ಬಂಟ್ವಾಳ ನಗರ ಹಾಗೂ ಬಂಟ್ವಾಳ ಮೂಡ ಕ್ಲಸ್ಟರ್‌ಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ವಿದ್ಯಾಗಿರಿಯ ಎಸ್.ವಿ.ಎಸ್. ಇಂಗ್ಲೀಷ್ ಶಾಲೆಯಲ್ಲಿ ಆಗಸ್ಟ್ 21ರಂದು ಶಾಲಾ ಸಂಚಾಲಕ ಭಾಮಿ ವಿಠಲ್‌ದಾಸ್ ಶೆಣೈ ಉದ್ಘಾಟಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ, ಸಮೂಹ ಸಂಪನ್ಮೂಲ ಕೇಂದ್ರ ಬಂಟ್ವಾಳ ನಗರ ಹಾಗೂ ಬಂಟ್ವಾಳ ಮೂಡ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಿತು.
ಶಿಕ್ಷಣ ಸಂಯೋಜಕ ಶ್ರೀಕಾಂತ್ ಪ್ರಾಸ್ತವಿಕವಾಗಿ ಮಾತನಾಡಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶಾಲೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಶ್ರೀಧರ್ ಬಿ., ಉಪಾಧ್ಯಕ್ಷೆ ರೂಪಾ ಶೆಟ್ಟಿ, ಕೋಶಾಧಿಕಾರಿಗಳಾದ ಶಾಹುಲ್ ಹಮೀದ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಶಾಲಾ ಆಡಳಿತಾಧಿಕಾರಿ ಐತಪ್ಪ ಪೂಜಾರಿ, ಪ್ರಾಥಮಿಕ ಶಾಲೆಯ ಮುಖ್ಯೊಪಾಧ್ಯಾಯಿನಿ ಸುಜಾತ ಬಿ., ಸಿ.ಆರ್.ಪಿ. ರೇಷ್ಮಾ ಉಪಸ್ಥಿತರಿದ್ದರು. ಶಿಕ್ಷಕ ಹರಿಪ್ರಸಾದ್ ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಸೋಮನಾಥ ಭಟ್ ಸ್ವಾಗತಿಸಿದರು. ಸಿ.ಆರ್.ಪಿ. ಉಷಾ ವಂದಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…