Categories: Uncategorized

ಪಾಣೆಮಂಗಳೂರು: ಶ್ರೀಜಿನಗುಣ ಸಂಪತ್ತಿ ಆರಾಧನೆ

ಶ್ರೀ ೧೦೮ ಸನ್ಮತಿ ಸಾಗರ ಮಹಾರಾಜರ ಶಿಷ್ಯರಾದ, ಪರಮ ಪೂಜ್ಯ ೧೦೮ ಮುನಿ ಶ್ರೀ ವೀರಸಾಗರ ಮಹಾರಾಜರು ಪಾಣೆಮಂಗಳೂರು ಶ್ರೀಅನಂತ ನಾಥ ಸ್ವಾಮೀ ಜಿನ ಚೈತ್ಯಾಲಯದಲ್ಲಿ ಭವ್ಯ ಮಂಗಲ ವರ್ಷಾಯೋಗ – ಚಾತುರ್ಮಾಸವನ್ನು ಆಚರಿಸುತ್ತಿದ್ದಾರೆ. ಆ ಪ್ರಯುಕ್ತ ಮುನಿಶ್ರೀಗಳ ಪಾವನ ಸಾನ್ನಿಧ್ಯದಲ್ಲಿ ಶ್ರೀ ಜಿನಗುಣ ಸಂಪತ್ತಿ ಆರಾಧನೆಯನ್ನು ವಜ್ರನಾಭ ಶೆಟ್ಟಿ ಮತ್ತು ಬಂಧುಗಳು, ಅರ್ಕುಳ ಬೀಡು ಹಾಗೂ ಹರಿಶ್ಚಂದ್ರ ಶೆಟ್ಟಿ ಮತ್ತು ಬಂಧುಗಳು, ಪಾಣೆಮಂಗಳೂರು ಪ್ರಾಯೋಜಕತ್ವದಲ್ಲಿ, ಶ್ರಾವಕ ಬಂಧುಗಳ ಭಾಗವಹಿಸುವಿಕೆಯಲ್ಲಿ ನಡೆಯಿತು.

ಜಾಹೀರಾತು

ಪರಮ ಪೂಜ್ಯ ೧೦೮ ಮುನಿ ಶ್ರೀ ವೀರಸಾಗರ ಮಹಾರಾಜರು ಸಾಮೂಹಿಕ ಶ್ರೀ ಜಿನಗುಣ ಸಂಪತ್ತಿ ಆರಾಧನೆಯ ವಿಧಿ- ವಿಧಾನಗಳನ್ನು ಮತ್ತು ಪ್ರತೀ ಪೂಜೆಗಳನ್ನು ವಿವರವಾಗಿ ತಿಳಿಯಪಡಿಸಿದರು.

ಅಪರಾಹ್ನ ಪರಮ ಪೂಜ್ಯ ೧೦೮ ಮುನಿ ಶ್ರೀ ವೀರ ಸಾಗರ ಮಹಾರಾಜರು ಧರ್ಮಸಭೆಯಲ್ಲಿ ಮಂಗಲ ಪ್ರವಚನ ನೀಡಿದರು.

ಧರ್ಮ ಸಭೆಯಲ್ಲಿ ಜೈನ ಸಮಾಜದ ಪ್ರಮುಖರಾದ ಧನ್ಯಕುಮಾರ್ ರೈ, ಬಿಳಿಯೂರು ಗುತ್ತು ಹಾಗೂ ವಜ್ರಕುಮಾರ್ ಜೈನ್, ಉಪ್ಪಿನಂಗಡಿ ಅತಿಥಿಗಳಾಗಿ ಭಾಗವಹಿಸಿದ್ದರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಶ್ರಾವಕರ ಪುಣ್ಯ ಫಲವಾಗಿ ನಮಗೆ  ದಿಗಂಬರ ಮುನಿಗಳ ದರ್ಶನ ಭಾಗ್ಯವೂ ದುರ್ಲಭವಾದ ಈ ಕಾಲದಲ್ಲಿ ಇಬ್ಬರು ಕನ್ನಡದಲ್ಲಿ ಮಾತನಾಡುವ ದಿಗಂಬರ ಮುನಿಗಳ ಚಾತುರ್ಮಾಸ ಆಚರಣೆಯಲ್ಲಿ ಧರ್ಮ ಪ್ರಭಾವನೆಯ ಭಾಗ್ಯ ದೊರೆತಿದೆ ಎಂದು ಧನ್ಯಕುಮಾರ್ ರೈ ಅಭಿಪ್ರಾಯ ವ್ಯಕ್ತಪಡಿಸಿದರು.

ಪರಮ ಪೂಜ್ಯ ೧೦೮ ಮುನಿಶ್ರೀ ವೀರ ಸಾಗರ ಮಹಾರಾಜರು ಮಾತನಾಡಿ, ಧರ್ಮದ ಆಚರಣೆಯಲ್ಲಿ ಶ್ರಧ್ಧೆ, ನಿಷ್ಠೆ ಅಗತ್ಯ. ನಾನು ಎಂಬ ಅಹಂ ಬಿಟ್ಟಾಗ ಮಾತ್ರ ಸಾಧನೆ ಸಾಧ್ಯ. ಈ ರೀತಿಯ ಆಚರಣೆಗಳಿಂದ ಭವ್ಯ ಜೀವಿ ಶ್ರಾವಕರೆಲ್ಲರೂ ಮೋಕ್ಷ ಮಾರ್ಗ ಪಡೆಯಲು ಸಾಧ್ಯ ಎಂದು ದೃಷ್ಟಾಂತ ಕಥೆಗಳೊಂದಿಗೆ ಉಪದೇಶ ನೀಡಿದರು.

ಮಂಗಲ ಪ್ರವಚನದ ನಂತರ ಧರ್ಮಸಭೆಯಲ್ಲಿ ಶಂಕಾ-ಸಮಾಧಾನ ಕಾರ್ಯಕ್ರಮ ನಡೆಯಿತು. ಅನೇಕ ಶ್ರಾವಕ ಬಂಧುಗಳ ಧಾರ್ಮಿಕ ಪ್ರಶ್ನೆಗಳಿಗೆ ಮುನಿ ಮಹಾರಾಜರು ಉತ್ತರಿಸಿ ಶ್ರಾವಕರ ಶಂಕೆಗಳಿಗೆ ಶಾಸ್ತ್ರಗಳ ಆಧಾರಿತ ಉತ್ತರಗಳನ್ನು ತಿಳಿಯಪಡಿಸಿದರು. ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ಶ್ರಾವಕರೂ ಶಂಕಾ-ಸಮಾಧಾನ ಕಾರ್ಯಕ್ರಮದಲ್ಲಿ, ತಮ್ಮ ಪ್ರಶ್ನೆಗಳನ್ನು ಕೇಳಿ ತಮ್ಮ ಉತ್ತರ ಪಡೆದು, ಧರ್ಮದ ಅರಿವು ಹೆಚ್ಚಿಸಿಕೊಳ್ಳಬೇಕೆಂದು ಹೇಳಿದರು.

ಸಾಮೂಹಿಕ ಆರಾಧನೆ ಕಾರ್ಯಕ್ರಮದಲ್ಲಿ ನೆಲ್ಲಿಕಾರು, ಮಂಗಳೂರು, ಮೂಡುಬಿದಿರೆ, ವೇಣೂರು, ಧರ್ಮಸ್ಥಳ, ಕಾರ್ಕಳ, ಹಾಸನ, ಬೆಂಗಳೂರು ಮುಂತಾದ ಕಡೆಗಳಿಂದ ಅನೇಕ ಶ್ರಾವಕ ಬಂಧುಗಳು ಪಾಲ್ಗೊಂಡಿದ್ದರು.

ಚಾತುರ್ಮಾಸ ಸಮಿತಿಯ ರತ್ನಾಕರ್ ಜೈನ್ ಮಂಗಳೂರು, ಧರಣೇಂದ್ರ ಇಂದ್ರ, ಭುವನೇಂದ್ರ ಇಂದ್ರ, ಸುಭಾಷ್ ಚಂದ್ರ ಜೈನ್, ಹರ್ಷರಾಜ್ ಬಲ್ಲಾಳ್, ದೀಪಕ್ ಇಂದ್ರ, ಕೆ. ಪ್ರವೀಣ್ ಕುಮಾರ್, ಆದಿರಾಜ್ ಜೈನ್, ಭರತ್‌ರಾಜ್ ಮುಂತಾದವರು ಉಪಸ್ಥಿತರಿದ್ದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts