ಇರಾ ವಲಯ ಬಂಟರ ಸಂಘದ ವಾರ್ಷಿಕೋತ್ಸವ ಹಾಗೂ ಪದಗ್ರಹಣ ಇತ್ತೀಚೆಗೆ ಇರಾ ಸೋಮನಾಥೇಶ್ವರ ದೇವಸ್ಥಾನದ ವೇದಿಕೆಯಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ವಿವೇಕ್ ಶೆಟ್ಟಿ ನಗ್ರಿಗುತ್ತು ಮಾತನಾಡಿ, ಬಂಟ್ವಾಳ ತಾಲೂಕು ಬಂಟರ ಸಂಘಗಳ ವಲಯಗಳಲ್ಲಿ ಇರಾ ವಲಯ ಅತ್ಯಂತ ಚಿಕ್ಕದ್ದು. ಆದರೆ ಈ ಸಂಘಟನೆ 13 ವರ್ಷಗಳಲ್ಲಿ ನಡೆಸಿದ ಚಟುವಟಿಕೆ ಶ್ಲಾಘನೀಯ. ನಿರಂತರ ಕ್ರಿಯಾಶೀಲ ಯುವಕರ ತಂಡ ಇರಾ ವಲಯದದಲ್ಲಿದೆ. ಕೇವಲ ಸಂಘಟನೆಯಷ್ಟೇ ಮುಖ್ಯವಲ್ಲ ಸಾಮಾಜಿಕ ಕಾರ್ಯದಲ್ಲೂ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು ಎಂದರು.
ನೇಮಿರಾಜ್ ರೈ ಬೋಳಂತೂರು ಸಭಾಧ್ಯಕ್ಷತೆ ವಹಿಸಿದ್ದರು. ಮಖ್ಯ ಅತಿಥಿಗಳಾಗಿ ಚಂದ್ರಹಾಸ ಶೆಟ್ಟಿ ರಂಗೋಲಿ, ಕಲ್ಲಡ್ಕ ಬಂಟರ ಸಂಘದ ಅಧ್ಯಕ್ಷರಾದ ಪದ್ಮನಾಭ ರೈ, ವಿಟ್ಲ ಬಂಟರ ಸಂಘದ ಅಧ್ಯಕ್ಷ ಭಾಸ್ಕರ ಶೆಟ್ಟಿ ವಿಟ್ಲ, ಮಾಣಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ರೈ ಕಲ್ಲಾಜೆ ಉಪಸ್ಥಿತರಿದ್ದರು.
ನೂತನ ಪದಾಧಿಕಾರಿಗಳ ಪದಗ್ರಹಣ ನಡೆದು ಗೌರವಾಧ್ಯಕ್ಷರಾಗಿ ಮಹಾಬಲ ರೈ ಬೋಳಂತೂರು ಹೊಸಮನೆ, ಅಧ್ಯಕ್ಷರಾಗಿ ಚಂದ್ರಹಾಸ ರೈ ಬಾಲಾಜಿಬೈಲು, ಉಪಾಧ್ಯಕ್ಷರಾಗಿ ಮನೋಹರ ಅಡ್ಯಂತಾಯ ಬೋಳಂತೂರುಗುತ್ತು, ಕಾರ್ಯದರ್ಶಿಯಾಗಿ ಸುರೇಶ್ ರೈ ಡಿ., ಕೋಶಾಧಿಕಾರಿಯಾಗಿ ರಾಜಶೇಖರ ರೈ ಇರಾಗುತ್ತು, ಜೊತೆ ಕಾರ್ಯದರ್ಶಿಯಾಗಿ ರಾಜೇಶ್ ಶೆಟ್ಟಿ ಮಂಚಿ, ಸಂಘಟನಾ ಕಾರ್ಯದರ್ಶಿಯಾಗಿ ಪ್ರವೀಣ್ ಶೆಟ್ಟಿ ಸಂಪಿಲ ಅಧಿಕಾರ ವಹಿಸಿಕೊಂಡರು.
ಬಂಟರ ಸಂಘ ಇರಾ ವಲಯದ ಸ್ಥಾಪಕಾಧ್ಯಕ್ಷ ಜಗದೀಶ್ ಶೆಟ್ಟಿ ಇರಾ ಗುತ್ತು ಪ್ರಸ್ತಾವಿಕವಾಗಿ ಮಾತನಾಡಿದರು. ಯತಿರಾಜ್ ಶೆಟ್ಟಿ ಸಂಪಿಲ ಸ್ವಾಗತಿಸಿದರು. ಉಮಾನಾಥ ರೈ ಮೆರವು ಕಾರ್ಯಕ್ರಮ ನಿರ್ವಹಿಸಿದರು. ಸುರೇಶ ರೈ ವಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಇರಾ ಬಂಟರ ಸಂಘದ ಕಲಾವಿದರಿಂದ ಮಹಿಷಮರ್ಧಿನಿ ಯಕ್ಷಗಾನ ಪ್ರದರ್ಶನಗೊಂಡಿತು.
ಸನ್ಮಾನ, ಪ್ರತಿಭಾ ಪುರಸ್ಕಾರ
ಶಾಶ್ವತ್ ಭಂಡಾರಿ, ನಯನ್ ಶೆಟ್ಟಿ ಸೇಕಜೆ, ಆದರ್ಶ್ ಪಕ್ಕಳ ಕುರಿಯಾಡಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವಿವಿಧ ಕ್ಷೇತ್ರದ ಸಾಧಕರಾದ ಸರಸ್ವತಿ ರೈ ಬೋಳಂತೂರು ಗುತ್ತು, ಜಗನ್ನಾಥ ಪಕ್ಕಳ ತಾಳಿತ್ತಬೆಟ್ಟು, ಸುಪ್ರೀತಾ ಜಯಪ್ರಸಾದ್ ಶೆಟ್ಟಿ ಅಲ್ಕಿರು ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿ ವೇತನ, ಆರ್ಥಿಕ ನೆರವು ವಿತರಿಸಲಾಯಿತು.