ಪಿಎಫ್‌ಐ, ಎಸ್.ಡಿ.ಪಿ.ಐ , ಕೆಎಫ್‌ಡಿ ಸಂಘಟನೆಗಳನ್ನು ನಿಷೇಧಿಸಬೇಕು, ಹಿಂದು ಯುವಕರ ಹತ್ಯೆ ಮತ್ತು ಹಲ್ಲೆ ಪ್ರಕರಣಗಳನ್ನು ಸಿಬಿಐಗೆ ಹಸ್ತಾಂತರಿಸಬೇಕು, ಕೋಮು ಹಿಂಸೆಗೆ ಪ್ರಚೋದನೆ ನೀಡುತ್ತಿರುವ ಆರೋಪದಲ್ಲಿರುವ ಸಚಿವ ಬಿ.ರಮಾನಾಥ ರೈ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿ, ಬಿಜೆಪಿ ವತಿಯಿಂದ ಪ್ರತಿಭಟನೆ ಬಂಟ್ವಾಳ ಪುರಸಭೆಯ ಮುಂಭಾಗ ಸೋಮವಾರ ನಡೆಯಿತು.
ಬಿಜೆಪಿ ಜಿಲ್ಲಾ ವಕ್ತಾರ ವಿಕಾಸ್ ಪುತ್ತೂರು ಮಾತನಾಡಿ ಸೆ.7ರಂದು ಪ್ರತಿಭಟನಾರ್ಥವಾಗಿ ನಡೆಯಲಿರುವ ಬೈಕ್ ರ್‍ಯಾಲಿಯನ್ನು ಹತ್ತಿಕ್ಕಲು ಮುಂದಾಗಿರುವ ಸರಕಾರದ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಸಭೆಯ ಬಳಿಕ ರಾಜ್ಯಪಾಲರಿಗೆ ಪುರಸಭಾ ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ್ ಮೂಲಕ ಮನವಿ ಸಲ್ಲಿಸಲಾಯಿತು. ಅಲ್ಪಸಂಖ್ಯಾತ ಮೋರ್ಚಾ ಮುಖಂಡ ರೋನಾಲ್ಡ್ ಡಿಸೋಜ ಮನವಿ ವಾಚಿಸಿದರು.
ಬಿಜೆಪಿ ಮತ್ತು ಸಂಘಪರಿವಾರ ಮುಖಂಡರಾದ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು, ಬಿ. ದೇವದಾಸ ಶೆಟ್ಟಿ, ಜಿ.ಆನಂದ, ರಾಮದಾಸ್ ಬಂಟ್ವಾಳ, ಎ. ಗೋವಿಂದ ಪ್ರಭು, ದಿನೇಶ್ ಭಂಡಾರಿ, ಭಾಸ್ಕರ್ ಟೈಲರ್, ಪ್ರಮೋದ್ ಕುಮಾರ್ ಅಜ್ಜಿಬೆಟ್ಟು, ರಾಜರಾಮ ನಾಯಕ್, ಗೋಪಾಲ ಸುವರ್ಣ, ಸುಗುಣ ಕಿಣಿ, ವಿದ್ಯಾವತಿ, ರವಿರಾಜ್ ಬಿ.ಸಿ.ರೋಡ್, ಖಲೀಲ್ ಅಹ್ಮದ್ ಮತ್ತಿತ್ತರು ನೇತೃತ್ವ ವಹಿಸಿದರು.