ಮಾಣಿಲ ಶ್ರೀ ಮಹಾಲಕ್ಷ್ಮೀ ಸೇವಾ ಸಮಿತಿಯ ವತಿಯಿಂದ ಸೆಪ್ಟೆಂಬರ್ 19ರಂದು ಬಿ.ಸಿ.ರೋಡಿನ ಕುಲಾಲ ಸಮುದಾಯ ಭವನದಲ್ಲಿ ಶ್ರೀ ಗುರು ಪಾದುಕಾ ಪೂಜೆ ಹಾಗೂ ಶ್ರೀಧಾಮ ಸೇವಾ ಪಕಲ್ಪದ ಉದ್ಘಾಟನಾ ಸಮಾರಂಭ ನಡೆಯಲಿದ್ದು ಅದರ ಆಮಂತ್ರಣ ಪತ್ರ ಬಿಡುಗಡೆ ಭಾನುವಾರ ಮಾಣಿಲ ಕ್ಷೇತ್ರದಲ್ಲಿ ನಡೆಯಿತು.
ಶ್ರೀ ಮೋಹನಾದಾಸ ಪರಮಹಂಸ ಸ್ವಾಮೀಜಿ ಆಮಂತ್ರಣ ಪತ್ರ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಬಳಿ ಸೇವಾ ಸಮಿತಿ ಯ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಕಾರ್ಯಕ್ರಮದ ಕುರಿತಾಗಿ ಮಾರ್ಗದರ್ಶನ ಮಾಡಿದರು. ಮಾಣಿಲ ಶ್ರೀಧಾಮದ ವೇದಮೂರ್ತಿ ನಯನಕೃಷ್ಣ ಭಟ್ ಅಯವರ ನೇತೃತ್ವದಲ್ಲಿ ಶ್ರೀ ಗುರು ಪಾದಕಾ ಪೂಜೆ ನಡೆಯಲಿದ್ದು ಸೇವೆ, ಸಂಸ್ಕಾರ, ಸಂಸ್ಕೃತಿಯಿಯಿಂದ ನಿಸರ್ಗದತ್ತ ಎನ್ನುವ ಧ್ಯೇಯವಾಕ್ಯದಡಿ ಸೇವಾಕಾರ್ಯಗಳನ್ನು ನಡೆಸುವ ಸಲುವಾಗಿ ಶ್ರೀಧಾಮ ಸೇವಾ ಪ್ರಕಲ್ಪವು ಉದ್ಘಾಟನೆಗೊಳ್ಳಲಿದೆ. ಈ ಸಂದರ್ಭ ಸೇವಾ ಸಮಿತಿಯ ಅಧ್ಯಕ್ಷ ಮಚ್ಚೇಂದ್ರ ಸಾಲ್ಯಾನ್ ಕಾರ್ಯದರ್ಶಿ ಕೇಶವ ಬಂಗೇರ, ಸಲಹೆಗಾರ ದಾಮೋದರ ಬಿ.ಎಂ. ಉಪಾಧ್ಯಕ್ಷರಾದ ಪುರುಷ ಸಾಲ್ಯಾನ್ ಶಂಭೂರು, ಪುಷ್ಪರಾಜ ಶೆಟ್ಟಿ, ಕೃಷ್ಣ ಶ್ಯಾಮ್, ಕಾರ್ಯಕಾರಿ ಸಮಿತಿ ಸದಸ್ಯರಾದ ರಾಜ್‌ಕುಮಾರ್, ಕಾರ್ಯದರ್ಶಿ ಸತೀಶ್‌ಶೆಟ್ಟಿ ಹಾಜರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…