ಬದ್ರಿಯಾ ಯಂಗ್ ಮೆನ್ಸ್ ಅಸೋಸಿಯೇಷನ್ ಮಂಚಿ ಕಯ್ಯೂರು ಇದರ ಪಂಚ ವಾರ್ಷಿಕೋತ್ಸವದ ಪ್ರಯುಕ್ತ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಹಾಗೂ ಲಯನ್ಸ್ ಕ್ಲಬ್ ಕೊಳ್ನಾಡು ಸಾಲೆತ್ತೂರು ಇದರ ಜಂಟಿ ಆಶ್ರಯದಲ್ಲಿ ವೆನ್ಲಾಕ್ ಆಸ್ಪತ್ರೆ ಮಂಗಳೂರು ಸಹಯೋಗದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರ ಅ.೮ರಂದು ಭಾನುವಾರ ಬೆಳಿಗ್ಗೆ ೯:೩೦ ರಿಂದ ಮಧ್ಯಾಹ್ನ ೧:೩೦ ರ ತನಕ ಲಯನ್ಸ್ ಕ್ಲಬ್ ಮಂಚಿಕಟ್ಟೆಯಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಬದ್ರಿಯಾ ಯಂಗ್ ಮೆನ್ಸ್ ಅಸೋಸಿಯೇಷನ್ ಮಂಚಿ ಕಯ್ಯೂರು ಅಧ್ಯಕ್ಷ ಜನಾಬ್ ಡಿ.ಎನ್. ಫಾರೂಕ್ ಅಧ್ಯಕ್ಷತೆಯಲ್ಲಿ ರಿಫಾಯಿಯ್ಯಾ ಜುಮಾ ಮಸೀದಿ ಮಂಚಿ ಕೊಳ್ನಾಡು ಇದರ ಅಧ್ಯಕ್ಷ ಅಬೂಬಕ್ಕರ್ ಲತೀಫಿ ಎಣ್ಮೂರು ದುವಾಶೀರ್ವಚನದೊಂದಿಗೆ, ರಿಫಾಯಿಯ್ಯಾ ಜುಮಾ ಮಸೀದಿ ಮಂಚಿ,ಕೊಳ್ನಾಡು ಇದರ ಖತೀಬ್ ಸಾಲಿಂ ಸಅದಿ ಅಲ್ ಅಫ್ಳಲಿ ಮಂಚಿ ಇವರು ಉದ್ಘಾಟಿಸಲಿದ್ದಾರೆ. ಅಶ್ರಫ್ ಮಂಚಿ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ.
ಲಯನ್ಸ್ ರೇಮಂಡ್ ರೊಝಾರಿಯೋ,ಲಯನ್ ಗೋಪಾಲ್ ಆಚಾರ್ಯ,ಎಂ.ಡಿ. ಮಂಚಿ, ಮುಸ್ತಫಾ ಅಡ್ಡೂರು ದೆಮ್ಮಲೆ, ಸತ್ತಾರ್ ಕೃಷ್ಣಾಪುರ, ಅಶ್ರಫ್ ಕಲ್ಕಟ್ಟ, ದಿನೇಶ್ ಕುಮಾರ್ ಕಯ್ಯೂರು, ಬದ್ರುದ್ದೀನ್ ಕಯ್ಯೂರು, ಮುಹಮ್ಮದ್ ಮಂಚಿ, ಮೋಹನ್ ದಾಸ್ ಶೆಟ್ಟಿ, ಇಬ್ರಾಹಿಂ ಜಿ.ಎಂ., ಎಂ.ಎಸ್.ಸುಲೈಮಾನ್, ಆಸಿಫ್ ಸಿ.ಎಚ್.,ಹನೀಫ್ ಮಂಚಿ,ಎ.ಕೆ. ಸುಲೈಮಾನ್, ಗಫ್ಫಾರ್ ಕುಕ್ಕಾಜೆ ಮುಂತಾದ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.