ಎಲ್.ಸಿ.ಆರ್. ಇಂಡಿಯನ್ ವಿದ್ಯಾಸಂಸ್ಥೆ ಕಕ್ಯಪದವಿನಲ್ಲಿ ಎಲ್. ಸಿ.ಆರ್. ಇಂಡಿಯನ್ ಪದವಿ ಪೂರ್ವ ಕಾಲೇಜು ವಿಭಾಗದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ರಾಷ್ಟ್ರೀಯ ಸೇವಾ ಯೋಜನೆಯ ದಿನಾಚರಣೆಯ ಅಂಗವಾಗಿ ಪ್ರ ಶಿಕ್ಷಣ ಕಾರ್ಯಕ್ರಮದೊಂದಿಗೆ ಎನ್.ಎಸ್.ಎಸ್. ದಿನಾಚರಣೆಯು ಜರುಗಿತು.
ಸಂಪನ್ಮೂಲ ವ್ಯಕ್ತಿಯಾಗಿ ಪ್ರೊ ಜೋಸೆಫ್ ಎನ್.ಎಮ್. ಸಹ ಪ್ರಾಧ್ಯಾಪಕರು ಅರ್ಥಶಾಸ್ತ್ರ ವಿಭಾಗ ಸೇಕ್ರೆಡ್ ಹಾಟ್೯ ಕಾಲೇಜು ಮಡಂತ್ಯಾರು ಇವರು ಭಾಗವಹಿಸಿ ರಾಷ್ಟ್ರೀಯ ಸೇವಾ ಯೋಜನೆ ಬಗೆಗಿನ ಸಂಪೂರ್ಣ ಮಾಹಿತಿಯನ್ನು ನೀಡಿ, ಶ್ರಮದ ಮಹತ್ವದ ಬಗ್ಗೆ ಅರಿವು ಮೂಡಿಸಿ ವಿದ್ಯಾರ್ಥಿಗಳಿಗೆ ಎನ್.ಎಸ್.ಎಸ್. ಗೀತೆಗಳನ್ನು ಹಾಡಿಸಿ ತರಬೇತಿ ನೀಡಿದರು.
ಸಂಸ್ಥೆಯ ಪ್ರಾಂಶುಪಾಲರಾದ ಪ್ರವೀಣ್ ಎ. ಅಧ್ಯಕ್ಷತೆ ವಹಿಸಿದ್ದರು. ಘಟಕದ ಯೋಜನಾಧಿಕಾರಿ ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶಿವರಾಜ್ ಗಟ್ಟಿ , ಕಲಾ ವಿಭಾಗದ ಮುಖ್ಯಸ್ಥೆ ವಿಂದ್ಯಾಶ್ರೀ ಹಾಗೂ ಘಟಕದ ನಾಯಕ ಬಿ.ಮಿಥುನ್ ಕುಮಾರ್, ನಾಯಕಿ ರೋಶಲ್ ಸವಿತಾ ಉಪಸ್ಥಿತರಿದ್ದರು. ಘಟಕದ ಯೋಜನಾಧಿಕಾರಿ ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶಿವರಾಜ್ ಗಟ್ಟಿ ಸ್ವಾಗತಿಸಿ ಅತಿಥಿ ಪರಿಚಯಿಸಿದರು, ಉಪನ್ಯಾಸಕಿ ಸೌಮ್ಯ ಎನ್. ವಂದಿಸಿ, ಉಪನ್ಯಾಸಕಿ ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು.