ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾವಿ ಕಾಲೇಜಿನಲ್ಲಿ ಕಾಲೇಜು ಸುವರ್ಣ ಮಹೋತ್ಸವದ ಪ್ರಯುಕ್ತ ಕಾಲೇಜಿನ ಕನ್ನಡ, ಹಿಂದಿ ಮತ್ತು ಸಂಸ್ಕೃತ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಭಾರತೀಯ ಸಾಹಿತ್ಯದಲ್ಲಿ ದಾರ್ಶನಿಕ ಐಕಮತ್ಯ ವಿಷಯದ ಕುರಿತ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಸೆಪ್ಟಂಬರ್ 22ರಂದು ನಡೆಯಲಿದೆ.
ಉಡುಪಿಯ ನಿವೃತ್ತ ಪ್ರಾಂಶುಪಾಲರೂ, ಹಿರಿಯ ಸಾಹಿತಿಯೂ ಆದ ಡಾ| ಪಾದೆಕಲ್ಲು ವಿಷ್ನು ಭಟ್ಟ ವಿಚಾರ ಸಂಕಿರಣ ಉದ್ಘಾಟಿಸಲಿದ್ದಾರೆ. ಕಾಲೇಜಿನ ಸಂಚಾಲಕರಾದ ಶ್ರೀ ಕೂಡಿಗೆ ಪ್ರಕಾಶ್ ಶೆಣೈ ಅಧ್ಯಕ್ಷತೆ ವಹಿಸಲಿದ್ದಾರೆ.
ಕ್ಯಾಲಿಕಟ್ ವಿಶ್ವವಿದ್ಯಾನಿಲಯದ ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ ಪ್ರಮೋದ್ ಕೋವಪ್ರತ್, ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು ಇಲ್ಲಿನ ನಿವೃತ್ತ ಹೆಚ್ಚುವರಿ ಸಹಾಯಕ ಜಂಟಿ ನಿರ್ದೇಶಕರಾದ ಡಾ| ಟಿ.ಎನ್ ಪ್ರಭಾಕರ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಸಂತಶಿಶುನಾಳಶರೀಫ್, ಕಬೀರ್‌ದಾಸ್ ಹಾಗೂ ಶಂಕರಾಚಾರ್ಯ ಇವರುಗಳ ಸಾಹಿತ್ಯದ ಕುರಿತ ಈ ವಿಚಾರ ಸಂಕಿರಣದಲ್ಲಿ ಸುಮಾರು ೫೦ ಜನ ಸಂಶೋಧಕರು ಪ್ರಬಂಧ ಮಂಡನೆ ಮಾಡಲಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ| ಪಾಂಡುರಂಗ ನಾಯಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.