ಮೊಗರ್ನಾಡು ಸಾವಿರ ಸೀಮೆಯ ಕಡೇಶ್ವಾಲ್ಯ ಚಿಂತಾಮಣಿ ಲಕ್ಷ್ಮೀನರಸಿಂಹ ದೇವಸ್ಥಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಭೇಟಿ ನೀಡಿದರು. ಕ್ಷೇತ್ರದ ಅರ್ಚಕ ದಿನೇಶ್ ಭಟ್ ಜೊತೆ ಮಾತುಕತೆ ನಡೆಸಿದ ಅವರು ಕಳ್ಳತನದ ಬಗ್ಗೆ ಮಾಹಿತಿ ಪಡದುಕೊಂಡರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಐತಿಹಾಸಿಕ ಹಾಗೂ ವಿಶಿಷ್ಟ ಹಿನ್ನಲೆ ಹೊಂದಿರುವ ಕಡೆಶೀವಾಲ ದೇವಸ್ಥಾನದಲ್ಲಿ ಕಳ್ಳತನ ನಡೆದಿರುವುದು ಭಕ್ತ ಜನರಲ್ಲಿ ನೋವುಂಟು ಮಾಡಿದೆ. ಆರೋಪಿಗಳನ್ನು ಶೀಘ್ರ ಪತ್ತೆ ಮಾಡುವ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದೇನೆ ಎಂದರು. ಈ ಸಂದರ್ಭ ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ. ತಾ.ಪಂ. ಉಪಾಧ್ಯಕ್ಷ ಅಬ್ಬಾಸ್ ಅಲಿ, ಮಾಜಿ ಮುಕ್ತೇಸರರಾದ ಎಚ್. ಈಶ್ವರ ಪೂಜರಿ, ಪಾಣೆಮಂಗಳೂರು ಬ್ಲಾಕ್ ಹಿಂದುಳಿದ ರ್ಗಗಳ ವಿಭಾಗದ ಅಧ್ಯಕ್ಷ ವಿಜಯ್ ಕುಮಾರ್ ಎಸ್., ಕಡೆಶ್ವಾಲ್ಯ, ವಲಕ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ಕಲ್ಲಾಜೆ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ ಚೌಟ, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಮೆಸ್ಕಾಂ ಸಲಹಾ ಸಮಿತಿ ಸದಸ್ಯ ವೆಂಕಪ್ಪ ಪೂಜಾರಿ, ಕಡೇಶ್ವಾಲ್ಯ ಗ್ರಾ.ಪಂ.ಸದಸ್ಯರಾದ ಹರಿಶ್ಚಂದ್ರ ಕಾಡಬೆಟ್ಟು, ರತ್ನಕಾರ ನಾಯಕ್ ಪ್ರತಾಪ್‌ನಗರ, ಸರಸ್ವತಿ, ಪ್ರೇಮ, ಸುರೇಶ್ ಬನಾರಿ, ಸುರೇಶ್ ಪೂಜಾರಿ ಕಣ್ಣೊಟ್ಟು, ತಿರುಮಲೇಶ್ವರ ಭಟ್, ಶಾಂತಪ್ಪ ಪೂಜಾರಿ, ವಿದ್ಯಾಧರ ರೈ ಪೆರ್ಲಾಪು, ವಾಸು ಪೂಜಾರಿ ಪ್ರತಾಪ್‌ನಗರ ಮತ್ತಿತರರು ಹಾಜರಿದ್ದರು. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಎಎಸ್ಪಿ ಡಾ. ಅರುಣ್, ಎಸೈ ಉಮೇಶ್ ಹಾಜರಿದ್ದರು.