ಕಲ್ಲಡ್ಕ ಶ್ರೀ ಉಮಾಶಿವ ಕ್ಷೇತ್ರದಲ್ಲಿ ಬುಧವಾರ ಶ್ರೀ ಮಹಾ ಗಣಪತಿ ಹವನ ಪೂರ್ವಕ ಸಗ್ರಹಮಖ ಶ್ರೀ ಚಂಡಿಕಾ ಹವನ ನಡೆಯಿತು. ಸಕಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಗವದ್ಭಕ್ತರು ಲ್ಗೊಂಡು ಶ್ರೀಗುರು, ಶ್ರೀ ಶಕ್ತಿ ಕೃಪೆಗೆ ಪಾತ್ರರಾದರು.
ಬೆಳಗ್ಗೆ ಪುಣ್ಯಾಹ ವಾಚನ, ಕಲಶ ಪ್ರತಿಷ್ಠೆ ಬಳಿಕ ಶ್ರೀ ಚಂಡಿಕಾ ಹವನ ಆರಂಭಗೊಂಡಿತು. ಮಾತೃ ವಿಭಾಗದಿಂದ ಕುಂಕುಮಾರ್ಚನೆ. ಅಲ್ಲದೇ ಸುವಾಸಿನೀ ಪೂಜೆ, ದಂಪತಿ ವಾಯನದಾನ, ಕುಮಾರಿಕಾ ಪೂಜೆ ನೆರವೇರಿತು.
ಇದೇ ಸಂದರ್ಭ ರುದ್ರ ಜಪ, ಏಕಾದಶ ರುದ್ರಾಭಿಷೇಕ ನಡೆಯಿತು. ಗೋ ಸಂಜೀವಿನಿ ಕಾರ್ಯಕ್ರಮದಲ್ಲಿ ಮುಳ್ಳುಂಜ ವೆಂಕಟೇಶ್ವರ ಭಟ್ ಅವರು ಮಾಹಿತಿ ನೀಡಿದರು. ವೇಮೂ ಮುಕುಂದ ಭಟ್ ಅವರು ಧಾರ್ಮಿಕ ಉಪನ್ಯಾಸ ನೀಡಿದರು.
ಮಧ್ಯಾಹ್ನ ಮಹಾ ಮಂಗಳಾರತಿ, ಪ್ರಸಾದ ವಿತರಿಸಲಾಯಿತು. ಮಂಗಳೂರು ಮಂಡಲದ ವೈದಿಕ ವಿಭಾಗ ಪ್ರಧಾನ ಅಮೈ ಶಿವಪ್ರಸಾದ ಭಟ್ ನೇತೃತ್ವ ವಹಿಸಿದ್ದರು. ಮಹಾಮಂಡಲ ಮುಷ್ಟಿಭಿಕ್ಷೆ ಪ್ರಧಾನ ಮಲ್ಲಿಕಾ ಜಿ.ಭಟ್, ಮಂಗಳೂರು ಮಂಡಲ ಅಧ್ಯಕ್ಷ ಸೇರಾಜೆ ಸುಬ್ರಹ್ಮಣ್ಯ ಭಟ್ ಮತ್ತು ಪದಾಧಿಕಾರಿಗಳು, ಪ್ರದಾನ ಗುರಿಕ್ಕಾರ ಉದಯ ಕುಮಾರ ಖಂಡಿಗ, ಉಮಾಶಿವ ಸೇವಾ ಸಮಿತಿ ಅಧ್ಯಕ್ಷ ರಾಕೋಡಿ ಈಶ್ವರ ಭಟ್ ಮತ್ತು ಸದಸ್ಯರು, ಕಲ್ಲಡ್ಕ ವಲಯದ ಅಧ್ಯಕ್ಷ ಯು.ಎಸ್.ಚಂದ್ರಶೇಖರ ಭಟ್ ಮತ್ತು ಪದಾಧಿಕಾರಿಗಳು, ವಿಟ್ಲ, ಕೇಪು ವಲಯ ಪದಾಧಿಕಾರಿಗಳು ಭಾಗವಹಿಸಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…