ಪಾಕಶಾಲೆಯೇ ವೈದ್ಯಶಾಲೆ

ಜೋಳದಿಂದ ಪ್ರತಿರೋಧಕ ಶಕ್ತಿ ವೃದ್ಧಿ

  • ಡಾ. ಎ.ಜಿ.ರವಿಶಂಕರ್
  • ಅಂಕಣ: ಪಾಕಶಾಲೆಯೇ ವೈದ್ಯಶಾಲೆ

ಜೋಳ ಎಂದಾಕ್ಷಣ ಕಣ್ಣೆದುರು ಬರುವುದು ಜೋಳಪೂರಿ ಅಥವಾ ಜೋಳದ ರೊಟ್ಟಿ. ಜೋಳವು ಒಂದು ಬಹು ಸತ್ವವುಳ್ಳ ಸಂಪೂರ್ಣ ಆಹಾರ.ಇದು ಶರೀರಕ್ಕೆ ಶಕ್ತಿಯ ಪೂರಕವಾಗಿದ್ದು ಇದರಲ್ಲಿ ವಿಟಮಿನ್ಗಳು,ಖನಿಜಾಂಶಗಳು ಹಾಗು ಲವಣಾಂಶಗಳು ಯಥೇಷ್ಟವಾಗಿ ಅಡಗಿವೆ.

  1. ಇದು ಶರೀರದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ವ್ಯಾಧಿ ಕ್ಷಮತ್ವವನ್ನು ಮತ್ತು ಪ್ರತಿರೋಧ ಶಕ್ತಿಯನ್ನು ಅಧಿಕಗೊಳಿಸುತ್ತದೆ
  2. ಜೋಳದಲ್ಲಿ ನಾರಿನ ಅಂಶ ಇರುವುದರಿಂದ ಇದು ಮಲಬದ್ದತೆಯನ್ನು ನಿವಾರಿಸುತ್ತದೆ
  3. ಜೋಳವು ಮೂಲವ್ಯಾಧಿ ಬರದಂತೆ ತಡೆಯಲು ಸಹಕರಿಸುತ್ತದೆ.
  4. ಮೂತ್ರ ಸರಿಯಾಗಿ ಹೋಗದಿದ್ದಾಗ ಮತ್ತು ಮೂತ್ರದ ನಂಜು ಆದಾಗ ಜೋಳವನ್ನು ಬೇಯಿಸಿದ ನೀರನ್ನು ಕುಡಿಯಬೇಕು.
  5. ಮೂತ್ರಕೋಶದಲ್ಲಿ ಕಲ್ಲಿನ ಸಮಸ್ಯೆ ಇದ್ದರೆ ಜೋಳದ ನೀರನ್ನು ಕುಡಿಯಬೇಕು.
  6. ರಾತ್ರಿ ಹಾಸಿಗೆಯಲ್ಲಿ ಮೂತ್ರ ಪ್ರವೃತ್ತಿ (bed vetting) ಆಗುವುದಿದ್ದರೆ ಜೋಳದ ಗಂಜಿ ಮಾಡಿ ತಿನ್ನಬೇಕು.
  7. ಪೌರುಷ ಗ್ರಂಥಿ (prostate ) ದೊಡ್ಡದಾದಾಗ ಜೋಳದ ಗಂಜಿಯನ್ನು ದಿನಾ ಸೇವಿಸಬೇಕು.
  8. ಇದು ಕರುಳಿನ ಸ್ನೇಹಿಯಾಗಿದ್ದು ಕ್ಯಾನ್ಸರ್ ಬರದಂತೆ ಸಹ ಮಾಡಲು ಸಹಕರಿಸುತ್ತದೆ.
  9. ಜೋಳವು IBS (ಅನಿಯಮಿತ ಮಲಪ್ರವೃತ್ತಿ) ತೊಂದರೆ ಇದ್ದವರಿಗೆ ಉತ್ತಮ ಪಥ್ಯ ಆಹಾರವಾಗಿದೆ.
  10. ಜೋಳದಲ್ಲಿ ಜಿಂಕ್ .ಕಬ್ಬಿಣ ಹಾಗು ತಾಮ್ರದ ಅಂಶಗಳು ಯಥೇಷ್ಟವಾಗಿ ಇರುವುದರಿಂದ ರಕ್ತಹೀನತೆಯನ್ನು ಹೋಗಲಾಡಿಸುತ್ತದೆ.
  11. ಜೋಳವು ಮೂಳೆಯ ದೃಢತೆಯನ್ನು ಕಾಪಾಡುತ್ತದೆ.
  12. ಮಧುಮೇಹವನ್ನು ಹತೋಟಿಯಲ್ಲಿಡಲು ಸಹಕರಿಸುತ್ತದೆ.
  13. ಹೃದಯದ ಆರೋಗ್ಯ ಕಾಪಾಡುವಲ್ಲಿ ಜೋಳವು ಮಹತ್ತರ ಪಾತ್ರವಹಿಸುತ್ತದೆ.
  14. ಶರೀರದಿಂದ ಅಧಿಕ ಹಾಗು ಕೆಟ್ಟ ಕೊಬ್ಬಿನ ಅಂಶವನ್ನು ನಿವಾರಿಸುತ್ತದೆ.
  15. ನಿಯಮಿತವಾಗಿ ಜೋಳವನ್ನು ಸೇವಿಸುವುದರಿಂದ ಕಣ್ಣಿನ ದೃಷ್ಟಿ ಸಾಮರ್ಥ್ಯವು ಅಧಿಕವಾಗುತ್ತದೆ.
  16. ಜೋಳವನ್ನು ಅರೆದು ಚರ್ಮಕ್ಕೆ ಲೇಪಿಸುವುದರಿಂದ ಅದರಲ್ಲಿರುವ ವಿಟಮಿನ್ ಎ ಅಂಶವು ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ಕಾಂತಿಯನ್ನು ನೀಡುತ್ತದೆ.
Dr. Ravishankar A G

ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಎಂ.ಎಸ್. (ಸ್ನಾತಕೋತ್ತರ) ಪದವೀಧರರಾಗಿರುವ ಡಾ.ರವಿಶಂಕರ ಎ.ಜಿ, ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಮಹಾವಿದ್ಯಾಲಯ ಸ್ನಾತಕೋತ್ತರ ವಿಭಾಗ ಪ್ರಾಧ್ಯಾಪಕರು. ವಿಟ್ಲದಲ್ಲಿ ಚಿಕಿತ್ಸಾಲಯವನ್ನೂ ಹೊಂದಿದ್ದಾರೆ. ಮೂಲವ್ಯಾಧಿ, ಭಗಂಧರ, ಸೊಂಟನೋವು, ವಾತರೋಗ, ಶಿರಶೂಲ ಇತ್ಯಾದಿಗಳಲ್ಲಿ ಕ್ಷಾರಕರ್ಮ, ಅಗ್ನಿಕರ್ಮ, ರಕ್ತಮೋಕ್ಷಣ ಮೊದಲಾದ ವಿಶೇಷ ಚಿಕಿತ್ಸೆ ನೀಡುವುದರಲ್ಲಿ ಪರಿಣತರು.

Recent Posts