ಪ.ಗೋ. ಅಂಕಣ

ವಿಶೇಷ ಸೃಷ್ಟಿಗಳ ಲೋಕದಲ್ಲಿ -ಅಂಕಣ19: ತಪವಾಗಿ ಬದಲು ತಾಪವಾಗಿಸಿತ್ತು!

.ಗೋ. ಎಂದೇ ಚಿರಪರಿಚಿತರಾಗಿದ್ದ ಪದ್ಯಾಣ ಗೋಪಾಲಕೃಷ್ಣ (1928-1997) ಕನ್ನಡದ ಪ್ರಸಿದ್ಧ ದಿನಪತ್ರಿಕೆಗಳಲ್ಲಿ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಕೆಲಸ ಮಾಡಿದವರು. ನೇರ, ನಿಷ್ಠುರ ನಡೆಯ .ಗೋ. ಅವರು ಪತ್ರಕರ್ತನಾಗಿ ವೃತ್ತಿಜೀವನದುದ್ದಕ್ಕೂ ಸಿದ್ಧಾಂತ ಹಾಗೂ ಪ್ರಾಮಾಣಿಕತೆಯ ಹಾದಿ ಹಿಡಿದಿದ್ದರು. ವೃತ್ತಪತ್ರಿಕಾ ಜಗತ್ತಿನ ಎಲ್ಲ ಮುಖಗಳ ಅನುಭವವನ್ನು ವೃತ್ತಿನಿರತ ಪತ್ರಿಕೋದ್ಯೋಗಿಯಾಗಿ ಕಂಡ ನಾನಾ ಮುಖಗಳೂ, ಅನುಭವಿಸಿದ ನೋವು, ನಲಿವುಗಳನ್ನು ನಿರ್ಮೋಹದಿಂದ, ವಸ್ತುನಿಷ್ಠವಾಗಿ ಬರೆದ ವಿಶೇಷ ಸೃಷ್ಟಿಯ ಲೋಕದಲ್ಲಿ ವೃತ್ತಪತ್ರಿಕೆಗಳ ಕಾಲಂ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯದಲ್ಲಿ ಒಂದು ವಿಶಿಷ್ಟ ಬರವಣಿಗೆಇದು .ಗೋ. ಆತ್ಮಕತೆಯ ಭಾಗವೂ ಹೌದು. 2005ರಲ್ಲಿ ಪುಸ್ತಕವಾಗಿಯೂ ಪ್ರಕಟಗೊಂಡಿವೆ.

pa gO cartoon by Harini

ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯನಡ್ಕದಲ್ಲಿ ಜನಿಸಿದ .ಗೋ, ಅವರ ಕೃತಿಯನ್ನು ಬಂಟ್ವಾಳನ್ಯೂಸ್ ಓದುಗರಿಗಾಗಿ ಒದಗಿಸಿಕೊಟ್ಟವರು .ಗೋ ಅವರ ಪುತ್ರ ಪದ್ಯಾಣ ರಾಮಚಂದ್ರ. (.ರಾಮಚಂದ್ರ). ಲೇಖನಮಾಲೆಯ 19ನೇ ಕಂತು ಇಲ್ಲಿದೆ. ಅಂಕಣಮಾಲೆಯಾಗಿ ಪ್ರಕಟಗೊಂಡು, ಪುಸ್ತಕರೂಪವಾಗಿ ಹೊರಬಂದ ವಿಶೇಷ ಸೃಷ್ಟಿಗಳ ಲೋಕದಲ್ಲಿ ಪುಸ್ತಕದ ಮರುಪ್ರಕಟಣೆ. ಇಲ್ಲಿ ವ್ಯಕ್ತವಾದ ವಿಚಾರಗಳೆಲ್ಲವೂ ಲೇಖಕರಿಗೆ ಸಂಬಂಧಿಸಿದ್ದಾಗಿದೆ. ಬಂಟ್ವಾಳನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ.

ವಿಶೇಷ ಸೃಷ್ಟಿಗಳ ಲೋಕದಲ್ಲಿಅಂಕಣ19: ತಪವಾಗಿ ಬದಲು ತಾಪವಾಗಿಸಿತ್ತು!
ನನ್ನ ಕೆಲಸದಲ್ಲಿ ಆಗಾಗ ಮೂಡುತ್ತಿದ್ದ ಕೆಲವೊಂದು ಸಮಸ್ಯೆಗಳುಕೃಷ್ಣ ಮೆನನ್ ರಾಜೀನಾಮೆಪ್ರಕರಣದಲ್ಲಿ ಅನಂತರ,ಸುಲಭವಾಗಿ ಪರಿಹಾರಗೊಂಡವು. ಹಿಂದುಮುಂದಿನ ಯೋಚನೆ ಮಾಡದೆ (ನನ್ನ ಬಗ್ಗೆ) ದೂರು ಒಯ್ಯುವ ಪರಿಪಾಠ ಅಪಾಯಕಾರಿ ಎಂಬ ವಿಚಾರ ಕಾಮತರಿಗೂ ಮನವರಿಕೆ ಆದಂತಿತ್ತು.
ಅದರಿಂದಾಗಿ, ಹೋಗುವ ದೂರುಗಳು ಕಡಿಮೆಯಾದಂತೆ, ನಾನು ನಿರ್ವಹಿಸುತ್ತಿದ್ದ ಕೆಲಸಗಳ ಕುರಿತು ಸಂಜೀವ ಕುಡ್ವರು ತೋರುತ್ತಿದ್ದ ಆಸಕ್ತಿಯೂ ಕಡಿಮೆಯಾಗುತ್ತಾ ಬಂದಿತು. ಹೆಚ್ಚಿನ ಪ್ರಯೋಗಗಳ ಗೊಡವೆಗೆ ಹೋಗದೆ, ಮೊದಲು ಹಾಕಿಕೊಂಡಿದ್ದ ಕಾರ್ಯಕ್ರಮ ವಿಧಾನವನ್ನೇ ಅನುಸರಿಸಿದರೆ ಸಾಕೆಂಬ ತೀರ್ಮಾನಕ್ಕೆ ಬಂದೆ. ಕೌಟುಂಬಿಕ ಜೀವನದ ಕೆಲವೊಂದು ಘಟನೆಗಳೂ ತೀರ್ಮಾನಕ್ಕೆ ಪೂರಕವಾದವು.
ಮಂಗಳೂರಿನಲ್ಲಿ ನನ್ನ ಜೇಬಿಗೆ ಹೊಂದುವ ಪುಟ್ಟ ಬಾಡಿಗೆ ಮನೆಯೊಳಗೆ ಸಣ್ಣ ಸಂಸಾರ ಸಾಗಿಸಲು ಸಾಧ್ಯವಾದುದೇ ಅಂದಿನ ದೊಡ್ಡ ಸಾಧನೆ. ಮನೆಯೂ ಕಚೇರಿಯ ಕೂಗಳತೆಯಲ್ಲಿದ್ದುದು ಇನ್ನಷ್ಟು ಅನುಕೂಲವಾಗಿತ್ತು. ನೌಕರಿಯ ಭದ್ರತೆಯ ಬಗ್ಗೆಯೂ ನಂಬುಗೆ ಬೆಳೆಯುತ್ತಿತ್ತು. ಆದರೆ
ಪತ್ರಿಕೆಯ ದೈನಂದಿನ ಸಂಚಿಕೆಗಳಿಗೆ ಬೇಕಾಗುವ ಲೇಖನಗಳು ಮತ್ತು ಪುರವಣಿಗೆ ಅವಶ್ಯವಿರುವ ಲೇಖನ ಸಾಹಿತ್ಯದ ವ್ಯವಸ್ಥಿತ ಸಂಗ್ರಹವನ್ನು ರೂಢಿಸಿಕೊಳ್ಳುವ ಒಂದು ಕೆಲಸ ಮಾತ್ರ, ಒಂದು ಹಂತದಲ್ಲಿಕೈಗೂಡದ ಬಯಕೆಯಾಗಿ ಉಳಿದಿತ್ತು.

ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಶಿವರಾಮ ಕಾರಂತರ ಜೊತೆಗೆ 1980ರ ದಶಕದ ಮಂಗಳೂರಿನ ಪತ್ರಕರ್ತರು ಮುಂದಿನ ಸಾಲಿನಲ್ಲಿ “ದಿ ಹಿಂದೂ” ಪ್ರತಿನಿಧಿ ಶ್ರೀ. ಯು. ನರಸಿಂಹ ರಾವ್, ಯುವ ಪತ್ರಕರ್ತ ಶ್ರೀ ಜಿ.ಪಿ.ಬಸವರಾಜು, ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಶಿವರಾಮ ಕಾರಂತ ,ಪತ್ರಿಕಾ ಛಾಯಾಗ್ರಾಹಕ ಶ್ರೀ.ಯಜ್ಞ, ಮುಂಗಾರು ಪತ್ರಿಕೆಯ ಶ್ರೀ. ಚಿದಂಬರ ಬೈಕಂಪಾಡಿಯವರು. ಹಿಂದಿನ ಸಾಲಿನಲ್ಲಿ ಟೈಮ್ಸ್ ಆಫ್ ಇಂಡಿಯಾ ಪ್ರತಿನಿಧಿ ಶ್ರೀ.ಪ.ಗೋಪಾಲಕೃಷ್ಣ, ಉದಯವಾಣಿ ಪತ್ರಿಕೆಯ ಹಿರಿಯ ವರದಿಗಾರರಾದ ಶ್ರೀ. ಎ.ವಿ.ಮಯ್ಯ, ಇಂಡಿಯನ್ ಎಕ್ಸ್ ಪ್ರೆಸ್ ಮತ್ತು ಕನ್ನಡ ಪ್ರಭ ಪತ್ರಿಕೆಗಳ ಪ್ರತಿನಿಧಿ ಶ್ರೀ.ಎನ್. ಆರ್. ಉಭಯ, ಉದಯವಾಣಿ ವರದಿಗಾರ ಶ್ರೀ. ಎಮ್. ಮನೋಹರ ಪ್ರಸಾದ್, ಹೊಸದಿಗಂತ ವರದಿಗಾರರಾದ ಶ್ರೀ. ಪಲಿಮಾರು ವಸಂತ ನಾಯಕ್ ಮತ್ತು ಮಂಗಳೂರಿನ ಪಿ.ಟಿ.ಐ. ಪ್ರತಿನಿಧಿ ಶ್ರೀ.ರಾಮಚಂದ್ರ ರಾವ್.

ಆ ದಿಸೆಯಲ್ಲಿ ಲೇಖನ ಕಳುಹಿಸಿರೆಂದು ಕೇಳಬಲ್ಲ ಬರಹಗಾರರ ಪಟ್ಟಿ ತಯಾರಿಸುವ ಅಥವಾ ಬಂದು ಪ್ರಕಟವಾಗುವ ಬರಹಗಳ ಸಂಭಾವನೆ ನಿಗದಿಪಡಿಸುವ ಯಾವುದೇ ಅವಕಾಶ ನನಗಿರಲಿಲ್ಲ. ಅವೆರಡು ಕೆಲಸಗಳಲ್ಲೂ ಸಂಜೀವ ಕುಡ್ವರ ಹೆಸರು ಹೇಳಿ ನಡೆಯುತ್ತಿದ್ದ ಕೈವಾಡಗಳಿಗೆ ತಲೆಬಾಗಬೇಕಾಗಿತ್ತು. ಒಮ್ಮೆ, ಒಂದು ವಿಶೇಷ ಸಂಚಿಕೆಗಾಗಿ ಒಟ್ಟು ಸೇರಿಸಿದ್ದ ಸಂಗ್ರಹದ ಬಗ್ಗೆ ನನ್ನಲ್ಲಿ ಮೂಡಿದ್ದ ಸಂದೇಹವನ್ನು ಕುಡ್ವರ ಮುಂದೆ ಮಂಡಿಸಿದಾಗಲಷ್ಟೇ, ತನ್ನರಿವಿಗೂ ಬಾರದೆ ನಡೆಯುತ್ತಿದ್ದ ವಿದ್ಯಮಾನಗಳ ಕುರಿತು ಸುಳಿವು ಅವರಿಗೆ ಸಿಕ್ಕಿದುದು.
ಆ ಕೂಡಲೆ ಲೇಖಕರ ವಿಸ್ತೃತಯಾದಿ ತಯಾರಿಸಿ ತನ್ನ ಪರಿಶೀಲನೆಗೆ ಒಪ್ಪಿಸಲು ಹೇಳಿದ್ದಲ್ಲದೆ, ಸಂಭಾವನೆಯ ಪರಿಮಾಣ ಮಿತಿಗಳ ಮಾರ್ಗಸೂಚಿಯನ್ನು ತಿಳಿಸಿದರು.
ನವಭಾರತದ ನೆಚ್ಚಿನ ಹಲವು ಹಿರಿಯ ಲೇಖಕರಿಗೆ ನೀಡುವ ಸಂಭಾವನೆಯ ಸಂದಿಗ್ಧತೆಯ ಪರಿಹಾರಕ್ಕೆ ಅವರು ಅನುಸರಿಸಿದ್ದ ಸೂತ್ರ ಸ್ವಾರಸ್ಯವಾಗಿತ್ತು.
ಗೋವಿಂದ ಪೈಗಳುಶಿವರಾಮ ಕಾರಂತರಂಥವರು ನವಭಾರತದ ಮೇಲಿನ ಪ್ರೀತಿಯಿಂದ ಕೇಳಿದಾಗಲೆಲ್ಲ ಲೇಖನ ಕಳುಹಿಸುತ್ತಾರೆ. ಅವರಿಗೆ, ಬೇರೆಯವರ ಹಾಗೆ 25-30 ಕೊಟ್ಟು ಮರ್ಯಾದೆ ಕಡಿಮೆ ಮಾಡಬಾರದು. ಹಾಗಾಗಿ, ವರ್ಷದಲ್ಲಿ ಯಾವಾಗಲಾದರೂ ಒಮ್ಮೆ ಒಂದು ದೊಡ್ಡ ಮೊತ್ತದ ಚೆಕ್ ಕಳುಹಿಸುತ್ತೇನೆ. ಬೆರೆಯವರ ಮಟ್ಟಿಗೆ ಆ ಪ್ರಾಬ್ಲಮ್ ಬರುವುದಿಲ್ಲ ಅವರು ವಿವರಿಸಿದ್ದರು.
ಲೇಖನ ಸಂಗ್ರಹದಲ್ಲಿ ನನ್ನದೇ ವಿಧಾನ ಅನುಸರಿಸಬಹುದೇ? ಎಂದಾಗ, ‘ಆಗಾಗತಮಗೆ ಮಾಹಿತಿ ಕೊಡುತ್ತಿರಬೇಕೆಂಬ ನಿಬಂಧನೆಯೊಂದಿಗೆ, ಅನುಮತಿ ಸಿಕ್ಕಿತು.
ಮುಂದಿನ ಏಳು ತಿಂಗಳುಗಳು ಯಾವುದೇ ಹೆಚ್ಚಿನ ಆತಂಕವಿಲ್ಲದೆ ಕಳೆದವು. ಕೆಲಸಕ್ಕೆ ಸೇರಿದ ಹೊಸತರಲ್ಲಿ ಕುಡ್ವರಿಂದ ಬಂದಿದ್ದ ವೇತನ ಪುನರ್ವಿಮರ್ಶೆಯ ಆಶ್ವಾಸನೆಯನ್ನು ಒಂದು ಬಾರಿ ಸಮಯ ಕಾದು, ಜ್ಞಾಪಿಸಿದ್ದೆ. “ಐ ವಿಲ್ ಲೆಟ್ ಯೂ ನೋಎಂಬ ಬದಲಿ ಆಶ್ವಾಸನೆಯನ್ನೂ ಪಡೆದಿದ್ದೆ.
ಏಳನೆಯ (ಅಂದರೆ ನನ್ನ ಸೇವಾವಧಿಯ ಒಂಭತ್ತನೆಯ) ತಿಂಗಳು ಮುಗಿಯುತ್ತಿದ್ದ ಹಾಗೆ, ನವಭಾರತ ಮಟ್ಟಿಗೆ ಅಪೂರ್ವವೆನ್ನಲಾಗುವಸಾಮೂಹಿಕ ವೇತನ ಹೆಚ್ಚಳದ ವದಂತಿಗಳು ಕೇಳಿಬಂದವು. ಉಳಿದೆಲ್ಲರ ಹಾಗೆ, ನನ್ನಲ್ಲೂ ಆಸೆ ಗರಿಗೆದರಿತು. ಬಹುಶಃ ಹೊಸದಾಗಿ ಮದುವೆಯಾಗಿದ್ದ ಸಂಜೀವ ಕುಡ್ವರು ತಮ್ಮ ವಿವಾಹದ ಸಂಭ್ರಮವನ್ನು ತನ್ನ ನೌಕರರೊಂದಿಗೆ ಹಂಚಿಕೊಳ್ಳುತ್ತಿರಬಹುದೆಂದು ಭಾವಿಸಿದ್ದೆ.
ಕೊನೆಗೂ ಒಂದು ದಿನ, ವೇತನ ಹೆಚ್ಚಳದ ಅಧಿಕೃತ ಯಾದಿ ಪ್ರಕಟವಾಯಿತು. ಸಂಪಾದಕೀಯ ಶಾಖೆಗೆ ಬಂದಿದ್ದ ಯಾದಿಯ ಒಂದು ಪ್ರತಿಯನ್ನು ಪರಿಶೀಲಿಸಲು ಮುಗಿಬಿದ್ದ ಸಹೋದ್ಯೋಗಿಗಳ ಸರದಿ ಮುಗಿಯುವವರೆಗೆ ಕಾದಿದ್ದೆ. ಆಮೇಲೆ ಆದ ನಿರಾಸೆ,ನನ್ನ ಕಾಯುವಿಕೆಯನ್ನು ತಪವಾಗಿ ಬದಲು ತಾಪವಾಗಿಸಿತ್ತು!
ಇದ್ದ 164 ಕಾಯಂ ಉದ್ಯೋಗಿಗಳಲ್ಲಿ ಇಬ್ಬರ ಹೊರತು ಎಲ್ಲರಿಗೂ ಬಡ್ತಿ ದೊರೆತಿತ್ತು. ಬಡ್ತಿಯ ಮೊತ್ತ ಸೂಚಿಸುವ ಸ್ಥಳದಲ್ಲಿ ಖಾಲಿ ಗೆರೆಗಳಿದ್ದುದು ನನ್ನ ಮತ್ತು ಇನ್ನೊಬ್ಬರ ಹೆಸರುಗಳ ಎದುರು ಮಾತ್ರ!
ಒಳಗೆದ್ದ ಉರಿಯನ್ನು ಅದುಮಿಕೊಳ್ಳಲು ಕಷ್ಟವಾದರೂ ಸಹಿಸಿಕೊಂಡು, ಸ್ವಲ್ಪ ಹೊತ್ತು ಸುಮ್ಮನೆ ಕುಳಿತಿದ್ದೆ. ಉದ್ವೇಗದ ಕ್ಷಣಗಳು ಕಳೆದಾಗ ಬಂದು ಮಾತನಾಡಿಸಿದ ಮಿತ್ರರಲ್ಲಿಕೆಲಸ ಬಿಟ್ಟು ಬಿಡುತ್ತೇನೆಎಂದಷ್ಟೇ ಹೇಳಿ ಸುಮ್ಮನಾದೆ.
ಅವಸರದಲ್ಲಿ ಯಾವ ತೀರ್ಮಾನವೂ ಬೇಡ, ಎಂ.ಡಿ.ಯವರನ್ನೊಮ್ಮೆ ನೋಡಿ ಮಾತನಾಡಿ ಪೂರ್ತಿ ವಿಷಯ ತಿಳಿದುಕೊಎಂಬ ಹಿರಿಯ ಸಹೋದ್ಯೋಗಿಯ ಸಲಹೆ ಮೊದಲಿಗೆ ಹಿತವಾಗಲಿಲ್ಲ. ಆ ನಂತರ ಮನಸ್ಸು ಬದಲಾಯಿಸಿ, ಮಾಡಿದ್ದ ಕುಡ್ವರ ಭೇಟಿಯೂಐ ವಿಲ್ ಲೆಟ್ ಯೂ ನೋ (ಆಮೇಲೆ ತಿಳಿಸುತ್ತೇನೆ)” ಎಂದು ಅವರು ಮುಖ ಕೊಡದೆ ಕೊಟ್ಟ ವಿಲಕ್ಷಣ ಉತ್ತರದಿಂದಾಗಿ,ನಿರರ್ಥಕವೆನಿಸಿತು.
ಹಾಗಾದರೆ, ನಾಳೆ ಬಂದು ನೋಡಲೆ ? ಎಂದುದಕ್ಕೆ ಅವರು ಯಾವ ಉತ್ತರವನ್ನೂ ಕೊಡಲಿಲ್ಲ. ಹಾಗಾಗಿ, ಮರುದಿನ ಕೆಲಸಕ್ಕೆ ಹೋಗದೆ, ಸಂಜೆ ಹೊತ್ತು ಅವರ ಕಚೇರಿಗೇ ಹೋದೆ. ನನ್ನ ಪ್ರಶ್ನೆಯ ಪುನರಾವರ್ತನೆ, ಉತ್ತರವೂ ಹಿಂದಿನ ದಿನದ್ದೇ. ಅದೇ ಭಂಗಿಯಲ್ಲಿ. ವರ್ತನೆಯಲ್ಲಿ ಏನೋ ಕೃತಕ ಛಾಯೆ ಕಂಡಂತಾಯಿತು. “ನನಗೆ ಉತ್ತರ ಈಗಲೇ ಬೇಕು. ಬೆಂಗಳೂರಿನ ಟಿಕೆಟ್ ರಿಸರ್ವ್ ಮಾಡಿಸಲಿಕ್ಕೆ ಇದೆಎನ್ನುತ್ತಿದ್ದ ಹಾಗೆಯೆ
ಹೋಗುತ್ತೇನೆ ಅಂತ ಹೇಳುವವರ ಹತ್ತಿರ ಏನು ಮಾತನಾಡುವುದು?” ಎಂಬ ನುಡಿ ಕೇಳಿಸಿತು. “ಸರಿ,ಹಾಗಾದರೆ ಗುಡ್ ಬೈಎಂದು ಕೋಣೆಯಿಂದ ಹೊರಬಿದ್ದೆ.
ಉದ್ವೇಗದಲ್ಲಿ ಕೈಗೊಂಡ ತೀರ್ಮಾನದ ಬಗ್ಗೆ ಯಾರಲ್ಲೂ ಸಮಾಲೋಚಿಸುವ ಅವಕಾಶವಿರಲಿಲ್ಲ. ಪತ್ನಿಯನ್ನೂ ಹಸುಳೆ ಮಗನನ್ನೂ ತಾತ್ಕಾಲಿಕವಾಗಿ ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದರಿಂದ, ಮನೆಯೊಳಗಿನ ಮಾತುಕತೆಯೂ ಸಾಧ್ಯವಿರಲಿಲ್ಲ. ನಾನು ಮಾಡಿದ್ದೇ ಸರಿ ಎಂಬ (ಅವಾಸ್ತವಿಕ?) ನಿಲುಮೆ ಬೇರೆ.
ಒಬ್ಬಿಬ್ಬರು ಪರಿಚಿತರಲ್ಲಿ ಮಾತ್ರ ಕೆಲಸ ಬಿಟ್ಟ ಸುದ್ದಿ ತಿಳಿಸಿ, ಮನೆಗೂ ಬೀಗ ಹಾಕಿ, ಮುಂದಿನ ಸಂಭಾವ್ಯ ಕಾರ್ಯಕ್ಷೇತ್ರ ಹುಡುಕುತ್ತಾ ಪುತ್ತೂರಿಗೆ ಬಂದು ಮುಟ್ಟಿದೆ.
ಅಲ್ಲೊಂದು ಮುದ್ರಣಾಲಯವನ್ನು ಪಾಲುದಾರಿಕೆಯಲ್ಲಿ ತೆರೆದು, ಕಾರಂತರು ನಡೆಸಿ ಕೈಬಿಟ್ಟಿದ್ದವಿಚಾರವಾಣಿಪತ್ರಿಕೆಯನ್ನು ಪುನರುಜ್ಜೀವಗೊಳಿಸುವ ಪ್ರಯತ್ನ ಮಾಡುತ್ತಿದ್ದ ಮಿತ್ರ ಮರಕಿಣಿಯನ್ನು ಕಂಡುನನಗೇನಾದರೂ ಅವಕಾಶ ಸಿಕ್ಕಿತೆ ?” ಎಂದು ವಿಚಾರಿಸಿದೆ.
ಅನಂತರದ, (ಕಾರ್ಯಕ್ಷೇತ್ರ ವರ್ಗಾವಣೆಗೆ ಸಂಬಂಧಿಸಿದ) ಘಟನೆಗಳೆಲ್ಲ ಕ್ಷಿಪ್ರಗತಿಯವು. ಒಂದು ವಾರದ ಅವಧಿಯಲ್ಲೇ ಉದ್ಯೋಗಊರುಮನೆಗಳೆಲ್ಲವನ್ನೂ ಬದಲಾಯಿಸಲು ಅಂದು ಅನುಕೂಲವಾಗಿದ್ದುದರಿಂದ.
ಊರು ಬಿಡುವ ತುರಾತುರಿಯಲ್ಲಿಮರೆತೇ ಬಿಟ್ಟಿದ್ದ ಒಂದು ಪ್ರಾಮುಖ್ಯ ವಿಚಾರಪುತ್ತೂರು ಸೇರಿದ ಎರಡೇ ತಿಂಗಳಲ್ಲಿ ಇನ್ನೊಮ್ಮೆ ಪ್ರಸ್ತಾಪಿತವಾಯಿತು.
ಆ ಪ್ರಸ್ತಾಪವನ್ನು ಮಾಡಲೆಂದೇ, ಮಾಜಿ ಸಹೋದ್ಯೋಗಿ(ನವಭಾರತದ ಮಾಲಿಕವರ್ಗದ ಸಂಬಂಧಿಕರಲ್ಲದ) ಎಂ.ಕೃಷ್ಣ ಕುಡ್ವ ಇದ್ದಕ್ಕಿದ್ದಂತೆ ಪುತ್ತೂರಿಗೆ ಬಂದರು. ನಾನಿದ್ದ ತಾಣವನ್ನು ಹುಡುಕಿ ಹಿಡಿದು ಮಾತುಕತೆ ನಡೆಸಿದರು.
ಹಿಂದೊಮ್ಮೆ ಮಂಗಳೂರಿನಲ್ಲಿ ಇನ್ನೊಬ್ಬ (ಮಾಜಿ) ಸಹೋದ್ಯೋಗಿ ರಘುವೀರ ಶೆಟ್ಟರು ನನ್ನೊಡನೆಒಂದು ದಿನ ಪತ್ರಿಕೆ ಆರಂಭಿಸಿ ನಡೆಸಲು ಬೇಕಾದ ಕನಿಷ್ಟ ಸಾಧನ ಸಂಚಯದ ವಿವರ ಬೇಕೆಂದುಪ್ರಾಸ್ತಾವಿಕವಾಗಿ ಕೇಳಿ ಮಾಹಿತಿ ಪಡೆದಿದ್ದನ್ನು ಜ್ಞಾಪಿಸಿದರು. ಮಾಹಿತಿಯ ಪುನರ್ವಿಮರ್ಶೆಯೇ ತನ್ನ ಈಗಿನ ಭೇಟಿಯ ಉದ್ದೇಶವೆಂದೂ ಸ್ಪಷ್ಟಪಡಿಸಿದರು.
(ಮುಂದಿನ ಭಾಗದಲ್ಲಿ)
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts