ಬಂಟ್ವಾಳ

ಸಮಾಜಮುಖಿ ಸೇವೆಯಿಂದ ರೋಟರಿ ಔನ್ನತ್ಯ: ಚೆಂಗಪ್ಪ

ಸಮಾಜಮುಖಿ ಸೇವೆಯ ಮೂಲಕ ಪರಿಸರದ ಜನರ ಪ್ರೀತಿ ವಿಶ್ವಾಸವನ್ನು ಪಡೆದು ರೋಟರಿ ಕ್ಲಬ್ ಬೆಳೆದು ಬಂದಿದೆ. ಅದೇ ಮಾದರಿ ಸೇವೆಯನ್ನು  ನೀಡುವಲ್ಲಿ ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೊ ಹಿಲ್ಸ್ ಯಶಸ್ವಿಯಾಗಲಿ ಎಂದು ರೋಟರಿ ಜಿಲ್ಲಾ ಗವರ್ನರ್ ಎಂ.ಎಂ. ಸುರೇಶ್ ಚೆಂಗಪ್ಪ ಹೇಳಿದರು.

ಜಾಹೀರಾತು

ಅವರು ಲೊರೆಟ್ಟೊ ಚರ್ಚ್ ಹಾಲ್‌ನಲ್ಲಿ ನಡೆದ ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೊ ಹಿಲ್ಸ್ ತಾತ್ಕಾಲಿಕ ಉದ್ಘಾಟನೆ ನಡೆಸಿ ಮಾತನಾಡಿದರು.

ಹೊಸ ಕ್ಲಬ್ ಸ್ಥಾಪನೆ ಅಷ್ಟು  ಸುಲಭವಲ್ಲ. ಜಿಎಸ್‌ಆರ್ ಯನ್. ಪ್ರಕಾಶ ಕಾರಂತರ ಸಂಘಟನಾ ಚತುರತೆ ಮತ್ತು ಶ್ರಮದಿಂದ ಕ್ಲಬ್ ಸ್ಥಾಪನೆ ಸಾಧ್ಯವಾಗಿದೆ ಎಂದು ಹೇಳಿದ ಅವರು, ನೂತನ ಸದಸ್ಯರು ತಮ್ಮ ಕುಟುಂಬಿಕರನ್ನು ಇದರಲ್ಲಿ ತೊಡಗಿಸಿಕೊಂಡು ಕ್ಲಬ್ ಯಶಸ್ಸಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.

ಚರ್ಚ್ ಧರ್ಮಗುರು ರೆ|ಫಾ| ಎಲಿಯಾಸ್ ಡಿಸೋಜ ಆಶೀರ್ವಚನ ನೀಡುತ್ತಾ ಅಂತರಾಷ್ಟ್ರೀಯ ಸೇವಾ ಸಂಸ್ಥೆಯಾಗಿ ರೋಟರಿ ಕ್ಲಬ್ ಗ್ರಾಮಾಂತರ ಪ್ರದೇಶದಲ್ಲಿಯೂ ತನ್ನ ಘಟಕಗಳನ್ನು ಸ್ಥಾಪಿಸಿ ಜನ ಸಾಮಾನ್ಯರಿಗೆ ಸೇವೆ ನೀಡಲು ಮುಂದೆ ಬರುತ್ತಿರುವುದು ಸಂತಸದ ವಿಚಾರ ಎಂದು ಶುಭ ಹಾರೈಸಿದರು.

ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಬಿ. ಸಂಜೀವ ಪೂಜಾರಿ ಗುರುಕೃಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಇದೊಂದು ಅವಿಸ್ಮರಣೀಯ ಸಂದರ್ಭ. ನೂತನ ಕ್ಲಬ್ ಅಸ್ಥಿತ್ವಕ್ಕೆ ಬರುವಲ್ಲಿ ಜಿಎಸ್‌ಆರ್ ಕಾರಂತರ ಶ್ರಮ ಸೇವೆ, ಕಾರ್ಯದರ್ಶಿ ಹೆಗ್ಡೆಯವರ ಪ್ರಯತ್ನ ಹಾಗೂ ಇಲ್ಲಿನ ನಿಯೋಜಿತ ಅಧ್ಯಕ್ಷ ಅವಿಲ್ ಮಿನೇಜಸ್, ಕಾರ್ಯದರ್ಶಿ ಪ್ರಭಾಕರ ಪ್ರಭು ಅವರ ಸ್ನೇಹಪೂರ್ವ ಬೆಂಬಲದಿಂದ ಆಗಿದೆ ಎಂದರು.

ವೇದಿಕೆಯಿಂದ ರೋಟರಿ ಕ್ಲಬ್ ಎಕ್ಸ್‌ಟೆನ್‌ಕ್ಷನ್ ಜಿಲ್ಲಾ ಚಯರ್‌ಮೆನ್ ಡಾ| ಕೆ.ಅರವಿಂದ ಭಟ್, ಜಿಲ್ಲಾ ಮೆಂಬರ್‌ಶಿಪ್ ಡೆವಲಪ್‌ಮೆಂಟ್ ಚಯರ್‌ಮೆನ್ ಸತೀಶ್ ಬೋಳಾರ್, ವಲಯ 4ರ ಅಸಿಸ್ಟೆಂಟ್ ಗವರ್ನರ್ ಎ.ಎಂ.ಕುಮಾರ್ ಶುಭ ಹಾರೈಸಿದರು.

ಜಿಎಸ್‌ಆರ್ ಯನ್.ಪ್ರಕಾಶ ಕಾರಂತ ಪ್ರಸ್ತಾವನೆ ನೀಡಿ ಮಾತನಾಡಿ ಕ್ಲಬ್ ಸ್ಥಾಪನೆಯ ಉದ್ದೇಶ ಇನ್ನಷ್ಟು ಜನರಿಗೆ ಸೇವೆ ನೀಡುವುದು. ನೂತನ ಕ್ಲಬ್ಬಿನ ೬೮ ಸದಸ್ಯರ ಪರಿಚಯ ನೀಡಿದರು.

ನೂತನ ಕ್ಲಬ್ ಅಧ್ಯಕ್ಷ ಅವಿಲ್ ಮಿನೇಜಸ್ ಶುಭ ಸಂದೇಶ ನೀಡಿ ಕ್ಲಬ್ ಸದಸ್ಯರು ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಂಡು ಸಾಧ್ಯವಿರುವ ಎಲ್ಲಾ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದಾಗಿ ಭರವಸೆ ನೀಡಿದರು. ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷರು ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.ಕಾರ್ಯದರ್ಶಿ ನಾರಾಯಣ ಹೆಗ್ಡೆ ವಂದಿಸಿದರು.

also read:

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.