ಪಾಣೆಮಂಗಳೂರಿನಲ್ಲಿ ಚಾತುರ್ಮಾಸ ಆಚರಿಸುತ್ತಿರುವ 108 ಮುನಿಶ್ರೀ ವೀರಸಾಗರ ಮಹಾರಾಜರ ಮಂಗಲ ವರ್ಷಾಯೋಗ ನಿಮಿತ್ತ ಭಾನುವಾರ ಶ್ರೀ ಗಣಧರ ವಲಯ ಆರಾಧನೆ ನಡೆಯಲಿದೆ.
ಎಂ. ಶತ್ರುಂಜಯ ಶೆಟ್ಟಿ, ಮಕ್ಕಳು ಪ್ರಾಯೋಜಕತ್ವದಲ್ಲಿ ಶ್ರೀ ಗಣಧರ ವಲಯ ಆರಾಧನೆ ನಡೆಯಲಿದ್ದು, ಸಾಮೂಹಿಕ ಆರಾಧನೆಗೆ ಕುಳಿತುಕೊಳ್ಳುವ ಶ್ರಾವಕರು ಚಾತುರ್ಮಾಸ ಸಮಿತಿಯನ್ನು ಸಂಪರ್ಕಿಸಿ ನೋಂದಾಯಿಸಬೇಕಾಗಿ ವಿನಂತಿ.
ಅಪರಾಹ್ನ 3ರಿಂದ ಧಾರ್ಮಿಕ ಸಭೆಯಲ್ಲಿ 108 ಮುನಿ ಶ್ರೀ ವೀರ ಸಾಗರ ಮಹಾರಾಜರು ಗಣಧರ ಪೀಠದಿಂದ ಸಮಸ್ತ ಸಮಾಜದವರಿಗೆ ಮಂಗಲ ಪ್ರವಚನ ನೀಡಲಿದ್ದಾರೆ.
ಧರ್ಮಸಭೆಯಲ್ಲಿ ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಗೌರವ ಉಪಸ್ಥಿತಿ ಇರಲಿದ್ದು, ನಾನಾ ಸಮಾಜದ ಸಂಘಟನೆಗಳ ಪದಾಧಿಕಾರಿಗಳು ಗಣ್ಯರು ಹಾಗೂ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸಾರ್ವಜನಿಕರು ಭಾಗವಹಿಸಲಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಧರ್ಮ ಬಂಧುಗಳು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪುಣ್ಯಭಾಗಿಗಳಾಗಬೇಕಾಗಿ ವಿನಂತಿ ಎಂದು ಚಾತುರ್ಮಾಸ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ಸುದರ್ಶನ್ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .
| ಪುತ್ತೂರಿನ ಸ್ವಾಗತ ಸಮಿತಿಯ ಸಂಚಾಲಕರಾಗಿ ಉಜ್ವಲ್ ಪ್ರಭು | ಹೊರಕಾಣಿಕೆ ಸಮಿತಿಯ ಸಂಚಾಲಕರಾಗಿ ದಯಾನಂದ ಶೆಟ್ಟಿ ಉಜಿರೆಮಾರು ಆಯ್ಕೆ…
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…