ವಿಶೇಷ ವರದಿ

ಕೊನೆಗೂ ಸರ್ವೀಸ್ ರಸ್ತೆಗೆ ‘ಸರ್ವೀಸ್’


ಬಿ.ಸಿ.ರೋಡ್ ಸರ್ವೀಸ್ ರಸ್ತೆಗೆ ಸರ್ವೀಸ್ ಮಾಡೋ ಕೆಲಸ ಆರಂಭಗೊಂಡಿದೆ. ಇದೀಗ ಕಾಂಕ್ರೀಟ್ ಹಾಕಲು ಪೂರ್ವಭಾವಿ ಕೆಲಸಗಳು ಮಂಗಳವಾರ ಶುರುವಾಗಿದೆ ಎಂದು ಮೂಲಗಳು ಬಂಟ್ವಾಳನ್ಯೂಸ್ ಗೆ ತಿಳಿಸಿವೆ. ಈ ಕುರಿತು ಎಲ್ಲ ಮಾಧ್ಯಮಗಳು ಸರಣಿ ವರದಿಗಳನ್ನು ಪ್ರಕಟಿಸುವ ಮೂಲಕ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಿದ್ದವು.

Pic: Kishore Peraje

pic: Ashok M G

Ashoka M G

ನಾರಾಯಣಗುರು ವೃತ್ತದಿಂದ ಬಿ.ಸಿ.ರೋಡ್ ಕಡೆಗೆ ಇಳಿಯುವಾಗಲೇ ಸಮಸ್ಯೆಗಳ ಸರಮಾಲೆಯನ್ನೇ ಹೊಂದಿದ್ದ ಈ ರಸ್ತೆಯಲ್ಲೀಗ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.

kishore peraje

ಹೊಂಡಗಳ ಸಮಸ್ಯೆಯಿಂದ ಇಲ್ಲಿಗೆ ಆಗಮಿಸುವ ವಾಹನಗಳು ಆಯತಪ್ಪಿ ಬೀಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಲ್ಲೇ ಮಂಗಳೂರಿಗೆ ತೆರಳುವ ಬಸ್ಸುಗಳು ನಿಲ್ಲುವ ಕಾರಣ ಇತರ ವಾಹನಗಳಿಗೂ ತೆರಳಲು ಕಷ್ಟಕರವಾದ ಪರಿಸ್ಥಿತಿ ಇತ್ತು. ಪ್ರಯಾಣಿಕರಿಗೆ ನಿಲ್ಲಲು ಕಷ್ಟವಾಗುತ್ತಿದ್ದರೆ, ಪಾದಚಾರಿಗಳಿಗೆ ನಡೆದಾಡಲೂ ಪ್ರಯಾಸಪಡಬೇಕಾದ ಸ್ಥಿತಿ ಉಂಟಾಗಿತ್ತು. ಹಲವು ಪ್ರಯಾಣಿಕರು ಬಂಟ್ವಾಳನ್ಯೂಸ್ ಜೊತೆ ಈ ಸಮಸ್ಯೆಯ ಕುರಿತು ಅಳಲು ತೋಡಿಕೊಂಡಿದ್ದರು.

ಸದ್ಯಕ್ಕೆ ರಸ್ತೆಯನ್ನು ಅಗೆದು ಕಾಂಕ್ರೀಟ್ ಹಾಕಲು ವೇದಿಕೆ ಸಿದ್ಧಗೊಳಿಸಲಾಗುತ್ತಿದೆ. ಇದೇ ಹೊತ್ತಿನಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಮಂಗಳೂರಿಗೆ ತೆರಳುವ ಪ್ರಯಾಣಿಕರು ಒಂದೋ ಫ್ಲೈಓವರ್ ಆರಂಭದಲ್ಲಿ ಇಲ್ಲವೇ ಹೊಸ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಬಳಿ ನಿಲ್ಲಬೇಕಾದ ಅನಿವಾರ್ಯತೆ ಇದೆ. ಬಂಟ್ವಾಳ ನ್ಯೂಸ್  ಸಹಿತ ಇತರ ಮಾಧ್ಯಮಗಳು ಕಳೆದ ಆರು ತಿಂಗಳಿಂದ ಸರಣಿ ವರದಿಗಳನ್ನು ಪ್ರಕಟಿಸುವ ಮೂಲಕ ಎಚ್ಚರಿಸುವ ಕೆಲಸವನ್ನು ಮಾಡಿದ್ದವು. ಸತತ ಒತ್ತಡಗಳ ಬಳಿಕ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಈ ರಸ್ತೆ ದುರಸ್ತಿಗೆ ಅನುದಾನ ಮೀಸಲಿರಿಸುವ ಕುರಿತು ಮಾಧ್ಯಮಗಳಿಗೆ ತಿಳಿಸಿದ್ದರು.

ಬಂಟ್ವಾಳ ನ್ಯೂಸ್ ಈ ಕುರಿತು ಹಿಂದೆ ಪ್ರಕಟಿಸಿದ ವಿಶೇಷ ವರದಿಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ.

 

Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Recent Posts