ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸಭೆ ಸರಪಾಡಿ ಜಯಂತ ಪೂಜಾರಿ ಅವರ ಮನೆಯಲ್ಲಿ ನಡೆಯಿತು. ಪಕ್ಷದ ಹಿರಿಯ ಕಾರ್ಯಕರ್ತ, ಮಾರ್ಗದರ್ಶಿ ಮುನ್ನಲಾಯಿಗುತ್ತು ಮೋಹನದಾಸ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು.
ಬಿಜೆಪಿ ಕ್ಷೇತ್ರ ಅಧ್ಯಕ್ಷ ದೇವದಾಸ ಶೆಟ್ಟಿ ಮತ್ತು ಯುವಮೋರ್ಚಾ ಪ್ರಭಾರಿ, ಪ್ರಧಾನ ಕಾರ್ಯದರ್ಶಿ ರಾಮದಾಸ ಬಂಟ್ವಾಳ ಮಾರ್ಗದರ್ಶನ ನೀಡಿದರು.
ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಹರೀಶ್ ಮೂಡುಶೆಡ್ಡೆ ಮಾತನಾಡಿ ಪ್ರಸಕ್ತ ಸನ್ನಿವೇಶಗಳಲ್ಲಿ ಯುವಮಿತ್ರರು ಸಮಾಜಮುಖಿಯಾಗಿ ತೊಡಗಿಕೊಂಡಾಗ ಪಕ್ಷಸಂಘಟನೆಗೆ ಪೂರಕ ವಾತಾವರಣ ಸೃಷ್ಟಿಯಾಗುತ್ತದೆ ಎಂದು ಹೇಳಿ, ಶಕ್ತಿಕೇಂದ್ರಗಳ ಚಟುವಟಿಕೆ ಅವಲೋಕನ ನಡೆಸಿದರು.
ಬಂಟ್ವಾಳ ಯುವಮೋರ್ಚಾದ ಅಧ್ಯಕ್ಷರಾದ ವಜ್ರನಾಥ ಕಲ್ಲಡ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವಮೋರ್ಚಾದಿಂದ ಗ್ರಾಮಪಂಚಾಯತ್ ಎದುರು ನಡೆಸಿದ ಪ್ರತಿಭಟನೆ ಮತ್ತು ಬೈಕ್ ರ್ಯಾಲಿಯ ಯಶಸ್ಸಿಗೆ ಸದಸ್ಯರನ್ನು ಅಭಿನಂದಿಸಿದರು. ಜಿಲ್ಲಾ ಯುವಮೋರ್ಚಾ ಮತ್ತು ಬಂಟ್ವಾಳ ಕ್ಷೇತ್ರ ಸಮಿತಿ ನಮ್ಮ ಮೇಲೆ ಇಟ್ಟ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಯುವಮೋರ್ಚಾ ಸದಸ್ಯರು ಮುಂದಿನ ದಿನಗಳಲ್ಲಿ ಕರ್ತವ್ಯ ನಿರ್ವಹಿಸಬೇಕಾಗಿ ಕಿವಿಮಾತು ಹೇಳಿದರು.
ಯುವಮೋರ್ಚಾ ಜಿಲ್ಲಾ ಕಾರ್ಯದರ್ಶಿ ಸುದರ್ಶನ್ ಬಜ, ಬಂಟ್ವಾಳ ಕ್ಷೇತ್ರ ಕಾರ್ಯದರ್ಶಿಗಳಾದ ಸೀತಾರಾಮ ಪೂಜಾರಿ. ಸರಪಾಡಿ ಗ್ರಾಮ ಸಮಿತಿ ಅಧ್ಯಕ್ಷರಾದ ರಾಮಕೃಷ್ಣ ಮಯ್ಯ, ಉಪಸ್ಥಿತರಿದ್ದರು.
ಯುವಮೋರ್ಚಾ ಕ್ಷೇತ್ರ ಕಾರ್ಯದರ್ಶಿ ಲೋಕೇಶ್ ಭರಣಿ ಸ್ವಾಗತಿಸಿ, ಕ್ಷೇತ್ರ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂತೋಷ್ ರಾಯಿಬೆಟ್ಟು ವಂದಿಸಿದರು. ಕ್ಷೇತ್ರ ಯುವಮೋರ್ಚಾ ಉಪಾಧ್ಯಕ್ಷರಾದ ರಂಜಿತ್ ಮೈರ ಕಾರ್ಯಕ್ರಮ ನಿರ್ವಹಿಸಿದರು.
| ಪುತ್ತೂರಿನ ಸ್ವಾಗತ ಸಮಿತಿಯ ಸಂಚಾಲಕರಾಗಿ ಉಜ್ವಲ್ ಪ್ರಭು | ಹೊರಕಾಣಿಕೆ ಸಮಿತಿಯ ಸಂಚಾಲಕರಾಗಿ ದಯಾನಂದ ಶೆಟ್ಟಿ ಉಜಿರೆಮಾರು ಆಯ್ಕೆ…
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…