ ಮೂಲ್ಯ, ಬಿ.ಸಿ.ರೋಡು ಬಾಲಚಂದ್ರ, ವಗ್ಗ ವೆಂಕಪ್ಪ ಮೂಲ್ಯ, ಪಣೆಕಲ ಗಣೇಶ್ ಮೂಲ್ಯ, ಬಿ.ಸಿ.ರೋಡು ಚಂದಪ್ಪ ಮೂಲ್ಯ,  ಪ್ರಸ್ತುತ ಕರ್ತವ್ಯದಲ್ಲಿರುವ  ಪ್ರಜ್ವಲ್ ಮಡಿವಾಳಪಡ್ಪು ಅವರಿಗೆ ಸೇವಾದಳದ ವತಿಯಿಂದ ಕುಲಾಲ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ರಾಧಕೃಷ್ಣ ಬಂಟ್ವಾಳ ಹಾಗೂ   ಹೇಮಚಂದ್ರ ಕೈರಂಗಳ ನಿರೂಪಣೆಯಲ್ಲಿ ನಮಸ್ತೆ ಇಂಡಿಯಾ ವೆರೈಟಿ ಸ್ಪರ್ಧೆ ವಿಶಿಷ್ಟವಾಗಿ ಮೂಡಿ ಬಂತು. ಚಾಪರ್‍ಕ ತಂಡದ ತಿಮ್ಮಪ್ಪ ಕುಲಾಲ್, ಸುರೇಶ್ ಕುಲಾಲ್, ಪಾಂಡುರಂಗ ಅಡ್ಯಾರ್, ಲಕುಮಿ ತಂಡದ ಎಚ್ಕೆ ನಯನಾಡು, ಬಲೆ ತೆಲಿಪಾಲೆ ಖ್ಯಾತಿಯ ನಿತಿನ್ ತುಂಬೆ ಹಾಗೂ ಸ್ಥಳೀಯ ಕಲಾವಿದರಾದ ಗಣೇಶ್ ದುಗನಕೋಡಿ,  ರಶ್ಮಿ ಅಲೆತ್ತೂರು, ಬಾಲಕೃಷ್ಣ ಅಗ್ರಬೈಲು ಹಾಗೂ ರಾಜೇಶ್  ಅಭಿನಯದ ಹಲೋ ಯಮಲೋಕ ಕಾರ್ಯಕ್ರಮ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು.

ಆರಂಭದಲ್ಲಿ ಕುಲಾಲ ಸುಧಾರಕ ಸಂಘದ ಅಧ್ಯಕ್ಷ ಸತೀಶ್ ಕುಲಾಲ್ ಕಾರ್ಯಕ್ರಮ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಂಟ್ವಾಳ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಬಂಗೇರ, ಮಾಣಿಲ ಮಹಾಲಕ್ಷ್ಮೀ ಸೇವಾ ಸಮಿತಿಯ ಅಧ್ಯಕ್ಷ ಮಚ್ಚೇಂದ್ರ ಸಾಲ್ಯಾನ್, ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಡಿ.ಂ.ಕುಲಾಲ್, ಕಟ್ಟಡ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಉಪಸ್ಥಿತರಿದ್ದರು. ಸೇವಾದಳಪತಿ ಸದಾನಂದ ಬಂಗೇರ, ಕಾರ್ಯಕ್ರಮ ಸಂಯೋಜಕ ಯಾದವ ಅಗ್ರಬೈಲು ವೇದಿಕೆಯಲ್ಲಿದ್ದರು. ಇದೇ ವೇಳೆ  ಕುಂಭೋದರಿ ಯಕ್ಷ ಬಳಗವನ್ನು ಯಕ್ಷಗಾನ ಕಲಾವಿದ ಪ್ರಸಾದ್ ಸಿದ್ದಕಟ್ಟೆ ಉದ್ಘಾಟಿಸಿದರು.

ಜಾಹೀರಾತು

 

 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ