ಕರಾವಳಿಯ ಜನರ ಆರಾಧ್ಯ ಪುರುಷರಾದ ಕೋಟಿ-ಚೆನ್ನಯರ ತಾಯಿ ದೇಯಿ ಬೈದ್ಯೆತಿಯ ಪುತ್ಥಳಿಯ ಬಳಿ ವಿಕೃತವಾಗಿ ವರ್ತಿಸಿ ತುಳುನಾಡಿನ ಜನರ ಭಾವನೆಗಳಿಗೆ ನೋವುಂಟಾಗುವಂತೆ ನಡೆದುಕೊಂಡಿರುವ ಪ್ರಕರಣವನ್ನು ಬಿಜೆಪಿ ಮುಖಂಡ ಉಳಿಪ್ಪಾಡಿ ರಾಜೇಶ್ ನಾಕ್ ಖಂಡಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಪಟ್ಟ ಅಪರಾಧಿಯನ್ನು ಕಾನೂನು ರೀತಿಯಲ್ಲಿ ಕಠೀಣವಾಗಿ ಶಿಕ್ಷಿಸಿ ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಮರುಕಳಿಸಿದಂತೆ ಅರಣ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸಬೇಕು ಪುತ್ಥಳಿಗೆ ಸೂಕ್ತವಾದ ಭದ್ರತೆಯನ್ನು ಸರಕಾರ ನೀಡಬೇಕಾಗಿ ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಯುವ ಮೋರ್ಚಾ ಒತ್ತಾಯ:
ಪಡುಮಲೆ ದೇಯಿ ಬೈದೆತಿ ಮೂರ್ತಿ ಬಳಿ ಅಶ್ಲೀಲ ಚಿತ್ರಿಸಿರುವ ಮತ್ತು ಕಡೇಶ್ವಾಲ್ಯ ಲಕ್ಮಿ ನರಸಿಂಹ ದೇವಸ್ಥಾನದಲ್ಲಿ ನಡೆದಿರುವ ಕಳ್ಳತನ ಪ್ರಕರಣಗಳ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿದ್ದು, ಈ ಬಗ್ಗೆ ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುಬಂತೆ ಬಂಟ್ವಾಳ ಕ್ಷೇತ್ರ ಬಿಜೆಪಿ ಯುವ ಮೋರ್ಚಾ ಒತ್ತಾಯಿಸಿದೆ. ಯುವ ಮೋರ್ಚಾಅದ್ಯಕ್ಷ ವಜ್ರನಾಥ ಕಲ್ಲಡ್ಕ ನೇತ್ರತ್ವದ ನಿಯೋಗ ಮಂಗಳವಾರ ಬಂಟ್ವಾಳ ನಗರ ಠಾಣಾಧಿಕಾರಿಯವರನ್ನು ಭೇಟಿಯಾಗಿಕಡೇಶ್ವಾಲಯ ದೇವಾಲಯದ ಕಳವು ಪ್ರಕರಣದ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸುವಂತಾಗಬೇಕು ಹಾಗೂ ದೇಯಿ ಬೈದೆತಿ ಮೂರ್ತಿ ಬಳಿ ಅಶ್ಲೀಲವಾಗಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿದರೂ ಇದರ ಹಿಂದಿರುವ ಮತಾಂಧ ಶಕ್ತಿಗಳ ವಿರುದ್ದವು ತನಿಖೆ ನಡೆಸಿ ಕ್ರಮ ಕೈ ಗೊಳ್ಳ ಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ . ಯುವಮೋರ್ಚಾ ಅಧ್ಯಕ್ಷ ವಜ್ರನಾಥ ಕಲ್ಲಡ್ಕ, ಕ್ಷೇತ್ರ ಕಾರ್ಯದರ್ಶಿ ಗಣೇಶ್ ರೈ ಮಾಣಿ, ಬಿಜೆಪಿ ವಕೀಲರ ಪರಿಷತ್ನ ರಾಜರಾಮ ನಾಯಕ್, ಜಿಲ್ಲಾ ಯುವಮೋರ್ಚಾ ಕಾರ್ಯದರ್ಶಿ ಸುದರ್ಶನ ಬಜ, ಜಿಲ್ಲಾ ಯುವಮೋರ್ಚಾ ಸದಸ್ಯ ನ್ಯಾಯವಾದಿ ಶಿವಾನಂದ ವೀರಕಂಭ, ಕ್ಷೇತ್ರ ಯುವಮೋರ್ಚಾ ಕಾರ್ಯದರ್ಶಿ ನ್ಯಾಯವಾದಿ ರಂಜಿತ್ ಮೈರ, ಯುವಮೋರ್ಚಾದ ಸಂತೋಷ್ ರಾಯಿಬೆಟ್ಟು, ವಿನೀತ್ ಶೆಟ್ಟಿ, ಉಪಸ್ಥಿತರಿದ್ದರು.