ಬೈಕ್ ಸವಾರನ ಪ್ರಾಣ ಉಳಿಸಲು ಹೋಗಿ ಲಾರಿ ಚಾಲಕ ಮೃತಪಟ್ಟ ದಾರುಣ ಘಟನೆ ರಾಷ್ಟ್ರೀಯ ಹೆದ್ದಾರಿ ಕಲ್ಲಡ್ಕ ಸಮೀಪ ದಾಸಕೋಡಿ ಎಂಬಲ್ಲಿ ಮಂಗಳವಾರ ನಡೆದಿದೆ.
ಶೃಂಗೇರಿಕೋಟ ನಿವಾಸಿ ಸುರೇಶ್ (45) ಸಾವನ್ನಪ್ಪಿದವರು. ಲಾರಿ ಕ್ಲೀನರ್ ಹೆಬ್ರಿಯ ಗುರುದತ್ ಗಾಯಗೊಂಡಿದ್ದಾರೆ.
ಘಟನೆ ವಿವರ:
ಮಾಣಿಯಿಂದ ಮೇಲ್ಕಾರ್ ಕಡೆಗೆ ಲಾರಿ ತೆರಳುತ್ತಿದ್ದ ಸಂದರ್ಭ ಘಟನೆ ನಡೆದಿದೆ. ನೀರಪಾದೆ ಕಡೆಗೆ ತೆರಳುತ್ತಿದ್ದ ಆಕ್ಟೀವ ಅಡ್ಡಬಂದ ಪರಿಣಾಮ, ಅದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಲಾರಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಯಿತು. ಈ ಸಂದರ್ಭ ಗಂಭೀರ ಸ್ವರೂಪದ ಗಾಯಗಳುಂಟಾದ ಕಾರಣ ಚಾಲಕ ಸ್ಥಳದಲ್ಲೇ ಮೃತಪಟ್ಟರು.
ಮಾನವೀಯತೆ ಮೆರೆದ ಎಸ್.ಐ.
ಉಪ್ಪಿನಂಗಡಿ ಎಸ್‌ಐ ನಂದಕುಮಾರ್ ಪ್ರಕರಣವೊಂದಕ್ಕೆ ಸಂಬಂಧಿಸಿ ಬಂಟ್ವಾಳಕ್ಕೆ ಆಗಮಿಸಿ ವಾಪಾಸು ಉಪ್ಪಿನಂಗಡಿಗೆ ತೆರಳುತ್ತಿದ್ದಾಗ ದಾಸಕೋಡಿ ಬಳಿ ಅಪಘಾತಕ್ಕೊಳಗಾದ ಲಾರಿ ಚಾಲಕ ಮತ್ತು ಕ್ಲೀನರ್ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದಿರುವುದು ಕಂಡುಬಂತು. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಯಾವುದೇ ವಾಹನಗಳು ಮುಂದೆ ಬರದ ಹಿನ್ನೆಲೆಯಲ್ಲಿ ಎಸ್. ಐ. ನಂದಕುಮಾರ್ ಅವರೇ ತಮ್ಮ ಪೊಲೀಸ್ ವಾಹನದಲ್ಲಿ ಗಾಯಾಳುಗಳನ್ನು ಬಿ.ಸಿ.ರೋಡಿಗೆ ಕರೆದುಕೊಂಡು ಆಸ್ಪತ್ರಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಎಸ್ .ಐ. ನಂದಕುಮಾರ್ ತಮ್ಮ ಕರ್ತವ್ಯದ ಒತ್ತಡದ ನಡುವೆಯೂ ಗಾಯಾಳುಗಳನ್ನು ತಮ್ಮ ವಾಹನದಲ್ಲೆ ಕರೆದುಕೊಂಡು ಆಸ್ಪತ್ರೆಗೆ ದಾಖಲಿಸಿರುವುದು ಶ್ಲಾಘನೆಗೆ ಒಳಗಾಗಿದೆ. ಅಪಘಾತಕ್ಕೆ ಸಂಬಂಧಿಸಿ ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…