ಬಂಟ್ವಾಳ

ಅಕ್ಟೋಬರ್ 1ರಂದು ಜೊತೆಜೊತೆಯಲಿ ಸೀಸನ್ 2

ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಸೇವಾದಳದ ವತಿಯಿಂದ ಪೊಸಳ್ಳಿ ಕುಲಾಲ ಸಮುದಾಯ ಭವನದಲ್ಲಿ ಜೊತೆಜೊತೆಯಲಿ ಸೀಸನ್ 2 ಎನ್ನುವ ವಿಶಿಷ್ಟ ಹಾಗೂ ವಿನೂತನ ಕಾರ್ಯಕ್ರಮ ಅಕ್ಟೋಬರ್ 1 ರಂದು ನಡೆಯಲಿದೆ.

ಜಾಹೀರಾತು

ಕುಲಾಲ ಸಮುದಾಯಕ್ಕೆ ಸೇರಿದ ಬಂಟ್ವಾಳ ತಾಲೂಕಿನ ಎಲ್ಲ ಯೋಧರನ್ನು ಅಭಿನಂದಿಸುವ ಕಾರ್ಯಕ್ರಮ ನಡೆಯಲಿದೆ.

ಈ ಸಂದರ್ಭ ನಿವೃತ್ತಿ ಹೊಂದಿರುವ ಯೋಧರಾದ ಮಾಣಿ ಉಮೇಶ್ ಮೂಲ್ಯ, ಕೊಡಾಜೆ ನಿತೀಶ್ ಕುಲಾಲ್, ಮಾಣಿ ಮಾಧವ ಕುಲಾಲ್, ನೇರಂಬೋಳು ನಾರಾಯಣ ಮೂಲ್ಯ, ಅಮ್ಟಾಡಿ ಆನಂದ ಮೂಲ್ಯ, ನೆಟ್ಲ ದಿನೇಶ್ ಕುಲಾಲ್, ಪೇರಮೊಗ್ರು ಜನಾರ್ದನ ಮೂಲ್ಯ, ಸಂಗಬೆಟ್ಟು ಮೋಹನ ಮೂಲ್ಯ, ಬಂಟ್ವಾಳ ಹರೀಶ ಮೂಲ್ಯ, ಕಡೆಗೋಳಿ ನಾರಾಯಣ ಮೂಲ್ಯ, ಬಿ.ಸಿ.ರೋಡು ಬಾಲಚಂದ್ರ, ವಗ್ಗ ವೆಂಕಪ್ಪ ಮೂಲ್ಯ, ಪಣೆಕಲ ಗಣೇಶ್ ಮೂಲ್ಯ, ಸಂತೋಷ್ ಮುಡಿಪು, ಬಿ.ಸಿ.ರೋಡು ಚಂದಪ್ಪ ಮೂಲ್ಯ ಹಾಗೂ ಪ್ರಸ್ತುತ ಕರ್ತವ್ಯದಲ್ಲಿರುವ ಕಂದೂರು ಪ್ರಜ್ವಲ್ ಇವರನ್ನು ಅಭಿನಂದಿಸಲಾಗುವುದು.

ಸಾಂಸ್ಕೃತಿಕ ವೈವಿಧ್ಯ ಸ್ಪರ್ಧೆ : ಕುಲಾಲ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಸಾಂಸ್ಕೃತಿಕ ವೈವಿಧ್ಯ ಸ್ಪರ್ಧೆ ನಡೆಯಲಿದೆ.  ಆರ್.ಜೆ ಅನುರಾಗ್ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಲಿರುವರು. ಉತ್ತಮ ನಿರೂಪಕ ಹಾಗೂ ಉತ್ತಮ ಕಾರ್ಯಕ್ರಮ ಸಂಯೋಜಕ ಪ್ರಶಸ್ತಿಗಳನ್ನು ನೀಡಲಾಗುವುದು. ಭಾಗವಹಿಸುವ ತಂಡಗಳು ಸೆಪ್ಟೆಂಬರ್ 28ರ ಒಳಗೆ ಹೆಸರು ನೋಂದಾಯಿಸಬಹುದು.

ಜಾಹೀರಾತು

ಯಕ್ಷನಾಟ್ಯ ತರಗತಿಗೆ ಚಾಲನೆ : ಕುಂಭೋದರಿ ಯಕ್ಷ ಬಳಗ ಬಂಟ್ವಾಳ ಇದರ ವತಿಯಿಂದ ಸಮುದಾಯ ಭವನದಲ್ಲಿ ಯಕ್ಷನಾಟ್ಯ ತರಗತಿಯ ಶುಭಾರಂಭವು ಇದೇ ಸಂದರ್ಭದಲ್ಲಿ ನಡೆಯಲಿರುವುದು.

ಹಾಸ್ಯಲಾಸ್ಯ ಕಾರ್ಯಕ್ರಮ : ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಚಾಪರ್‍ಕ ತಂಡದ ತಿಮ್ಮಪ್ಪ ಕುಲಾಲ್, ಸುರೇಶ್ ಕುಲಾಲ್, ಪಾಂಡುರಂಗ ಅಡ್ಯಾರ್, ಲಕುಮಿ ತಂಡದ ಎಚ್ಕೆ ನಯನಾಡು, ಬಲೆ ತೆಲಿಪಾಲೆ ಖ್ಯಾತಿಯ ಅರುಣ್ ಕುಮಾರ್, ನಿತಿನ್ ತುಂಬೆ ಹಾಗೂ ಸ್ಥಳೀಯ ಕಲಾವಿದರಾದ ಗಣೇಶ್ ದುಗನಕೋಡಿ ಹಾಗೂ ರಶ್ಮಿ ಅಲೆತ್ತೂರು ಅಭಿನಯಿಸುವ ವೆಲ್ಕಮ್ ಟು ಯಮಲೋಕ ಎನ್ನುವ ಹಾಸ್ಯ ನಾಟಕ ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸೇವಾದಳದ ದಳಪತಿ ಸದಾನಂದ ಬಂಗೇರ ಹಾಗೂ ಕಾರ್ಯಕ್ರಮ ಸಂಯೋಜಕ ಯಾದವ ಅಗ್ರಬೈಲು ತಿಳಿಸಿದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ