ಮನುಷ್ಯ ಸಕರಾತ್ಮಕ ಚಿಂತನೆಗಳತ್ತ ಮನಸ್ಸು ಕೇಂದ್ರಿಕರಿಸಬೇಕಾಗಿದೆ ಎಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಮಾಣಿಲ ಶ್ರೀ ಮಹಾಲಕ್ಷ್ಮೀ ಸೇವಾ ಸಮಿತಿ ಇದರ ಆಶ್ರಯದಲ್ಲಿ ಬಿ.ಸಿ. ರೋಡಿನ ಪೊಸಳ್ಳಿಯ ಕುಲಾಲ ಸಮುದಾಯ ಭವನದಲ್ಲಿ ಶ್ರೀ ಗುರು ಪಾದುಕಾ ಪೂಜೆ ನೆರವೇರಿಸಿದ ಬಳಿಕ ಶ್ರೀ ಧಾಮ ಸೇವಾ ಪ್ರಕಲ್ಪವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಪ್ರಗತಿಪರ ಕೃಷಿಕ ರಾಜೇಶ್ ನಾಕ್ ಉಳಿಪಾಡಿಗುತ್ತು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಭತ್ತದ ಬೆಳೆ ಗದ್ದೆಗಳಲ್ಲಿ ನಳನಳಿಸಬೇಕು. ನಮಗೆ ಬೇಕಾಗುವಷ್ಟು ಆಹಾರವನ್ನು ಉತ್ಪಾದಿಸುವಲ್ಲಿ ಸ್ವಾವಲಂಬಿಗಳಾಗಬೇಕು ಎಂದರು.
ಮಾಣಿಲ ಶ್ರೀ ಮಹಾಲಕ್ಷ್ಮೀ ಸೇವಾ ಸಮಿತಿ ಅಧ್ಯಕ್ಷ ಮಚ್ಚೇಂದ್ರ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಮುಂಬಯಿಯ ಶ್ರೀ ಮಹಾಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿಗಳಾದ ಭಾಸ್ಕರ ಎಂ. ಶೆಟ್ಟಿ, ದಯಾನಂದ ಬಂಗೇರ, ರೈತ ಸಂಘದ ಜಿಲಾ ಪ್ರಧಾನ ಕಾರ್ಯದರ್ಶಿ ಮನೋಹರ ಶೆಟ್ಟಿ, ಶ್ರೀ.ಕ್ಷೇ. ಧ.ಗ್ರಾ. ಯೋಜನೆಯ ಮೇಲ್ವಿಚಾರಕ, ಬೆಂಗಳೂರು ಶ್ರೀಧಾಮ ಸೇವಾ ಸಮಿತಿ ಅಧ್ಯಕ್ಷ ಮಹೇಶ್ ಮೂಲ್ಯ, ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಆಡಳಿತ ಮೋಕ್ತೇಸರ ಪುರುಷೋತ್ತಮ ಕುಲಾಲ್ ಕಲ್ಬಾವಿ, ಮಾಣಿಲ ಶ್ರೀ ಮಹಾಲಕ್ಷ್ಮೀ ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ವನಿತಾ ವಿ.ಶೆಟ್ಟಿ ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರಗಳ ಸಾಧಕರಾದ ವೆಂಕಟ್ರಮಣ ಹೊಳ್ಳ, ಮಾಧವ ಉಳ್ಳಾಲ್, ಉಮೇಶ್ ಪಿ.ಕೆ. ಅವರನ್ನು ಈ ಸಂದರ್ಭದಲ್ಲಿ ಸ್ಮನಾನಿಸಲಾಯಿತು. ಪಿ. ಜಯರಾಮ ಶೇಖ ಕೊಳ್ನಾಡು, ನಿವೃತ್ತ ಶಿಕ್ಷಕ ನಾರಾಯಣ ನಾಯಕ್ ಕರ್ಪೆ, ಕಮಲಾಕ್ಷ ಮೊಗರ್ನಾಡು ಅವರನ್ನು ಗೌರವಿಸಲಾಯಿತು.
ಸಮಿತಿಯ ಸಲಹೆಗಾರರಾದ ದಾಮೋದರ ಬಿ.ಎಂ. ಸ್ವಾಗತಿಸಿದರು, ಮಂಜು ವಿಟ್ಲ ಪ್ರಾಸ್ತವಿಕವಾಗಿ ಮಾತನಾಡಿದರು. ಉಪಾಧ್ಯಕ್ಷರಾದ ಪ್ರಭಾಕರ ಪ್ರಭು, ಪುರುಷೋತ್ತಮ ಸಾಲ್ಯಾನ್ ನರಿಕೊಂಬು, ಕಾರ್ಯಕಾರು ಸಮಿತಿ ಸದಸ್ಯ ಭೋಜ ಮೂಲ್ಯ ಸರಳಪಾದೆ ಸನ್ಮಾನಿತರ ಪತ್ರ ವಾಚಿಸಿದರು.
ಉಪಾಧ್ಯಕ್ಷ ಪುಷ್ಪರಾಜ ಶೆಟ್ಟಿ ವಂದಿಸಿದರು. ಕೋಶಾಧಿಕಾರಿ ದಾಮೋದರ ಮಾಸ್ತರ್ ಏರ್ಯ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಕೇಶವ ಬಂಗೇರ, ಉಪಾದ್ಯುಕ್ಷ ಕೃಷ್ಣಶ್ಯಾಮ್, ಕಾರ್ಯದರ್ಶಿ ಸತೀಶ್‌ಶೆಟ್ಟಿ ಪುದ್ದೋಟು, ಸದಸ್ಯರಾದ ರಾಜ್‌ಕುಮಾರ್, ಸತ್ಯನಾರಾಯಣ ರಾವ್, ಸುರೇಶ್ ಕುಲಾಲ್, ರಾಧಕೃಷ್ಣ ಬಂಟ್ವಾಳ್ ಸಹಕರಿಸಿದರು.
ಬೆಳಿಗ್ಗೆ ಶ್ರೀ ಧಾಮ ಮಾಣಿಲದ ವೇ.ಮೂ. ನಯನಕೃಷ್ಣ ಭಟ್ ನೇತೃತ್ವದಲ್ಲಿ ಶ್ರೀ ಗುರು ಪಾದುಕಾ ಪೂಜೆ ನಡೆಯಿತು. ಸಭಾ ವೇದಿಕೆಯ ಮುಂಭಾಗ ಹಣ್ಣಿನ ಗಿಡವನ್ನು ಸ್ವಾಮೀಜಿಗಳು ನೆಟ್ಟರು. ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಗಿಡಗಳನ್ನು ವಿತರಿಸಲಾಯಿತು.