ವಿಶೇಷ ಸೃಷ್ಟಿಗಳ ಲೋಕದಲ್ಲಿ -ಅಂಕಣ18: ವಿಶೇಷ ಸೃಷ್ಟಿಯನ್ನು ನವಭಾರತವು ಮಾಡಿ…

ಜಿಲ್ಲೆಯ ಪತ್ರಕರ್ತರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದವರು ಪದ್ಯಾಣ ಗೋಪಾಲಕೃಷ್ಣ (1928-1997). .ಗೋ. ಎಂದೇ ಚಿರಪರಿಚಿತರಾಗಿದ್ದ ಅವರು, ಕನ್ನಡದ ಪ್ರಸಿದ್ಧ ದಿನಪತ್ರಿಕೆಗಳಲ್ಲಿ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಕೆಲಸ ಮಾಡಿದವರು. ನೇರ, ನಿಷ್ಠುರ ನಡೆಯ .ಗೋ. ಅವರು ಪತ್ರಕರ್ತನಾಗಿ ವೃತ್ತಿಜೀವನದುದ್ದಕ್ಕೂ ಸಿದ್ಧಾಂತ ಹಾಗೂ ಪ್ರಾಮಾಣಿಕತೆಯ ಹಾದಿ ಹಿಡಿದಿದ್ದರು. ವೃತ್ತಪತ್ರಿಕಾ ಜಗತ್ತಿನ ಎಲ್ಲ ಮುಖಗಳ ಅನುಭವವನ್ನು ವೃತ್ತಿನಿರತ ಪತ್ರಿಕೋದ್ಯೋಗಿಯಾಗಿ ಕಂಡ ನಾನಾ ಮುಖಗಳೂ, ಅನುಭವಿಸಿದ ನೋವು, ನಲಿವುಗಳನ್ನು ನಿರ್ಮೋಹದಿಂದ, ವಸ್ತುನಿಷ್ಠವಾಗಿ ಬರೆದ ವಿಶೇಷ ಸೃಷ್ಟಿಯ ಲೋಕದಲ್ಲಿ ವೃತ್ತಪತ್ರಿಕೆಗಳ ಕಾಲಂ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯದಲ್ಲಿ ಒಂದು ವಿಶಿಷ್ಟ ಬರವಣಿಗೆಇದು .ಗೋ. ಆತ್ಮಕತೆಯ ಭಾಗವೂ ಹೌದು. 2005ರಲ್ಲಿ ಪುಸ್ತಕವಾಗಿಯೂ ಪ್ರಕಟಗೊಂಡಿವೆ. ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯನಡ್ಕದಲ್ಲಿ ಜನಿಸಿದ .ಗೋ, ಅವರ ಕೃತಿಯನ್ನು ಬಂಟ್ವಾಳನ್ಯೂಸ್ ಓದುಗರಿಗಾಗಿ ಒದಗಿಸಿಕೊಟ್ಟವರು ಗಲ್ಫ್ ನಲ್ಲಿ ಉದ್ಯೋಗಿಯಾಗಿರುವ ಸಾಹಿತ್ಯಪ್ರೇಮಿ .ಗೋ ಅವರ ಪುತ್ರ ಪದ್ಯಾಣ ರಾಮಚಂದ್ರ. (.ರಾಮಚಂದ್ರ). ಲೇಖನಮಾಲೆಯ 18ನೇ ಕಂತು ಇಲ್ಲಿದೆ. ಅಂಕಣಮಾಲೆಯಾಗಿ ಪ್ರಕಟಗೊಂಡು, ಪುಸ್ತಕರೂಪವಾಗಿ ಹೊರಬಂದ ವಿಶೇಷ ಸೃಷ್ಟಿಗಳ ಲೋಕದಲ್ಲಿ ಪುಸ್ತಕದ ಮರುಪ್ರಕಟಣೆ.

ವಿಶೇಷ ಸೃಷ್ಟಿಗಳ ಲೋಕದಲ್ಲಿ -ಅಂಕಣ18: ವಿಶೇಷ ಸೃಷ್ಟಿಯನ್ನು ನವಭಾರತವು ಮಾಡಿ… 

ಅನುಸರಿಸುವ ವಿಧಾನ ತಿಳಿಯಲಾಗಲಿಲ್ಲ. ‘ವಹಿಸಿದ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸಿದರೆ ಬೇರಾವ ತೊಂದರೆಗಳೂ ಬರಲಾರವುಎಂಬ ನಂಬುಗೆ ನನ್ನಲ್ಲಿ ಬೆಳೆದಿದ್ದುದೂ ಆಕೊರತೆಯ ಒಂದು ಮುಖ್ಯ ಕಾರಣವಾಗಿತ್ತು.

pa gO cartoon by Harini

ಹೊಸತೇನಾದರೂ ಸಿಕ್ಕಿದರೆ, ಆರಂಭದಲ್ಲಿ ಅತ್ಯಾಸಕ್ತಿ ತೋರಿ, ಕುತೂಹಲ ತಣಿದ ಮೇಲೆ ಆಸಕ್ತಿಯನ್ನು ತೊರೆಯುವ ಸಂಜೀವ ಕುಡ್ವರ ಜಾಯಮಾನದ ಪರಿಚಯ ನನಗೆ ಇದ್ದಿರಲಿಲ್ಲ. (ಆದರೆ ಮೇಲ್ವಿಚಾರಕನ ಅಧಿಕಾರವನ್ನುಗಳಿಸಿದ್ದ ಪ್ರಸರಣಾ ವಿಭಾಗದ ಮುಖ್ಯಸ್ಥ ಕಾಮತ್ ರಿಗೆ ಚೆನ್ನಾಗಿ ಇತ್ತು.) ಅಂತಾ, ಆ ಮೊದಲು ನಡೆದಿದ್ದ ಹಲವು ಹಸ್ತಕ್ಷೇಪಗೊಂದಲಗಳ ಸುಳಿವು ಸಿಕ್ಕಿರಲಿಲ್ಲ.ಕುಡ್ವರ ಸಮೀಪ ದಿನಕ್ಕೆ ಐವತ್ತು ಬಾರಿ ಸುಳಿದುವರದಿ ಸಲ್ಲಿಸುವಕೆಲಸವೇ ಮುಖ್ಯವಾಗಿದ್ದ ಅ ಮಹಾಶಯನಶಕ್ತಿಯ ಅರಿವೂ ಬರಲಿಲ್ಲ.
ಯಾವುದಾದರೂಹೊಸಪ್ರಯೋಗದ ಬಗ್ಗೆ (ಯಾವುದೋ ಕಾರಣದಿಂದ) ಅತೃಪ್ತರಾದವರು, ಆ ಬಗ್ಗೆ ದೊರೆಗೆ ದೂರು ಸಲ್ಲಿಸಲು ಕಾಮತರನ್ನೇ ಉಪಯೋಗಿಸಿಕೊಳ್ಳುತ್ತಿದ್ದರು. ಯುಕ್ತಾಯುಕ್ತತೆಯ ಪರಾಮರ್ಶೆ ಮಾಡದೆಹಲವಾರುಓದುಗರ ಮೌಖಿಕ ಅಭಿಪ್ರಾಯದ ಹೆಸರಿನಲ್ಲಿ ದೂರು ಮುಟ್ಟುತ್ತಿತ್ತು. ಬಂದ ದೂರಿನ ವಿಚಾರಣೆ ಕೂಡಾ ಮಾಡದೆ ಇತ್ತಗೋಪಾಲಕೃಷ್ಣರೇ,ಎಂ.ಡಿ.ಯವರು ಹೇಳಿದಾರೆಅದು ಇನ್ನು ಮುಂದೆ ಬೇಡವಂತೆಎಂಬಪರಿಹಾರ ಸಂದೇಶವನ್ನು ಅದೇ ದಿನ ನನಗೆ ಮುಟ್ಟಿಸುವಾಗ, ಕಾಮತರ ಮುಖದಲ್ಲಿ ಕಾಣುತ್ತಿದ್ದನಗೆಯಾವ ವರ್ಗದ್ದೆಂದು ವರ್ಣಿಸುವ ಶಕ್ತಿ (ಇಂದಿಗೂ) ನನಗೆ ದೊರಕಿಲ್ಲ.
ಹಾಗೆಯೇ, ಏನನ್ನಾದರೂ ರದ್ದು ಮಾಡಬೇಕಾದರೆ, ಸಂಬಂಧಿಸಿದ ವ್ಯಕ್ತಿಯನ್ನು ಕರೆದು ನೇರ ಅಪ್ಪಣೆ ಕೊಡದೆಬೇರೆಯವರ ಮೂಲಕವೇ ಅಪ್ಪಣೆ ಜಾರಿ ಮಾಡುವ ಸುತ್ತು ಬಳಸು ವಿಧಾನ ಸಂಜೀವ ಕುಡ್ವರಿಗೆ ಏಕೆ ಪ್ರಿಯವಾಯಿತು ?ಎಂಬುದೂ ಗೊತ್ತಾಗಿಲ್ಲ.
ಹಿತ್ತಾಳೆ ದೂರುಗಂಟೆಯ ಬಲ ಮತ್ತು ದೌರ್ಬಲ್ಯಗಳನ್ನು ಎರಡು ನಿರ್ದಿಷ್ಟ ಪ್ರಕರಣಗಳ ನಿದರ್ಶನಗಳಿಂದ ತಿಳಿಯಬಹುದು.
ಪ್ರಕರಣ ಒಂದು: ಸಂಪಾದಕೀಯವಿರುವ ಪುಟಕ್ಕೆ ಬೇಕಾದ ಲೇಖನ, ಪತ್ರಸಂಗ್ರಹ ಇತ್ಯಾದಿಗಳನ್ನು ಒದಗಿಸುವುದರ ಜೊತೆಗೆ ಆ ಪುಟದ ಕೊನೆಯ ಮೂಲೆಯಲ್ಲಿಕಳೆದ ವರ್ಷಇದೇ ದಿನಎಂಬ ಪುಟ್ಟ ಅಂಕಣವನ್ನೂ ಪ್ರಾರಂಭಿಸಿದ್ದೆ. ಅದು ಬೇರೆ ಪತ್ರಿಕೆಗಳಲ್ಲಿ ಬರುತ್ತಿದ್ದಶತಮಾನಅರ್ಧ ಶತಮಾನಕಾಲು ಶತಮಾನಗಳ ಹಿಂದಿನ ಪ್ರಸ್ತಾಪಗಳಿಗಿಂತ, ಸ್ವಲ್ಪವೇ ಭಿನ್ನವಾಗಿತ್ತು. ಅಂಕಣ ತುಂಬಿಸಲು ಬೇಕಾದ ಪತ್ರಿಕೆಯ ಫೈಲ್ಕೇಳಿದ ಕೂಡಲೆನನಗೆ ದೊರೆತುದು ( ಹಿಂದೊಮ್ಮೆ ಅದನ್ನು ಕೇಳಿಯೂ ಪಡೆಯಲಾಗದಿದ್ದವರ) ಅಸೂಯೆಗೆ ಕಾರಣವಾಯಿತು. ಹೇಗಾದರೂ, ನನ್ನಮಿತಿಮೀರಿದ ಹಾರಾಟವನ್ನು ತಡೆಯುವ ಸಲುವಾಗಿ ಕಾಯುತ್ತಿದ್ದ ಅವಕಾಶ ಅವರಿಗೆ ಒಂದೇ ಒಂದು ತಿಂಗಳಲ್ಲಿ ಸಿಕ್ಕಿತು. ಆ ಫೆಬ್ರವರಿ ತಿಂಗಳಲ್ಲಿ 29 ದಿನಗಳಿದ್ದವು!
ಅಂದಿನ ವೈಶಿಷ್ಟ್ಯವನ್ನು ಎತ್ತಿ ತೋರಿಸಲು, ಅಂಕಣದ ( ಶೀರ್ಷಿಕೆಯನ್ನು ಹಾಗೇ ಉಳಿಸಿಕೊಂಡರೂ) ಒಳಗಡೆಕಳೆದ ವರ್ಷ ಈ ದಿನವೇ ಇರಲಿಲ್ಲ! ಏಕೆ? ಕಾಲಗಣನಾ ವ್ಯವಸ್ಥೆಯ ಒಂದು ನಿರ್ಬಂಧದಿಂದಾಗಿ ಉಂಟಾದ ಆ ತೊಡಕಿನ ವಿವರಗಳನ್ನು ನಾಳೆ ಇದೇ ಪುಟದಲ್ಲಿ ಬರಲಿರುವ ಲೇಖನದಿಂದ ತಿಳಿಯಬಹುದುಎಂದು ಪ್ರಕಟಿಸಲಾಗಿತ್ತು.
ಅಂಕಣದ ಶೀರ್ಷಿಕೆಯನ್ನು ಮಾತ್ರವೇ ಲೆಕ್ಕಕ್ಕೆ ತೆಗೆದುಕೊಂಡದೂರುಸಂದೇಶಪ್ರಚೋದಕರು, ಕಾಮತರನ್ನು ಬಳಸಿಕೊಳ್ಳಲು ತಡಮಾಡಲಿಲ್ಲ. “ಇಂಥಾದ್ದೆಲ್ಲ ತಪ್ಪು ಈಗೀಗ ಜಾಸ್ತಿಯಾಗುತ್ತಿದೆಎನ್ನುವ ದೂರು ಓದುಗರಿಂದ ಬಂದಿತ್ತುಎನ್ನುವ ಪಲ್ಲವಿ ಪುನರಾವರ್ತಿಸಿ, ‘ಸೂಕ್ತಆಜ್ಞೆಯನ್ನು ಹೊತ್ತುತಂದರು.
ಕಾರ್ಯಾಚರಣೆಯ ಸುಳಿವು ಮೊದಲೇ ಸಿಕ್ಕಿತ್ತು. ನಾನು ಕುಳಿತಿದ್ದಲ್ಲಿಗೆ ಬಂದ ಕೂಡಲೇನಾಳೆಯಿಂದಕಳೆದ ವರ್ಷಬೇಡಾಂತ ಎಂ.ಡಿ. ಹೇಳಿದ್ದಾರೆ. ಅಲ್ಲವೊ ಕಾಮತರೆ ?” ಎಂದು ರಾಗವೆಳೆದು, ಎದ್ದಿದ್ದ ಒಡಲುರಿಯನ್ನು ಒಂದಷ್ಟು ಕುಗ್ಗಿಸಿಕೊಂಡೆ.
ದೂರುಗುಳಿಯ ಮುಖಭಂಗವಾಗುವ ಸಂದರ್ಭ ಸಿಕ್ಕರೆ ಬಿಡಬಾರದು ಎಂಬ ನಿರ್ಧಾರ ಆಗಲೆ ಮೂಡಿತು. ಅವಕಾಶವೂ ಅನಾಯಾಸವಾಗಿ ಎಣಿಸಿದ್ದಕ್ಕಿಂತಲೂ ಬೇಗನೆಬಂದೊದಗಿತು.
ಇಂಡಿಯನ್ ಎಕ್ಸ್ ಪ್ರೆಸ್ ನ ಮುಂಬಯಿ ಆವೃತ್ತಿಯ ಮುಖ್ಯ ವರದಿಗಾರ ಬಿ.ಎಸ್.ವಿ.ರಾವ್, ನವಭಾರತಕ್ಕೂ ವರದಿಗಾರರಾಗಿದ್ದರು. ತನ್ನಹೆಚ್ಚುಗಾರಿಕೆಯ ಪ್ರಯೋಜನವೆಲ್ಲವನ್ನೂ ನವಭಾರತದಿಂದ ಪಡೆಯುತ್ತಲೂ ಇದ್ದರು. ಅವರ ಟೆಲಿಗ್ರಾಂಗಳನ್ನು ಯಾವುದೇ ಹಸ್ತಕ್ಷೇಪ ಮಾಡದೆ ಅನುವಾದಿಸಬೇಕೆಂಬ ಕಟ್ಟಪ್ಪಣೆ ಕುಡ್ವರದು. ಶುದ್ಧ ತಪ್ಪನ್ನೇ ಕಳುಹಿಸಿದ್ದರೂ, ‘ಬಾಯಿಮುಚ್ಚಿಕೊಂಡು ಬರೆಯಬೇಕಾದಪರಿಸ್ಥಿತಿ ಇತ್ತು. ( ಕೆಲವೊಮ್ಮೆ ಅವರ ಟೆಲಿಗ್ರಾಂಗಳ ಕಂತೆ ನನ್ನ ಬಳಿ ಸೇರಿದಾಗ,ನಾನು ವಹಿಸುತ್ತಿದ್ದ ಸ್ವಾತಂತ್ರ್ಯ ಯಾರ ಅರಿವಿಗೂ ಬರುತ್ತಿರಲಿಲ್ಲವೆಂಬ ಮಾತು ಬೇರೆ.)
ರಕ್ಷಣಾ ಮಂತ್ರಿ ವಿ.ಕೆ.ಕೃಷ್ಣ ಮೆನನ್ ಮತ್ತು ಸೇನಾ ದಂಡನಾಯಕ ಜನರಲ್ ತಿಮ್ಮಯ್ಯನವರೊಳಗಿನ ಭಿನ್ನಾಭಿಪ್ರಾಯಗಳು ಪರಾಕಾಷ್ಠೆಗೇರಿದ್ದ ದಿನಗಳು ಅವು. ಮೆನನ್ ರ ಬಗ್ಗೆ ( ಇಂಡಿಯನ್ ಎಕ್ಸ್ ಪ್ರೆಸ್ ಗೊಯೆಂಕಾರಂತೆ) ಸಂಜೀವ ಕುಡ್ವರಿಗೂಹಲವು ಕಾರಣಗಳಿಂದ ಸದಭಿಪ್ರಾಯವಿರಲಿಲ್ಲವೆಂಬ ವಿಷಯ ತಿಳಿದೇ ಇದ್ದ ವರದಿಗಾರ ರಾವ್, ‘ಸಚಿವ ಸ್ಥಾನಕ್ಕೆ ಮೆನನ್ ರಾಜೀನಾಮೆ ಸಂಭವಎಂಬ ಅರ್ಥ ಬರುವ ( ದೆಹಲಿ ಮೂಲಗಳನ್ನು ಅವ್ಯಕ್ತವಾಗಿ ಉಲ್ಲೇಖಿಸಿದ) ವರದಿಯನ್ನು ಒಂದು ದಿನ ಕಳುಹಿಸಿದರು.
ಸೂಕ್ಷ್ಮವಿಚಾರದ ಟೆಲಿಗ್ರಾಂ ಪ್ರಕಾಶಕರ ಅವಗಾಹನೆಗೆ ಹೋಯಿತು. ಮೊದಲ ಎರಡು ಸಾಲುಗಳನ್ನು ಅವಸರದಲ್ಲಿ ಓದಿ ಮುಂದಿನ ಸಾಲುಗಳ ವಿಷಯವನ್ನು ತನಗೆ ಬೇಕಾದಂತೆ ಕಲ್ಪಿಸಿಕೊಂಡ ಸಂಜೀವ ಕುಡ್ವರ
ನ್ಯೂಸ್ ನ ಟ್ರಾನ್ಸ್ ಲೇಶನ್ ಮತ್ತು ಈವತ್ತಿನ ಎಡಿಟೋರಿರಲ್ ನಾನೇ ಡಿಕ್ಟೇಟ್ ಮಾಡ್ತೇನೆ. ಗೋಪಾಲಕೃಷ್ಣ ಬರಲಿ. ಮತ್ತೆ ಬೇರೆ ಎಡಿಟೋರಿಯಲ್ ಯಾವುದಾದ್ರೂ ಬರೆದಿದ್ರೆ ಅದನ್ನು ಸ್ಟ್ರೈಕ್ ಮಾಡಲಿಎಂದು ತಿಳಿಸಿ, ನನ್ನನ್ನು ಅವರ ಚೇಂಬರಿಗೆ ಕರೆಸಿಕೊಂಡರು.
ಅವರ ವಾಕ್ಯಗಳನ್ನು ನನ್ನ ಕೈಬರಹದಲ್ಲಿ ಮೂಡಿಸಿದ್ದ ವರದಿ ರಕ್ಷಣಾ ಮಂತ್ರಿ ಕೃಷ್ಣಮೆನನ್ ರಾಜೀನಾಮೆ’ (ಮುಂಜಾಗರೂಕತೆಯ ಪ್ರಶ್ನಾರ್ಥಕ ಚಿಹ್ನೆಸಂಭವಶಬ್ದಇವಾವವೂ ಇಲ್ಲದೆ) ಎಂಬ ತಲೆಬರಹ ಪಡೆದಿತ್ತು. ಸಂಪಾದಕೀಯವೂ ಅದೇ ಧಾಟಿಯಲ್ಲಿತ್ತು.
ಸಂಪಾದಕೀಯವನ್ನು ಯಾವಾಗಲೂ ಬರೆಯುತ್ತಿದ್ದ ಹಿರಿಯರು, ಅಂದಿನ ಬದಲಾವಣೆ ಕಂಡಾಗಇವನು ಯಾರೋ ಒಬ್ಬ ಹೊಸ ಮಗ ನನಗೆ ಹುಟ್ಟಿಕೊಂಡಎಂದು ಆಡಿಕೊಂಡಿದ್ದರು. (-ಕೈ ಬರಹ ಮಾತ್ರವೇ ನನ್ನದು ಎಂದು ತಿಳಿಯದೆ!)
ಕೃಷ್ಣ ಮೆನನ್ ರಾಜೀನಾಮೆ ಕೊಟ್ಟೇ ಇರಲಿಲ್ಲ. ದೇಶದ ಬೇರಾವ ಪತ್ರಿಕೆಯೂ ಮಾಡದಿದ್ದ ವಿಶೇಷ ಸೃಷ್ಟಿಯನ್ನು ಮಾಡಿ, ಆಭಾಸಕ್ಕೂ ಎಡೆಮಾಡಿತ್ತು.
ಕೃತ್ಯದ ಮೂಲಕರ್ತೃ ಯಾರೆಂದು ಗೊತ್ತಿಲ್ಲದೆ, ತನ್ನ ಎಂದಿನ ಚಾಳಿಯಲ್ಲೇ ದೂರು ಕೊಂಡೊಯ್ದ ಕಾಮತರಿಗೆ ಆದ ಮುಖಭಂಗದ ವರದಿಯನ್ನು ಸ್ವಾರಸ್ಯವಾಗಿ ಇತರರಿಗೆ ವರ್ಣಿಸುವ ಕೆಲಸ ನನ್ನದಾಗಿತ್ತು (ಅದಕ್ಕಾಗಿ ಇಂದಿನವರೆಗೂ ಪಶ್ಚಾತ್ತಾಪ ಆಗಿಲ್ಲ)
ಆಗಿದ್ದ ಅಚಾತುರ್ಯವನ್ನು ಪರಿಹರಿಸುವತ್ತಲೂ ಉತ್ಸಾಹದಿಂದ ಮುಂದಾಗಿ, ‘ವಿವರಣೆಕ್ಷಮಾಪಣೆಇತ್ಯಾದಿಗಳನ್ನು ಮರುದಿನ ಬರೆದುಕೊಟ್ಟಿದ್ದೆ.
(ಮುಂದಿನ ಭಾಗದಲ್ಲಿ)
ಇಲ್ಲಿ ವ್ಯಕ್ತವಾದ ವಿಚಾರಗಳೆಲ್ಲವೂ ಲೇಖಕರಿಗೆ ಸಂಬಂಧಿಸಿದ್ದಾಗಿದೆ. ಬಂಟ್ವಾಳನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ.
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts