ಶಂಭೂರು ಗ್ರಾಮದ ಯುವ ಸಂಗಮ ಸೇವಾ ಟ್ರಸ್ಟ್ .ರಿ ಶೇಡಿಗುರಿ ಇದರ ವಾರ್ಷಿಕ ಮಹಾ ಸಭೆ ಯುವ ಸಂಗಮದ ಸಮುದಾಯ ಭವನದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಸಚ್ಚಿದಾನಂದ ಶೆಟ್ಟಿ ಬೊಂಡಾಲ ಮಾತನಾಡಿ ೨೪ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಸಹಕರಿಸಿದ ಶ್ರೀ ದುರ್ಗಾ ಪರಮೇಶ್ವರಿ ಮಹಿಳಾ ಮಂಡಳಿಯ ಎಲ್ಲಾ ಸದಸ್ಯರನ್ನು ಹಾಗೂ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಪಾಲ್ಗೊಂಡ ಗಣೇಶೋತ್ಸವ ಸಮಿತಿಯ ಯುವ ಸದಸ್ಯರನ್ನು ಅಭಿನಂದಿಸಿದರು. ಖಜಾಂಚಿ ಹರೀಶ್ ಸುವರ್ಣ ಶೇಡಿಗುರಿ ಗಣೇಶೋತ್ಸವದ ಲೆಕ್ಕ ಪತ್ರವನ್ನು ಮಂಡಿಸಿದರು.
ಇದೇ ಸಂದರ್ಭದಲ್ಲಿ ೨೫ ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಕೇಶವ ಅಂಚನ್ ಪದವು, ಕಾರ್ಯಾಧ್ಯಕ್ಷರಾಗಿ ಚಿತ್ತರಂಜನ್ ಶೆಟ್ಟಿ ಬೊಂಡಾಲ, ಜಗಧೀಶ ರೆಂಜಮಾರ್, ಕಾರ್ಯದರ್ಶಿಗಳಾಗಿ ಸುಧೀರ್ ನಿರ್ಮಾಲ್, ಗಣೇಶ್ ಭೀಮಗದ್ದೆ, ಖಜಾಂಚಿಗಳಾಗಿ ಹರೀಶ್ ಸುವರ್ಣ ಶೇಡಿಗುರಿ, ಗೋಪಾಲಕೃಷ್ಣ ಏಲಬ್ಬೆ, ಸಂಚಾಲಕರಾಗಿ ಯಶೋಧರ ಬಂಗೇರ ಕೊಲ್ಲೂರು, ಪದ್ಮನಾಭ ರೆಂಜಮಾರ್, ನಾಗೇಶ್ ಪೂಜಾರಿ ಏಲಬ್ಬೆ ಇವರನ್ನು ಆಯ್ಕೆ ಮಾಡಲಾಯಿತು. ಸಂಚಾಲಕ ಯಶೋಧರ ಬಂಗೇರ ಕೊಲ್ಲೂರು ಸ್ವಾಗತಿಸಿ ಕೇಶವ ನಾಕ್ ಧನ್ಯವಾದ ನೀಡಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…