ಕಲ್ಲಡ್ಕ

ಜನರ ಕಷ್ಟಕ್ಕೆ ಸ್ಪಂದಿಸಿದರೆ ಸಹಕಾರ ಸಂಘ ಅಭ್ಯುದಯ

ಕಲ್ಲಡ್ಕ ರೈ.ಸೇ.ಸ.ಸಂಘದ ಬೋಳಂತೂರು ಶಾಖೆ ಉದ್ಘಾಟಿಸಿ ಡಾ.ಎಂ.ಎನ್.ರಾಜೇಂದ್ರ ಕುಮಾರ್

ಸಹಕಾರಿ ಸಂಘಗಳು ಕೇವಲ ಠೇವಣಿ, ಸಾಲ ವಿತರಣೆ, ವಸೂಲಾತಿಗೆ ಸೀಮಿತವಾಗದೆ ಜನರ ಕಷ್ಟ, ಸುಖಗಳಿಗೆ ಸ್ಪಂದಿಸಿದರೆ ಅಭ್ಯುದಯ ಸಾಧ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಡಾ. ಎಂ.ಎನ್.ರಾಜೇಂದ್ರಕುಮಾರ್ ಹೇಳಿದರು.

ಬುಧವಾರ ಕಲ್ಲಡ್ಕ ಸಮೀಪ ಬೋಳಂತೂರಿನ ಉತ್ತಮನಗರ ಎಂಬಲ್ಲಿ ಕಲ್ಲಡ್ಕ ರೈತರ ಸೇವಾ ಸಹಕಾರ ಸಂಘ ನಿಯಮಿತದ ನೂತನ ಎರಡನೇ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜನರೊಂದಿಗೆ ಬೆರೆತು ವ್ಯವಹರಿಸುವ ಕೆಲಸದೊಂದಿಗೆ ಹಲವು ಪ್ರಥಮಗಳನ್ನು ಸಾಸುವ ಮೂಲಕ ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘ ಶ್ಳಾಘನೀಯ ಸೇವೆ ನೀಡುತ್ತಿದೆ ಎಂದು ಅಭಿನಂದಿಸಿದರು. ಸಂಘವು ಇಟ್ಟಿರುವ ಬೇಡಿಕೆಗೆ ಶೀಘ್ರವಾಗಿ ಸ್ಪಂದಿಸುವ ಭರವಸೆ ನೀಡಿದರಲ್ಲದೆ ಈ ಶಾಖೆ ಐದು  ಗ್ರಾಮಗಳಲ್ಲೂ ಶಾಖೆಯನ್ನು ತೆರಯಲಿ ಎಂದು ಅಶಯ ವ್ಯಕ್ತ ಪಡಿಸಿದರು. ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘ ಕ್ಯಾಶ್‌ಲೆಸ್ ವ್ಯವಹಾರ ಮೂಲಕ ಜಿಲ್ಲೆಯಲ್ಲೇ ಗಮನ ಸೆಳೆದಿದೆ. ಈ ಸಂಘದ ಕಂಪ್ಯೂಟರ್ ಖರೀದಿಗೆ ೧ ಲಕ್ಷ ರೂವನ್ನು ಡಿಸಿಸಿ ಬ್ಯಾಂಕ್ ನೀಡಲಿದ್ದು, ಸ್ವಸಹಾಯ ಗುಂಪುಗಳ ಪ್ರೇರಕರನ್ನು ಒದಗಿಸುತ್ತೇವೆ. ಹೊಸ ಯೋಜನೆಗಳಿಗೆ ಅಗತ್ಯ ಬೇಡಿಕೆ ಪೂರೈಸಲು ಬದ್ಧ ಎಂದು ರಾಜೇಂದ್ರ ಕುಮಾರ್ ಹೇಳಿದರು.

ರೈತನಿಗೆ ಬೆಲೆ ಸಿಕ್ಕಾಗಲಷ್ಟೇ ಅಭಿವೃದ್ಧಿ:

ಸಂಘದ ಬೋಳಂತೂರು ಶಾಖೆ ಉದ್ಘಾಟಿಸಿ ಮಾತನಾಡಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಡಾ. ಪ್ರಭಾಕರ ಭಟ್, ದೇಶಕ್ಕೆ ಅನ್ನ ಕೊಡುವ ರೈತನಿಗೆ ಬೆಲೆ ಸಿಕ್ಕಾಗ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯ. ಈ ಹಿನ್ನೆಲೆಯಲ್ಲಿ ಜನರ ಬಳಿಗೆ ವ್ಯವಸ್ಥೆ ತೆರಳುವ ಪರಿಕಲ್ಪನೆ ಇಂದು ಹೆಚ್ಚು ಜನಪ್ರಿಯವಾಗುತ್ತಿದ್ದು, ಸಹಕಾರಿ ಸಂಘಗಳು ಈ ದಿಸೆಯಲ್ಲಿ ಕಾರ್ಯೋನ್ಮುಖವಾಗಿವೆ ಎಂದರು. ಜನರಿಗೆ ಸುಲಭವಾಗುವಂತೆ ವ್ಯವಸ್ಥೆಯನ್ನು ಒದಗಿಸಬೇಕು. ರೈತ ಸಶಕ್ತನಾದರೆ ದೇಶ ಸುಭಿಕ್ಷವಾಗಲು ಸಾಧ್ಯ, ಅಂತ್ಯೋದಯದಲ್ಲಿರುವ  ಜನಸಾಮಾನ್ಯನಿಗೆ ಯಾವುದೇ  ಯೋಜನೆಗಳು ತಲುಪಿದಾಗ ರಾಷ್ಟ್ರದ ಉದ್ದಾರ ಸಾಧ್ಯ ಎಂದು ಹೇಳಿದರು.

ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಮಾತನಾಡಿ, ಸಹಕಾರಿ ತತ್ವಗಳಡಿಯಲ್ಲಿ ಬೆಳೆದುಬಂದ ಸಂಘಗಳು ಜನರೊಂದಿಗೆ ಪ್ರಗತಿಶೀಲರಾಗಿ ಮುನ್ನಡೆದಿದೆ ಎಂದರು. ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜಾರಾಮ ಭಟ್, ಟಿ.ಜಿ ಮಾತನಾಡಿ ಕಲ್ಲಡ್ಕ ವ್ಯವಸಾಯ ಸೇವಾ ಸಹಕಾರಿ ಸಂಘ ಜಿಲ್ಲೆಯ ಇತರ ಸಂಘಗಳಿಗೆ ಮಾದರಿಯಾಗಲಿ ಎಂದು ಶುಭ ಹಾರೈಸಿದರು.

ಬೋಳಂತೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಚಂದ್ರಶೇಖರ ರೈ ಮಾತನಾಡಿ, ಗ್ರಾಮದ ಅಭ್ಯುದಯಕ್ಕಾಗಿ ಪಕ್ಷಬೇಧ ಮರೆತು ಕೆಲಸ ಮಾಡಬೇಕು, ಸಂಘದ ಏಳಿಗೆಗೆ ಸರ್ವ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಜನರ ಬಳಿಗೆ ಸೇವೆ:

ಮಾಜಿ ಶಾಸಕ, ಕಲ್ಲಡ್ಕ ರೈ.ಸೇ.ಸ.ಸ.ನಿ ಅಧ್ಯಕ್ಷ ಕೆ.ಪದ್ಮನಾಭ ಕೊಟ್ಟಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದ ಕಾರ್ಯ ವ್ಯಾಪ್ತಿಯು ಗೋಳ್ತಮಜಲು, ಅಮ್ಟೂರು , ಬಾಳ್ತಿಲ, ವೀರಕಂಭ, ಬೋಳಂತೂರು ಗ್ರಾಮಗಳು ಸೇರಿದಂತೆ ಒಟ್ಟು ೫ ಗ್ರಾಮ ವ್ಯಾಪ್ತಿಯನ್ನು ಒಳಗೊಂಡಿದೆ. ಪ್ರಸ್ತುತ ಪ್ರಧಾನ ಕಛೇರಿಯನ್ನು  ಕಲ್ಲಡ್ಕದಲ್ಲಿ ಹಾಗೂ ಶಾಖೆಯನ್ನು ವೀರಕಂಭದಲ್ಲಿ ಹೊಂದಿರುತ್ತದೆ. ಸಂಘದ ಕಾರ್ಯವ್ಯಾಪ್ತಿಯ ಬೋಳಂತೂರು ಗ್ರಾಮದ ಸದಸ್ಯರು ಮತ್ತು ಗ್ರಾಹಕರು ಪ್ರಸ್ತುತ ೧೦ ಕಿ.ಮೀ ದೂರದಿಂದ ಮುಖ್ಯ ಕಚೇರಿ ಕಲ್ಲಡ್ಕ ಮತ್ತು ವೀರಕಂಭ ಶಾಖೆಗೆ ಬಂದು ಬ್ಯಾಂಕಿಂಗ್ ವ್ಯವಹಾರ ಕೃಷಿ ಸಾಲ ಮತ್ತು ಇತರ ದಿನನಿತ್ಯದ ವ್ಯವಹಾರ ನಡೆಸುವರೆ ಕಷ್ಟ ಸಾಧ್ಯವಾಗುವುದರಿಂದ ಬೋಳಂತೂರಿನಲ್ಲಿ  ಶಾಖೆ ತೆರೆಯುವುದೆಂದು ಆಡಳಿತ ಮಂಡಳಿ ನಿರ್ಣಯಿಸಿತು ಎಂದರು.

ಮಂಗಳೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಮಂಜುನಾಥ ಸಿಂಗ್, ಎಪಿಎಂಸಿ ಸದಸ್ಯ ನೇಮಿರಾಜ ರೈ, ಬೋಳಂತೂರಿನ ಪ್ರಗತಿಪರ ಕೃಷಿಕ ಮಹಾಬಲ ರೈ, ಬೋಳಂತೂರಿನ ಉದ್ಯಮಿ ಬಿ.ಶಾಂತಾರಾಮ ಶೆಟ್ಟಿ, ಕಟ್ಟಡದ ಮಾಲಿಕ ನಾರಾಯಣ ಟೈಲರ್ ತಾ.ಪಂ.ಸದಸ್ಯ ನಾರಾಯಣ ಕುಲ್ಯಾರ್, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಕೇಶವ ಕಿಣಿ, ಸಂಘ ಉಪಾಧ್ಯಕ್ಷ ಬಿ. ಸುಧಾಕರ ರೈ, ನಿರ್ದೇಶಕರಾದ ಜಯರಾಮ ರೈ, ಪೂವಪ್ಪ್ಪ ಗೌಡ, ವೆಂಕಟ್ರಾಯ ಪ್ರಭು, ಗೋಪಾಲಕೃಷ್ಣ ಭಟ್, ಗಿರಿಯಪ್ಪ ಗೌಡ, ಲೋಕಾನಂದ, ಕೊರಗಪ್ಪ ನಾಕ, ಕಲ್ಲಡ್ಕ ರೈ.ಸೇ.ಸ.ಸ.ನಿ ಮುಖ್ಯ ಕಾರ್‍ಯನಿರ್ವಹಣಾಕಾರಿ ಸುರೇಶ ಕೆ., ಬೋಳಂತೂರು ಶಾಖೆ ವ್ಯವಸ್ಥಾಪಕ ಗೋಪಾಲ ಕೆ. ಉಪಸ್ಥಿತರಿದ್ದರು. ಸಂಘ ಉಪಾಧ್ಯಕ್ಷ ಬಿ.ಸುಧಾಕರ ರೈ ಸ್ವಾಗತಿಸಿದರು. ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭ ಸಾಲಪತ್ರ, ಠೇವಣಿಪತ್ರಗಳನ್ನು ವಿತರಿಸಲಾಯಿತು.  ಇದೇ ಸಂದರ್ಭ ಅರ್ಹ ಫಲಾನುಭವಿಗಳಿಗೆ ಸಂಘದ ವತಿಯಿಂದ ಉಚಿತ ಕನ್ನಡ ವಿತರಣೆ ನಡೆಯಿತು.

VIDEO REPORT:

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts