ರೋಟರಿ ಜಿಲ್ಲೆ 3181ರಲ್ಲಿ ಲೊರೆಟ್ಟೋದಲ್ಲಿ ನೂತನ ಕ್ಲಬ್ ಅಸ್ತಿತ್ವಕ್ಕೆ ಬರಲಿದೆ. ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೋ ಎಂಬ ಹೆಸರಿನ ಈ ಕ್ಲಬ್ ನ ತಾತ್ಕಾಲಿಕ ಉದ್ಘಾಟನೆ ಕಾರ್ಯಕ್ರಮ ಸೆ.4ರಂದು ಸಂಜೆ 7 ಗಂಟೆಗೆ ನಡೆಯಲಿದೆ. ಇದರ ನಿಯೋಜಿತ ಅಧ್ಯಕ್ಷರಾಗಿ ಅವಿಲ್ ಮಿನೇಜಸ್ ಲೊರೆಟ್ಟೋ ಹಾಗೂ ನಿಯೋಜಿತ ಕಾರ್ಯದರ್ಶಿಯಾಗಿ ಪ್ರಭಾಕರ ಪ್ರಭು ಕರ್ಪೆ ಕಾರ್ಯನಿರ್ವಹಿಸುವರು ಎಂದು ರೋಟರಿ ಗವರ್ನರ್ ವಿಶೇಷ ಪ್ರತಿನಿಧಿ ಎನ್. ಪ್ರಕಾಶ ಕಾರಂತ ತಿಳಿಸಿದರು.
ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಶನಿವಾರ ಸಂಜೆ ಕರೆದ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಲೊರೆಟ್ಟೋ ಹಿಲ್ಸ್ ಘಟಕ ವಿಧ್ಯುಕ್ತ ಉದ್ಘಾಟನೆಗೂ ಮುನ್ನ ಸದಸ್ಯರ ಸಭೆಗಳು, ಮಾರ್ಗದರ್ಶಿ ಸಭೆಗಳನ್ನು ಆಯೋಜಿಸಲಾಗುವುದು ರೋಟರಿ ನಿಯಮಗಳಲ್ಲಿದೆ. ಹೀಗಾಗಿ ಕ್ಲಬ್ ಒಂದರ ವಿಧ್ಯುಕ್ತ ಸ್ಥಾಪನೆಗೂ ಮುನ್ನ ಅದರ ತಾತ್ಕಾಲಿಕ ಉದ್ಘಾಟನೆಯನ್ನು ಮಾಡಲಾಗುತ್ತದೆ. ಲೊರೆಟ್ಟೋ ಹಿಲ್ಸ್ ಘಟಕದಲ್ಲಿ ಕಾರ್ಯನಿರ್ವಹಿಸಲು 70 ಮಂದಿ ಸೇರ್ಪಡೆಯಾಗಿದ್ದಾರೆ ಎಂದು ಹೇಳಿದರು.
ಲೊರೆಟ್ಟೋ ಚರ್ಚ್ ಹಾಲ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಚರ್ಚ್ ಧರ್ಮಗುರು ರೆ.ಫಾ. ಎಲಿಯಾಸ್ ಡಿಸೋಜ ಆಶೀರ್ವಚನ ನೀಡುವರು. ಮುಖ್ಯ ಅತಿಥಿಗಳಾಗಿ ರೋಟರಿ ಜಿಲ್ಲಾ ಕ್ಲಬ್ ಎಕ್ಸ್ ಟೆನ್ಶನ್ ಚೆಯರ್ ಮನ್ ಡಾ. ಅರವಿಂದ ಭಟ್ ಕೆ.ಜಿ, ರೋಟರಿ ಮೆಂಬರ್ ಶಿಪ್ ಡೆವಲಪ್‌ಮೆಂಟ್ ಚೆಯರ್ ಮನ್ ಸತೀಶ್ ಬೋಳಾರ್, ವಲಯ ೪ರ ಅಸಿಸ್ಟೆಂಟ್ ಗವರ್ನರ್ ಎ.ಎಂ.ಕುಮಾರ್ ಭಾಗವಹಿಸುವ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಗವರ್ನರ್ ಎಂ.ಎಂ.ಸುರೇಶ್ ಚಂಗಪ್ಪ ನೆರವೇರಿಸುವರು ಎಂದರು.
ಸುದ್ದಿಗೋಷ್ಠಿಯಲ್ಲಿ ರೋಟರಿ ಕ್ಲಬ್ ಬಂಟ್ವಾಳ ಅಧ್ಯಕ್ಷ ಬಿ.ಸಂಜೀವ ಪೂಜಾರಿ, ಕಾರ್ಯದರ್ಶಿ ಕೆ.ನಾರಾಯಣ ಹೆಗ್ಡೆ, ಉಪಾಧ್ಯಕ್ಷ ಬಸ್ತಿ ಮಾಧವ ಶೆಣೈ, ನೂತನ ಕ್ಲಬ್ ನಿಯೋಜಿತ ಅಧ್ಯಕ್ಷ ಅವಿಲ್ ಮಿನೇಜಸ್ ಲೊರೆಟ್ಟೋ, ನಿಯೋಜಿತ ಕಾರ್ಯದರ್ಶಿ ಪ್ರಭಾಕರ ಪ್ರಭು ಕರ್ಪೆ ಉಪಸ್ಥಿತರಿದ್ದರು.
| ಸಾಹಿತ್ಯದಿಂದ ಸಾಮರಸ್ಯ ಆಶಯ | ಎರಡು ದಿನ ವಿಚಾರ ಮಂಡನೆ, ಸಾಂಸ್ಕೃತಿಕ ಕಾರ್ಯಕ್ರಮ (more…)