ಸಾಹಿತ್ಯ ರಚನೆಗೆ ಬದುಕಿನ ಅನುಭವಗಳು ಹಾಗೂ ವಿಸ್ತಾರವಾದ ಓದು ಸಹಕಾರಿಯಾಗುತ್ತದೆ. ಪುಸ್ತಕ ಓದಿನಿಂದ ಆಗುವ ಅನುಭವ ಹಾಗೂ ಸ್ವತಂತ್ರ ಚಿಂತನೆಯಿಂದ ಒಳ್ಳೆಯ ಕೃತಿಗಳ ರಚನೆ ಆಗುತ್ತದೆ. ಶಾಲಾ ಕಾಲೇಜಿನ ಹಂತದಲ್ಲಿ ವಿದ್ಯಾರ್ಥಿಗಳಿಗೆ ಬರವಣಿಗೆ ಕೌಶಲ್ಯವನ್ನು ತಿಳಿಸಿಕೊಡಬೇಕಾಗುತ್ತದೆ. ಆರಂಭದಲ್ಲಿ ಪ್ರಾಸ ಬದ್ದವಾದ ಚುಟುಕುಗಳ ಮೂಲಕ ಪ್ರೇರಣೆ ಪಡೆಯಬಹುದು ಎಂದು ಬಂಟ್ವಾಳ ಎಸ್.ವಿ.ಎಸ್ ಕಾಲೇಜಿನ ಉಪನ್ಯಾಸಕ ಸಾಹಿತಿ ಚೇತನ್ ಮುಂಡಾಜೆ ಹೇಳಿದರು.
ಶ್ರೀರಾಮ ಪದವಿಪೂರ್ವ ಕಾಲೇಜಿನ ಸಾಹಿತ್ಯ ವೇದಿಕೆಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ವತಯಿಂದ ಏರ್ಪಡಿಸಲಾದ ಸಾಹಿತ್ಯ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀರಾಮ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ವಸಂತ ಬಲ್ಲಾಳ್ ಮಾತನಾಡಿ ಸಾಹಿತ್ಯದಲ್ಲಿ ರಾಷ್ಟ್ರೀಯತೆ ಚಿಂತನೆ ನಡೆಯಬೇಕು . ದೇಶ, ಸಂಸ್ಕೃತಿ ನಾಡು ನುಡಿಯ ಬಗ್ಗೆ ಬರೆಯಲು ಯುವ ಕವಿಗಳಿಗೆ ಸೂಕ್ತ ಮಾರ್ಗದರ್ಶನ ಅಗತ್ಯವಿದೆ ಎಂದು ಹೇಳಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಬಂಟ್ವಾಳ ತಾಲೂಕು ಅಧ್ಯಕ್ಷ ಜಯಾನಂದ ಪೆರಾಜೆ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ನ್ಯಾಯವಾದಿ ರಾಜಾರಾಮ ನಾಯಕ್ ಪ್ರಸ್ತಾವನೆ ಗೈದರು. ಪ್ರತಿಭಾರಾಮ ಸಾಹಿತ್ಯ ಸಂಘದ ನಿರ್ದೇಶಕಿ ವಿಲಾಸಿನಿ ಮಾತಾಜಿ ಸ್ವಾಗತಿಸಿದರು.ಉಪನ್ಯಾಸಕಿಯರಾದ ಸ್ವಾತಿ, ಕಾಜಲ್ ಉಪಸ್ಥಿತರಿದ್ದರು.