ನಾರಿಕೊಂಬೇಶ್ವರ ದೇವಳದ ಮುಂಭಾಗದಲ್ಲಿ ಕಳೆದ ಹಲವು ವರ್ಷಗಳಿಂದ ಹಡಿಲಾಗಿದ್ದ ೧.೭೫ ಎಕರೆ ಗದ್ದೆ ಇಂದು ಸಾವಯವ ಬತ್ತದ ಕೃಷಿಯೊಂದಿಗೆ ಪುನರುಜ್ಜೀವಗೊಂಡಿದೆ.
ನರಿಕೊಂಬಿನ ವಿವೇಕ ಜಾಗೃತ ಬಳಗ ಹಾಗೂ ವಿವೇಕ ಕಿರಣ ಇವುಗಳ ಜಂಟಿ ಆಶ್ರಯದಲ್ಲಿ ನಡೆದ ಈ ಸಾವಯವ ಬತ್ತದ ಕೃಷಿ ಕೈಂಕರ್ಯವನ್ನು ನಿವೃತ್ತ ಉಪನ್ಯಾಸಕ ರಾಜಮಣಿ ರಾಮಕುಂಜ ನೇಜಿ ನೆಡುವುದರ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬಳಗದ ಅಧ್ಯಕ್ಷರಾದ ಚಂದ್ರಶೇಖರ ಮರ್ದೋಳಿ, ಉಪಾಧ್ಯಕ್ಷ ಮಾಧವ ಅಂಚನ್, ಸಾಲಿಗ್ರಾಮದ ಡಿವೈನ್ ಪಾರ್ಕ್(ರಿ) ಇದರ ಪದಾಧಿಕಾರಿ ಗಿರೀಶ್ ಹೆಗಡೆ, ಶಿಕ್ಷಕ ಮಧೂಸೂದನ್ ಮೊದಲಾದವರು ಹಾಜರಿದ್ದು ಮಾರ್ಗದರ್ಶನ ನೀಡಿದರು.