• ಡಾ. ಎ.ಜಿ.ರವಿಶಂಕರ್
  • ಅಂಕಣ: ಪಾಕಶಾಲೆಯೇ ವೈದ್ಯಶಾಲೆ

ರಾಗಿ ಎಂದಾಕ್ಷಣ  ರಾಗಿಮುದ್ದೆ, ರಾಗಿಕಾಪಿ ,ರಾಗಿ ಮಣ್ಣಿ ಇತ್ಯಾದಿಗಳು ನೆನಪಾಗುತ್ತವೆ. ಇದು ಅತ್ಯಂತ ಸತ್ವಭಾರಿತವಾಗಿದ್ದು ಎಲ್ಲಾ ವಯೋಮಾನದವರಿಗೂ ಉತ್ತಮ ಪಥ್ಯ ಆಹಾರವಾಗಿದೆ.

  1. ರಾಗಿಯಲ್ಲಿ ಯಥೇಷ್ಟವಾಗಿ ಕ್ಯಾಲ್ಸಿಯಂ ಇರುವುದರಿಂದ ಬೆಳೆಯುತ್ತಿರುವ ಮಕ್ಕಳಿಗೆ ಇದು ಉತ್ತಮ ಆಹಾರವಾಗಿದ್ದು ಇದರಿಂದ ಮಕ್ಕಳ ಮೂಳೆಗಳು ದ್ರುಢವಾಗುತ್ತವೆ ಮತ್ತು ಬೆಳವಣಿಗೆ ಉತ್ತಮವಾಗುತ್ತದೆ.
  2. ರಾಗಿಯಲ್ಲಿ ನಾರಿನ ಅಂಶ ಇದ್ದು ಇದು ಬಹು ಹೊತ್ತಿನ ವರೆಗೆ ಹೊಟ್ಟೆಯಲ್ಲಿ ಇದ್ದು ಬೇಗನೆ ಹಸಿವಾಗುವುದನ್ನು ತಡೆಯುತ್ತದೆ. ಇದರಿಂದಾಗಿ ಶರೀರದ ಅಧಿಕ ತೂಕವನ್ನು ಇಳಿಸಲು ಸಹಕಾರಿಯಾಗುತ್ತದೆ.
  3. ರಾಗಿಯು ಮೇದೋಜೀರಕ ಗ್ರಂಥಿಯನ್ನು ಉತ್ತೇಜಿಸುವ ಮೂಲಕ ಮಧುಮೇಹವನ್ನು ಹತೋಟಿಗೆ ತರಲು ಸಹಕರಿಸುತ್ತದೆ.
  4. ಇದು ರಕ್ತದ ಒತ್ತಡವನ್ನು ಹತೋಟಿಯಲ್ಲಿಡಲು ಸಹಕರಿಸುತ್ತದೆ.
  5. ರಾಗಿಯಲ್ಲಿ ಸ್ವಾಭಾವಿಕವಾಗಿ ಕಬ್ಬಿಣದ ಅಂಶ ಇರುವುದರಿಂದ ಇದು ರಕ್ತ ಹೀನತೆಯನ್ನು ಹೋಗಲಾಡಿಸುತ್ತದೆ.
  6. ರಾಗಿಯು ಚರ್ಮ ಸುಕ್ಕು ಕಟ್ಟುವುದನ್ನು ತಡೆಯುವುದರ ಮೂಲಕ ಯುವಾವಸ್ಥೆಯನ್ನು ಕಾಪಾಡಿಕೊಂಡು ಬರುತ್ತದೆ.
  7. ನಿಯಮಿತವಾಗಿ ರಾಗಿಯನ್ನು ಉಪಯೋಗಿಸುವುದರಿಂದ ನಿದ್ರಾ ಹೀನತೆ ಕಡಿಮೆಯಾಗುತ್ತದೆ.
  8. ರಾಗಿಯು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಮೈಗ್ರೈನ್ ತಲೆನೋವಿನಲ್ಲೂ ಸಹ ಉತ್ತಮ ಪರಿಣಾಮವನ್ನು ನೀಡುತ್ತದೆ.
  9. ಟೈಫಾಯಿಡ್ ,ಮಲೇರಿಯಾ ಮುಂತಾದ ವ್ಯಾಧಿಗಳಿಂದ ಬಳಳುತ್ತಿರುವವರಿಗೆ ಇದು ಉತ್ತಮ ಪಥ್ಯ ಆಹಾರವಾಗಿದೆ.
  10. ಇದು ಶರೀರದಲ್ಲಿನ ಕೆಟ್ಟ ಕೊಬ್ಬನ್ನು ಹೋಗಲಾಡಿಸುವ ಮೂಅಲಕ ಹೃದಯವನ್ನು ರಕ್ಷಿಸುತ್ತದೆ.
  11. ರಾಗಿಯು ಬಾಣಂತಿಯರಲ್ಲಿ ಎದೆಹಾಲಿನ ಉತ್ಪತ್ತಿಯನ್ನು ಅಧಿಕಗೊಳಿಸುತ್ತದೆ.
  12. ರಾಗಿಯು ಜೀರ್ಣ ಕ್ರಿಯೆಯನ್ನು ಉತ್ತೇಜಿಸುವ ಮೂಲಕ ಮಲಬದ್ಧತೆಯನ್ನು ನಿವಾರಿಸುತ್ತದೆ.
Dr. Ravishankar A G

ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಎಂ.ಎಸ್. (ಸ್ನಾತಕೋತ್ತರ) ಪದವೀಧರರಾಗಿರುವ ಡಾ.ರವಿಶಂಕರ ಎ.ಜಿ, ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಮಹಾವಿದ್ಯಾಲಯ ಸ್ನಾತಕೋತ್ತರ ವಿಭಾಗ ಪ್ರಾಧ್ಯಾಪಕರು. ವಿಟ್ಲದಲ್ಲಿ ಚಿಕಿತ್ಸಾಲಯವನ್ನೂ ಹೊಂದಿದ್ದಾರೆ. ಮೂಲವ್ಯಾಧಿ, ಭಗಂಧರ, ಸೊಂಟನೋವು, ವಾತರೋಗ, ಶಿರಶೂಲ ಇತ್ಯಾದಿಗಳಲ್ಲಿ ಕ್ಷಾರಕರ್ಮ, ಅಗ್ನಿಕರ್ಮ, ರಕ್ತಮೋಕ್ಷಣ ಮೊದಲಾದ ವಿಶೇಷ ಚಿಕಿತ್ಸೆ ನೀಡುವುದರಲ್ಲಿ ಪರಿಣತರು.