ಬಿ.ಸಿ.ರೋಡ್ – ಅಡ್ಡಹೊಳೆ ಚತುಷ್ಪಥ ರಸ್ತೆ ಕಾಮಗಾರಿ 2019ರಲ್ಲಿ ಸಂಪೂರ್ಣಗೊಳ್ಳಲಿದೆ ಎಂಬ ವಿಶ್ವಾಸವನ್ನು ಸಂಸದ ನಳಿನ್ ಕುಮಾರ್ ಕಟೀಲ್ ವ್ಯಕ್ತಪಡಿಸಿದ್ದಾರೆ.
ಬಿ.ಸಿ.ರೋಡಿನಲ್ಲಿ ಸರ್ವೀಸ್ ರಸ್ತೆ ಕಾಂಕ್ರೀಟ್ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚತುಷ್ಪಥ ರಸ್ತೆಗೆ ಸಂಬಂಧಿಸಿದಂತೆ ಕಲ್ಲಡ್ಕದಲ್ಲಿ ಫ್ಲೈಓವರ್ ಕುರಿತ ಸಮಸ್ಯೆಗಳು ಮುಗಿದರೆ, 2019ರಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದರು.
ಪಾಣೆಮಂಗಳೂರು, ಮೇಲ್ಕಾರ್ ಸಹಿತ ಹೆದ್ದಾರಿಯಲ್ಲಿ ಬೃಹದಾಕಾರದ ಹೊಂಡಗಳನ್ನು ಮುಚ್ಚಿಸಿ, ದುರಸ್ತಿಗೊಳಿಸುವ ಕಾರ್ಯವನ್ನು ಎಲ್.ಅಂಡ್ ಟಿ ಮಾಡಲಿದೆ. ಇದು ಮಳೆಗಾಲದ ಬಳಿಕ ನಡೆಯಲಿದೆ ಎಂದು ನಳಿನ್ ಹೇಳಿದರು.
ಶೌಚಾಲಯ, ರೆಸ್ಟ್ ರೂಮ್ ಗಳಿಗೆ 3 ಕೋಟಿ ರೂಪಾಯಿಯನ್ನು ಎಂಆರ್‌ಪಿಎಲ್ ಒದಗಿಸಲಿದ್ದು, ಇದಕ್ಕೆ ಪುರಸಭೆ ಜಾಗ ಒದಗಿಸಿಲ್ಲ. ಹೀಗಾಗಿ ಎನ್.ಎಚ್.ಎ.ಐ. ಜಾಗದಲ್ಲಿ ಬಿ.ಸಿ.ರೋಡಿನ ನಾಲ್ಕು ಮಾರ್ಗ ಸೇರುವ ನಾರಾಯಣಗುರು ವೃತ್ತದ ಸಮೀಪ ರೆಸ್ಟ್ ರೂಮ್ ನಿರ್ಮಿಸಲಾಗುವುದು ಎಂದು ನಳಿನ್ ಹೇಳಿದರು.
ನಳಿನ್ ಹೇಳಿದ ಅಭಿವೃದ್ಧಿಗೊಳ್ಳುವ ರಸ್ತೆಗಳು