ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಮತ್ತು ಬಂಟ್ವಾಳದ ಪತ್ರಕರ್ತ ಇಮ್ತಿಯಾಝ್ ಶಾ ಬಂಧನ ವಿರೋಧಿಸಿ ಜಾಗೃತ ಮಾಧ್ಯಮ ಬಳಗದ ವತಿಯಿಂದ ಬಿ.ಸಿ.ರೋಡಿನಲ್ಲಿ ಖಂಡನಾ ಸಭೆ ನಡೆಯಿತು.
ಇಮ್ತಿಯಾಝ್ ಮೇಲಿನ ಪ್ರಕರಣ ವಾಪಸ್ ಪಡೆದುಕೊಳ್ಳಬೇಕು ಮತ್ತು ಅವರಿಗೆ ನ್ಯಾಯ ಒದಗಿಸಬೇಕು, ಗೌರಿ ಲಂಕೇಶ್ ಹತ್ಯೆ ಆರೋಪಿಗಳನ್ನು ಶೀಘ್ರ ಬಂಧಿಸಬೇಕು ಎಂದು ಈ ಸಂದರ್ಭ ಒತ್ತಾಯಿಸಿ ಖಂಡನಾ ಸಭೆ ನಡೆಯಿತು.
ಭಾನುಚಂದ್ರ ಕೃಷ್ಣಾಪುರ, ಇಬ್ರಾಹಿಂ ಕೈಲಾರ್, ಕೆ.ಎಚ್.ಅಬೂಬಕ್ಕರ್, ನಾದ ಮಣಿನಾಲ್ಕೂರು, ಗೋಪಾಲ ಅಂಚನ್ ಸಭೆಯಲ್ಲಿ ಮಾತನಾಡಿದರು. ಪತ್ರಕರ್ತರಾದ ವೆಂಕಟೇಶ ಬಂಟ್ವಾಳ, ಮೋಹನ್ ಕೆ. ಶ್ರೀಯಾನ್, ರತ್ನದೇವ ಪುಂಜಾಲಕಟ್ಟೆ, ಫಾರೂಕ್ ಬಂಟ್ವಾಳ, ಲತೀಫ್ ನೇರಳಕಟ್ಟೆ, ಸತೀಶ್, ಪಿ.ಎಂ.ಅಶ್ರಫ್, ಮುಸ್ತಫಾ ಪಾಣೆಮಂಗಳೂರು, ಮುಖಂಡರಾದ ಗುರುವಪ್ಪ ಪೂಜಾರಿ ಈ ಸಂದರ್ಭ ಉಪಸ್ಥಿತರಿದ್ದರು.
ಜಾಮೀನು:
ಬಂಟ್ವಾಳ ನಗರ ಠಾಣಾ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಪತ್ರಕರ್ತ ಇಮ್ತಿಯಾಝ್ ಶಾ ಅವರಿಗೆ ಬಂಟ್ವಾಳ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಸೋಮವಾರ ಜಾಮೀನು ನೀಡಿದೆ. ಸೆ.೭ರಂದು ಸಂಜೆ ಸುಮಾರು ೭ ಗಂಟೆಗೆ ಅವರನ್ನು ಪೊಲೀಸರು ವಶಕ್ಕೆ ಪಡೆದು, ಸೆ.೮ರಂದು ಸಂಜೆ ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಐಪಿಸಿ ಕಲಂ ೧೫೩(ಎ) ಮತ್ತು ೫೦೫(೨)ರನ್ವಯ ಪ್ರಕರಣ ದಾಖಲಿಸಲಾಗಿತ್ತು. ಇಮ್ತಿಯಾಝ್ ಬಿಡುಗಡೆಗೆ ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಸಹಿತ ಹಲವು ಸಂಘಟನೆಗಳು ಮುಖ್ಯಮಂತ್ರಿ, ಗೃಹಮಂತ್ರಿಗೆ ಮನವಿ ಅರ್ಪಿಸಿದ್ದವು.