ವಿಟ್ಲ

ಮರಳು ಪರವಾನಗಿ ಸಮಸ್ಯೆ: ವಿಟ್ಲದಲ್ಲಿ ಪ್ರತಿಭಟನೆ

ಕೇಂದ್ರ ಪರಿಸರ ಇಲಾಖೆಯಿಂದ ನದಿಗಳಿಂದ ಮರಳೆತ್ತುವ ವಿಚಾರದಲ್ಲಿ ನಿರಾಕ್ಷೇಪಣಾ ಪತ್ರ ನೀಡಿ ಸಮಯ ಕಳೆದರೂ, ಮರಳೆತ್ತುವ ಕಾರ್ಯ ಸ್ಥಗಿತವಾಗಿರುವ ಉದ್ದೇಶವೇನು ಎಂದು ದಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು ಪ್ರಶ್ನಿಸಿದ್ದಾರೆ.

ಜಾಹೀರಾತು

ಅವರು ಮಂಗಳವಾರ ವಿಟ್ಲ ಚಂದ್ರನಾಥ ಬಸದಿ ಬಳಿಯಿಂದ ನಾಲ್ಕು ಮಾರ್ಗ ಜಂಕ್ಷನ್ ವರೆಗೆ ಬೃಹತ್ ಮೆರವಣಿಗೆ ನಡೆಸಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದರು.

ಆಗಸ್ಟ್ ೧೫ರಂದು ಜಿಲ್ಲೆಯಲ್ಲಿ ಪರವಾನಿಗೆ ನೀಡಲು ಕೊನೆಯ ದಿನವಾಗಿದ್ದರೂ ಪರವಾನಿಗೆ ನೀಡಲು ತಡವರಿಸಲು ಕಾರಣವೇನು. ಈಗಾಗಲೇ ೧೩೬೪ ಅರ್ಜಿ ಅನುಮತಿಗೆ ಬಂದಿದ್ದು, ೪೦೬ ಅರ್ಜಿ ತೇರ್ಗಡೆಯಾಗಿ ಉಳಿದವು ತಿರಸ್ಕೃತವಾಗಿದೆ. ಅದರಲ್ಲೂ ೫೩ ಅರ್ಜಿಗಳಿಗೆ ಪರವಾನಿಗೆ ನೀಡಲು ನಿರ್ಧರಿಸಿದ ಹಿಂದಿನ ನಿಗೂಢತೆ ಅರಿಯಬೇಕಾಗಿದೆ ಎಂದು ಜಿಲ್ಲಾ ಬಿಜೆಪಿ ಅಧಕ್ಷ ಸಂಜೀವ ಮಠಂದೂರು ಹೇಳಿದರು.

ಜಿಲ್ಲಾ ರೈತ ಮೋರ್ಛಾ ಅಧ್ಯಕ್ಷ ರಾಜೀವ ಭಂಡಾರಿ ಮಾತನಾಡಿ ಗುತ್ತಿಗೆ ಪಡೆದವರು ಒಂದು ಲೋಡ್‌ಗೆ 1800ರೂ ರಾಜಧನ ಪಾವತಿಸಿ ಮರಳನ್ನು ಪಡೆಯುವ ಅವಕಾಶ ಹಿಂದೆ ಇತ್ತು. ಕ್ರಮೇಣ ಈ ಹಣ 3800ಕ್ಕೆ ತಲುಪಿದ್ದು, 2000 ಯಾರಿಗೆ ಹೋಗುತ್ತಿದೆ ಎಂಬ ಮಾಹಿತಿ ಇಲ್ಲ. ಆದರೂ ಜನ ಸಾಮಾನ್ಯರಿಗೆ ೪ರಿಂದ 5 ಸಾವಿರದಲ್ಲಿ ಸಿಗಬೇಕಾದ ಮರಳು ಇದ್ಂದು 20ರಿಂದ 40 ಸಾವಿರಕ್ಕೆ ಏರಿಕೆಯಾಗಿದೆ.  ಕಾರ್ಮಿಕರು ಮರಳಿಲ್ಲದೆ ಕೆಲಸವಿಲ್ಲದೆ ಆತ್ಮಹತ್ಯೆ ಮಾಡುವ ಸ್ಥಿತಿ ತಲುಪಿದೆ ಎಂದು ಹೇಳಿದರು.

ರೈತ ಮೋರ್ಛಾ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ಮಂಡಲ ಯುವ ಮೋರ್ಛಾ ಅಧ್ಯಕ್ಷ ಸುನಿಲ್ ದಡ್ಡು, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಜಗನ್ನಾಥ್ ಸಾಲ್ಯಾನ್, ವಿಟ್ಲ ನಗರ ಬಿಜೆಪಿ ಅಧ್ಯಕ್ಷ ಮೋಹನದಾಸ್ ಉಕ್ಕುಡ, ಕಾರ್ಯದರ್ಶಿ ಉದಯಕುಮಾರ್ ಆಲಂಗಾರು, ಪಟ್ಟಣಪಂಚಾಯಿತಿ ಅಧ್ಯಕ್ಷ ಅರುಣ ಎಂ ವಿಟ್ಲ, ಸ್ಥಾಯೀ ಸಮಿತಿ ಅಧ್ಯಕ್ಷ ರಾಮದಾಸ ಶೆಣೈ, ಸದಸ್ಯರಾದ ಲೋಕನಾಥ ಶೆಟ್ಟಿ, ರವಿಪ್ರಕಾಶ್ ಶಿವಾಜಿನಗರ, ಮಂಜುನಾಥ ಕಲ್ಲಕಟ್ಟ, ಶ್ರೀಕೃಷ್ಣ ವಿಟ್ಲ, ಉಷಾ, ಜಯಂತ್, ಕೇಪು ಗ್ರಾಮ ಪಂಚಾಯಿತಿ ಅಧ್ಯಕ್ಷ ತಾರಾನಾಥ ಆಳ್ವ, ಕೇಪು ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಪುರುಷೋತ್ತಮ ಕಲ್ಲಂಗಳ, ಪುಣಚ ಗ್ರಾಮ ಪಂಚಾಯಿತಿ ಸದಸ್ಯ ಉದಯಕುಮಾರ್ ಪುಣಚ, ಪುಣಚ ಗ್ರಾಮ ಸಮಿತಿ ಅಧ್ಯಕ್ಷ ಹರೀಶ್ ಎಂ, ನಿತ್ಯಾನಂದ ನಾಯಕ್, ಹರೀಶ್ ನಾಯಕ್, ರಾಧಾಕೃಷ್ಣ ನಾಯಕ್, ಕಾನ ಈಶ್ವರ ಭಟ್, ಮನೋಹರ ರೈ ಪೆರುವಾಯಿ, ಇಬ್ರಾಹಿಂ ನೆಲ್ಲಿಗುಡ್ಡೆ ಮಾಮೇಶ್ವರ, ಜಯಂತ್ ಸಿ ಎಚ್ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

 

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಮಂಗಳೂರು ಕಡಲ ತೀರ ʼಕಡಲ ಪವನ ಶಕ್ತಿ ಉತ್ಪಾದನಾ ವಲಯʼವಾಗಿ ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ಮನವಿ

ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)

4 hours ago